
ಬೆಂಗಳೂರು (ಏ. 03): ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಶುರುವಾಗಿದ್ದರೆ ಅತ್ತ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ನಡೆಯುತ್ತಿದೆ. ಐಪಿಎಲ್ನಲ್ಲಿ ಅವಕಾಶ ಸಿಗದ ಕೆಲ ವಿದೇಶಿ ಆಟಗಾರರು ಪಿಎಸ್ಎಲ್ನಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್ ಕೂಡ ಪಾಕಿಸ್ತಾನ ಸೂಪರ್ ಲೀಗ್ 2026 ರಲ್ಲಿ ಆಡುತ್ತಿದ್ದಾರೆ. ಏಪ್ರಿಲ್ 2 ರಂದು, ವಾರ್ನರ್ ನಾಯಕತ್ವದ ಕರಾಚಿ ಕಿಂಗ್ಸ್ ತಂಡ ರಾವಲ್ಪಿಂಡಿಜ್ ವಿರುದ್ಧ ಸೆಣಸಾಡಿತು. ಆದರೆ, ಪಂದ್ಯದ ನಂತರ ಒಂದು ವಿಚಿತ್ರ ಘಟನೆ ಸಂಭವಿಸಿದೆ. ವಾರ್ನರ್ ತನ್ನ ಕರಾಚಿ ಕಿಂಗ್ಸ್ ತಂಡದ ಸಹ ಆಟಗಾರ ಮೊಯಿನ್ ಅಲಿ ಜೊತೆ ಜಗಳವಾಡಿದ್ದಾರೆ. ಈ ವಾಗ್ವಾದದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಮತ್ತು ಇಂಗ್ಲೆಂಡ್ನ ಮಾಜಿ ಆಲ್ರೌಂಡರ್ ಮೊಯಿನ್ ಅಲಿ ಇಬ್ಬರೂ ಪಾಕಿಸ್ತಾನ ಸೂಪರ್ ಲೀಗ್ 2026 ರಲ್ಲಿ ಕರಾಚಿ ಕಿಂಗ್ಸ್ ಪರ ಆಡುತ್ತಿದ್ದಾರೆ. ಕಳೆದ ಬುಧವಾರ, ಪಿಎಸ್ಎಲ್ನ 10 ನೇ ಪಂದ್ಯ ಕರಾಚಿ ಮತ್ತು ರಾವಲ್ಪಿಂಡಿಜ್ ನಡುವೆ ನಡೆಯಿತು. ಪಂದ್ಯದ ನಂತರ, ವಾರ್ನರ್ ಮತ್ತು ಮೊಯಿನ್ ಅಲಿ ನಡುವೆ ಮಾತಿನ ಚಕಮಕಿ ನಡೆದಿದೆ. ವಾರ್ನರ್ ತುಂಬಾ ಕೋಪಗೊಂಡಂತೆ ಕಾಣಿಸಿಕೊಂಡರು ಮತ್ತು ಕೋಪದಲ್ಲಿ ಏನೋ ಜೋರಾಗಿ ಹೇಳುತ್ತಿದ್ದರು. ಬಳಿಕ ತಂಡದ ಸದಸ್ಯರೊಬ್ಬರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಣ್ಣನೆ ಮಾಡಿದರು.
ಕರಾಚಿ ಕಿಂಗ್ಸ್ ತಂಡವು ಪಿಎಸ್ಎಲ್ 2026 ರಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದೆ. ಈ ಋತುವಿನಲ್ಲಿ ಅವರು ಆಡಿದ ಮೂರು ಪಂದ್ಯಗಳಲ್ಲಿಯೂ ಗೆದ್ದಿದ್ದಾರೆ. ಅವರು 6 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Abhishek Sharma: ಸಂಕಷ್ಟಕ್ಕೆ ಸಿಲುಕಿದ ಅಭಿಷೇಕ್ ಶರ್ಮಾ: ಬಿಸಿಸಿಐಯಿಂದ ಸಿಕ್ಕಿತು ಶಾಕಿಂಗ್ ನ್ಯೂಸ್
ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಕರಾಚಿ ಕಿಂಗ್ಸ್ ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾವಲ್ಪಿಂಡಿಜ್ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 197 ರನ್ ಗಳಿಸಿತು. ತಂಡದ ಪರ ಡ್ಯಾರಿಲ್ ಮಿಚೆಲ್ ಅತಿ ಹೆಚ್ಚು 65 ರನ್ ಗಳಿಸಿದರು. ಕರಾಚಿ ಪರ ಹಸನ್ ಅಲಿ ಗರಿಷ್ಠ ಮೂರು ವಿಕೆಟ್ಗಳನ್ನು ಪಡೆದರು. ಕರಾಚಿ ಕಿಂಗ್ಸ್ 19.2 ಓವರ್ಗಳಲ್ಲಿ 198 ರನ್ಗಳ ಗುರಿಯನ್ನು ಬೆನ್ನಟ್ಟಿತು. ಅಜಮ್ ಖಾನ್ 74 ರನ್ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ನಾಯಕ ಡೇವಿಡ್ ವಾರ್ನರ್ 50 ರನ್ ಗಳಿಸಿ ಔಟಾದರು. ಪಿಂಡಾಸಿ ಪರ ಡ್ಯಾರಿಲ್ ಮಿಚೆಲ್ ಗರಿಷ್ಠ 3 ವಿಕೆಟ್ಗಳನ್ನು ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ