IPL 2023: ಪಂಜಾಬ್ ಕಿಂಗ್ಸ್ ತಂಡದಿಂದ ಕನ್ನಡಿಗ ಔಟ್..?
Punjab Kings: ಪಂಜಾಬ್ ಕಿಂಗ್ಸ್ ತಂಡ ಹೀಗಿದೆ: ಮಯಾಂಕ್ ಅಗರ್ವಾಲ್ (ನಾಯಕ) , ಶಿಖರ್ ಧವನ್ , ಲಿಯಾಮ್ ಲಿವಿಂಗ್ಸ್ಟೋನ್ , ಭಾನುಕಾ ರಾಜಪಕ್ಸೆ ( ವಿಕೆಟ್ ಕೀಪರ್ ) , ಶಾರುಖ್ ಖಾನ್ , ಓಡಿಯನ್ ಸ್ಮಿತ್ , ರಾಜ್ ಬಾವಾ , ಅರ್ಷ್ದೀಪ್ ಸಿಂಗ್ , ಹರ್ಪ್ರೀತ್ ಬ್ರಾರ್.

IPL 2023: ಐಪಿಎಲ್ ಸೀಸನ್ 16 ಗೆ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಕೆಲ ಫ್ರಾಂಚೈಸಿಗಳು ಸಿಬ್ಬಂದಿ ವರ್ಗಗಳ ಬದಲಾವಣೆಗೆ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಅದರಲ್ಲೂ ಪಂಜಾಬ್ ಕಿಂಗ್ಸ್ (Punjab Kings) ತಂಡವು ಮುಂಬರುವ ಸೀಸನ್ಗಾಗಿ ವಿಭಿನ್ನ ಪ್ಲ್ಯಾನ್ಗಳನ್ನು ರೂಪಿಸಲು ಮುಂದಡಿಯಿಟ್ಟಿದೆ. ಅದರ ಮೊದಲ ಹೆಜ್ಜೆಯಾಗಿ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿರುವ ಅನಿಲ್ ಕುಂಬ್ಳೆ (Anil Kumble) ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಲಾಗಿದೆ. ಅಂದರೆ ಇದೇ ಆಗಸ್ಟ್ ತಿಂಗಳಲ್ಲಿ ಅನಿಲ್ ಕುಂಬ್ಳೆ ಜೊತೆಗಿನ ಪಂಜಾಬ್ ಕಿಂಗ್ಸ್ ಒಪ್ಪಂದ ಮುಕ್ತಾಯವಾಗಿತ್ತು. ಆದರೆ ಈ ಒಪ್ಪಂದವನ್ನು ಪಂಜಾಬ್ ಫ್ರಾಂಚೈಸಿ ಮುಂದಿನ ಸೀಸನ್ಗೆ ನವೀಕರಿಸಿಲ್ಲ. ಇದರೊಂದಿಗೆ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆ ಅವರನ್ನು ಕೈ ಬಿಟ್ಟಿರುವುದು ಬಹುತೇಕ ಖಚಿತವಾಗಿದೆ.
2020 ರಲ್ಲಿ ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು. ಅದರಂತೆ 2020, 2021 ಹಾಗೂ 2022 ರಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದರೆ ಈ ಮೂರು ಸೀಸನ್ನಲ್ಲೂ ಪಂಜಾಬ್ ತಂಡವು ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಮೂರು ಸೀಸನ್ನಲ್ಲೂ ಪಾಯಿಂಟ್ ಟೇಬಲ್ನಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ನಿರಾಸೆ ಮೂಡಿಸಿತ್ತು. ಇದೇ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ ಹೊಸ ನೇಮಕಕ್ಕೆ ಆಸಕ್ತಿವಹಿಸಿದೆ ಎಂದು ಹೇಳಲಾಗಿದೆ.
ಅದರಂತೆ ಪಂಜಾಬ್ ಕಿಂಗ್ಸ್ ತಂಡದ ನೂತನ ಕೋಚ್ ನೇಮಕ ಶೀಘ್ರದಲ್ಲೇ ನಡೆಯಲಿದೆ. ಈಗಾಗಲೇ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬ್ರೆಂಡನ್ ಮೆಕಲಂ ಬದಲಿಗೆ ಮುಂಬೈ ರಣಜಿ ತಂಡದ ಮಾಜಿ ಕೋಚ್ ಚಂದ್ರಕಾಂತ್ ಪಂಡಿತ್ ಅವರನ್ನು ಆಯ್ಕೆ ಮಾಡಿದೆ. ಇದೀಗ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೂಡ ಹೊಸ ಕೋಚ್ ಹುಡುಕಾಟದಲ್ಲಿದ್ದು, ಶೀಘ್ರದಲ್ಲೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಪಂಜಾಬ್ ಕಿಂಗ್ಸ್ ತಂಡ ಹೀಗಿದೆ: ಮಯಾಂಕ್ ಅಗರ್ವಾಲ್ (ನಾಯಕ) , ಶಿಖರ್ ಧವನ್ , ಲಿಯಾಮ್ ಲಿವಿಂಗ್ಸ್ಟೋನ್ , ಭಾನುಕಾ ರಾಜಪಕ್ಸೆ ( ವಿಕೆಟ್ ಕೀಪರ್ ) , ಶಾರುಖ್ ಖಾನ್ , ಓಡಿಯನ್ ಸ್ಮಿತ್ , ರಾಜ್ ಬಾವಾ , ಅರ್ಷ್ದೀಪ್ ಸಿಂಗ್ , ಹರ್ಪ್ರೀತ್ ಬ್ರಾರ್ , ಸಂದೀಪ್ ಶರ್ಮಾ , ರಾಹುಲ್ ಚಾಹರ್, ಪ್ರಭಾಸಿಮ್ರಾನ್ ಸಿಂಗ್ , ರಿಷಿ ಧವನ್ , ಬೆನ್ನಿ ಹೋವೆಲ್ , ಇಶಾನ್ ಪೊರೆಲ್ , ನಾಥನ್ ಎಲ್ಲಿಸ್ , ಬಲ್ತೇಜ್ ಸಿಂಗ್ , ಹೃತಿಕ್ ಚಟರ್ಜಿ , ಜಿತೇಶ್ ಶರ್ಮಾ , ಪ್ರೇರಕ್ ಮಂಕಡ್ ,ವೈಭವ್ ಅರೋರಾ , ಅನ್ಶ್ ಪಟೇಲ್




