
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 19.1 ಓವರ್ಗಳಲ್ಲಿ 165 ರನ್ ಬಾರಿಸಿ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್.
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವೈಶಾಕ್ ವಿಜಯಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.
ಪ್ರಸಿದ್ಧ್ ಕೃಷ್ಣ ಎಸೆದ 19ನೇ ಓವರ್ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ಸೇವಿಯರ್ ಬಾರ್ಟ್ಲೆಟ್.
ಮೂರನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಕೂಪರ್ ಕೊನೊಲಿ.
ಕೊನೆಯ ಓವರ್ನಲ್ಲಿ ಕೇವಲ 2 ರನ್ಗಳ ಅವಶ್ಯಕತೆ.
ವಾಷಿಂಗ್ಟನ್ ಸುಂದರ್ ಎಸೆತದ 20ನೇ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಕೂಪರ್ ಕೊನೊಲಿ.
19.1 ಓವರ್ಗಳಲ್ಲಿ 165 ರನ್ ಬಾರಿಸಿ ಗೆಲುವಿನ ನಗೆ ಬೀರಿದ ಪಂಜಾಬ್ ಪಡೆ.
ಪಂಜಾಬ್ ಕಿಂಗ್ಸ್ ತಂಡಕ್ಕೆ 3 ವಿಕೆಟ್ಗಳ ರೋಚಕ ಜಯ
ಅಶೋಕ್ ಶರ್ಮಾ ಎಸೆದ 18ನೇ ಓವರ್ನ 4ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಮಾರ್ಕೊ ಯಾನ್ಸೆನ್ (9).
ಕೊನೆಯ 12 ಎಸೆತಗಳಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ 16 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಕೂಪರ್ ಕೊನೊಲಿ ಹಾಗೂ ಕ್ಸೇವಿಯರ್ ಬಾರ್ಟ್ಲೆಟ್ ಬ್ಯಾಟಿಂಗ್.
ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 18 ಎಸೆತಗಳಲ್ಲಿ 21 ರನ್ಗಳ ಅವಶ್ಯಕತೆ.
ಕುತೂಹಲಘಟ್ಟದತ್ತ ಸಾಗುತ್ತಿರುವ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯ.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಕೂಪರ್ ಕೊನೊಲಿ ಹಾಗೂ ಬಲಗೈ ಬ್ಯಾಟರ್ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.
ಕಗಿಸೊ ರಬಾಡ ಎಸೆದ 16ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಫೋರ್ ಬಾರಿಸಿದ ಕೂಪರ್ ಕೊನೊಲಿ.
ಕೇವಲ 34 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಕೂಪರ್ ಕೊನೊಲಿ.
ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಕೊನೊಲಿ.
ಪಂಜಾಬ್ ಕಿಂಗ್ಸ್ ತಂಡಕ್ಕೆ 24 ಎಸೆತಗಳಲ್ಲಿ 30 ರನ್ಗಳ ಗುರಿ.
ಪ್ರಸಿದ್ಧ್ ಕೃಷ್ಣ ಎಸೆದ 15ನೇ ಓವರ್ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಶಶಾಂಕ್ ಸಿಂಗ್ (4).
4ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರ ನಡೆದ ಮಾರ್ಕಸ್ ಸ್ಟೊಯಿನಿಸ್ (0)
ಕ್ರೀಸ್ನಲ್ಲಿ ಕೂಪರ್ ಕೊನೊಲಿ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.
ಪಂಜಾಬ್ ಕಿಂಗ್ಸ್ ತಂಡಕ್ಕೆ 30 ಎಸೆತಗಳಲ್ಲಿ 42 ರನ್ಗಳ ಅವಶ್ಯಕತೆ
ವಾಷಿಂಗ್ಟನ್ ಸುಂದರ್ ಎಸೆದ 14ನೇ ಓವರ್ನ ಮೊದಲ ಎಸೆತದಲ್ಲೇ ಸುಲಭ ಕ್ಯಾಚ್ ನೀಡಿದ ನೇಹಾಲ್ ವಧೇರಾ (3).
ಪಂಜಾಬ್ ಕಿಂಗ್ಸ್ ತಂಡಕ್ಕೆ 36 ಎಸೆತಗಳಲ್ಲಿ 45 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಶಶಾಂಕ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ಪ್ರಸಿದ್ಧ್ ಕೃಷ್ಣ ಎಸೆದ 13ನೇ ಓವರ್ನ ಮೊದಲ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಹೊಡೆತ ಬಾರಿಸಲು ಹೋಗಿ ಕ್ಯಾಚ್ ನೀಡಿದ ಶ್ರೇಯಸ್ ಅಯ್ಯರ್ (18).
ಕ್ರೀಸ್ನಲ್ಲಿ ಎಡಗೈ ದಾಂಡಿಗರಾದ ಕೂಪರ್ ಕೊನೊಲಿ ಹಾಗೂ ನೆಹಾಲ್ ವಧೇರಾ ಬ್ಯಾಟಿಂಗ್.
ರಶೀದ್ ಖಾನ್ ಎಸೆದ 12ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ಕೂಪರ್ ಕೊನೊಲಿ.
ಈ ಸಿಕ್ಸರ್ನೊಂದಿಗೆ 100 ರನ್ಗಳನ್ನು ಪೂರೈಸಿದ ಪಂಜಾಬ್ ಕಿಂಗ್ಸ್.
12 ಓವರ್ಗಳ ಮೂಲಕ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್ ತಂಡದ ಮೊತ್ತ 110 ರನ್ಗಳು.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ಅಶೋಕ್ ಶರ್ಮಾ ಎಸೆದ 11ನೇ ಓವರ್ನ 2ನೇ ಮತ್ತು 3ನೇ ಎಸೆತಗಳಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್.
11 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 99 ರನ್ ಕಲೆಹಾಕಿದ ಪಂಜಾಬ್ ಕಿಂಗ್ಸ್.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ರಶೀದ್ ಖಾನ್ ಎಸೆದ 10ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಪ್ರಭ್ಸಿಮ್ರಾನ್ ಸಿಂಗ್.
24 ಎಸೆತಗಳಲ್ಲಿ 37 ರನ್ ಬಾರಿಸಿ ಪ್ರಭ್ಸಿಮ್ರಾನ್ ಸಿಂಗ್ ಔಟ್.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ವಾಷಿಂಗ್ಟನ್ ಸುಂದರ್ ಎಸೆದ 9ನೇ ಓವರ್ನ ಮೊದಲ ಎಸೆತದಲ್ಲೇ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಪ್ರಭ್ಸಿಮ್ರಾನ್ ಸಿಂಗ್.
22 ಎಸೆತಗಳಲ್ಲಿ 36 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಪ್ರಭ್ಸಿಮ್ರಾನ್ ಸಿಂಗ್.
9 ಓವರ್ಗಳ ಮುಕ್ತಾಯದ ವೇಳೆ ಪಂಜಾಬ್ ಕಿಂಗ್ಸ್ ಸ್ಕೋರ್ 81 ರನ್ಗಳು.
ಕ್ರೀಸ್ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ವಾಷಿಂಗ್ಟನ್ ಸುಂದರ್ ಎಸೆದ 7ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಪ್ರಭ್ಸಿಮ್ರಾನ್ ಸಿಂಗ್.
ಈ ಸಿಕ್ಸರ್ನೊಂದಿಗೆ ಪಂಜಾಬ್ ಕಿಂಗ್ಸ್ ತಂಡದ ಸ್ಕೋರ್ 64 ಕ್ಕೆ ಏರಿಕೆ.
ಕ್ರೀಸ್ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ಅಶೋಕ್ ಶರ್ಮಾ ಎಸೆದ 5ನೇ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಎಡಗೈ ದಾಂಡಿಗ ಕೂಪರ್ ಕೊನೊಲಿ.
5 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಪಂಜಾಬ್ ಕಿಂಗ್ಸ್.
ಕ್ರೀಸ್ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ಕಗಿಸೊ ರಬಾಡ ಎಸೆದ 4 ಓವರ್ನ ಮೊದಲೆರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪ್ರಭ್ಸಿಮ್ರಾನ್ ಸಿಂಗ್.
ಕೊನೆಯ ಎಸೆತದಲ್ಲಿ ಡೀಪ್ ಕವರ್ನತ್ತ ಸಿಕ್ಸ್ ಬಾರಿಸಿದ ಕೂಪರ್ ಕೊನೊಲಿ.
ರಬಾಡರ ಒಂದೇ ಓವರ್ನಲ್ಲಿ 19 ರನ್ ಚಚ್ಚಿದ ಪಂಜಾಬ್ ಕಿಂಗ್ಸ್ ದಾಂಡಿಗರು.
ಮೊಹಮ್ಮದ್ ಸಿರಾಜ್ ಎಸೆದ 3ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಕೂಪರ್ ಕೊನೊಲಿ.
3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 18 ರನ್ ಕಲೆಹಾಕಿರುವ ಪಂಜಾಬ್ ಕಿಂಗ್ಸ್.
ಕ್ರೀಸ್ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ಕಗಿಸೊ ರಬಾಡ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿ ಹೊರ ನಡೆದ ಪ್ರಿಯಾಂಶ್ ಆರ್ಯಾ (7).
ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ರಬಾಡ.
ಕ್ರೀಸ್ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಬ್ಯಾಟಿಂಗ್.
ಮೊದಲ 2 ಓವರ್ಗಳಲ್ಲಿ 10 ರನ್ ಕಲೆಹಾಕಿರುವ ಪಂಜಾಬ್ ಕಿಂಗ್ಸ್.
ವೈಶಾಕ್ ವಿಜಯಕುಮಾರ್ ಎಸೆದ 19ನೇ ಓವರ್ನ ಮೊದಲ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ವಾಷಿಂಗ್ಟನ್ ಸುಂದರ್ (18).
19ನೇ ಓವರ್ನ ಕೊನೆಯ ಎಸೆತದಲ್ಲಿ ಶಾರೂಖ್ ಖಾನ್ (4) ಔಟ್.
4 ಓವರ್ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿದ ಕನ್ನಡಿಗ ವೈಶಾಕ್ ವಿಜಯಕುಮಾರ್.
ಕ್ರೀಸ್ನಲ್ಲಿ ರಾಹುಲ್ ತೆವಾಟಿಯಾ ಹಾಗೂ ಶಾರೂಖ್ ಖಾನ್ ಬ್ಯಾಟಿಂಗ್.
18 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿರುವ ಗುಜರಾತ್ ಟೈಟಾನ್ಸ್.
ಕೊನೆಯ ಎರಡು ಓವರ್ಗಳು ಮಾತ್ರ ಬಾಕಿ.
ಪಂಜಾಬ್ ಕಿಂಗ್ಸ್ ಉತ್ತಮ ಬೌಲಿಂಗ್.
ಕ್ರೀಸ್ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಶಾರೂಖ್ ಖಾನ್ ಬ್ಯಾಟಿಂಗ್
17ನೇ ಓವರ್ನಲ್ಲಿ ಕೇವಲ 6 ರನ್ ಮಾತ್ರ ನೀಡಿದ ಎಡಗೈ ವೇಗಿ ಮಾರ್ಕೊ ಯಾನ್ಸೆನ್.
ಕ್ರೀಸ್ನಲ್ಲಿ ಶಾರೂಖ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್.
ಕೊನೆಯ ಮೂರು ಓವರ್ಗಳು ಮಾತ್ರ ಬಾಕಿ.
ಯುಜ್ವೇಂದ್ರ ಚಹಲ್ ಎಸೆದ 16ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಜೋಸ್ ಬಟ್ಲರ್.
ಬೌಂಡರಿ ಲೈನ್ನಲ್ಲಿ ಕ್ಸೇವಿಯರ್ ಬಾರ್ಟ್ಲೆಟ್ ಅತ್ಯುತ್ತಮ ಕ್ಯಾಚ್.
33 ಎಸೆತಗಳಲ್ಲಿ 38 ರನ್ ಬಾರಿಸಿ ಜೋಸ್ ಬಟ್ಲರ್ ಔಟ್.
ಪಂಜಾಬ್ ಕಿಂಗ್ಸ್ ತಂಡಕ್ಕೆ 4ನೇ ಯಶಸ್ಸು.
ಅರ್ಷದೀಪ್ ಇಸಂಗ್ ಎಸೆದ 15ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ವಾಷಿಂಗ್ಟನ್ ಸುಂದರ್.
15 ಓವರ್ಗಳ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ಸ್ಕೋರ್ 128 ರನ್ಗಳು.
ಕ್ರೀಸ್ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.
ವೈಶಾಕ್ ವಿಜಯಕುಮಾರ್ ಯಾದವ್ ಎಸೆದ 14ನೇ ಓವರ್ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ಆಫ್ನಲ್ಲಿ ಕ್ಯಾಚ್ ನೀಡಿದ ಗ್ಲೆನ್ ಫಿಲಿಪ್ಸ್ (25).
ಗುಜರಾತ್ ಟೈಟಾನ್ಸ್ ತಂಡದ ಮೂರನೇ ವಿಕೆಟ್ ಪತನ.
14 ಓವರ್ಗಳಲ್ಲಿ 119 ರನ್ ನೀಡಿರುವ ಪಂಜಾಬ್ ಕಿಂಗ್ಸ್.
ಯುಜ್ವೇಂದ್ರ ಚಹಲ್ ಎಸೆದ 12ನೇ ಓವರ್ನ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸ್ ಸಿಡಿಸಿದ ಗ್ಲೆನ್ ಫಿಲಿಪ್ಸ್.
ಇದೇ ಓವರ್ನ 5ನೇ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ಫಿಲಿಪ್ಸ್.
ಈ ಫೋರ್ನೊಂದಿಗೆ ಶತಕ ಪೂರೈಸಿದ ಗುಜರಾತ್ ಟೈಟಾನ್ಸ್.
ಯುಜ್ವೇಂದ್ರ ಚಹಲ್ ಎಸೆದ 10ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಡೀಪ್ ಮಿಡ್ ವಿಕೆಟ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಶುಭ್ಮನ್ ಗಿಲ್.
27 ಎಸೆತಗಳಲ್ಲಿ 39 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಶುಭ್ಮನ್ ಗಿಲ್.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್.
ವೈಶಾಕ್ ವಿಜಯಕುಮಾರ್ ಎಸೆದ 7ನೇ ಓವರ್ನ 3ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್.
ಇದು ಗುಜರಾತ್ ಟೈಟಾನ್ಸ್ ಇನಿಂಗ್ಸ್ನ ಮೊದಲ ಸಿಕ್ಸ್.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.
ವೈಶಾಕ್ ವಿಜಯಕುಮಾರ್ ಎಸೆದ 5ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಆಕರ್ಷಕ ಫೋರ್ ಬಾರಿಸಿದ ಜೋಸ್ ಬಟ್ಲರ್.
5 ಓವರ್ಗಳ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ಸ್ಕೋರ್ 47 ರನ್ಗಳು.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.
ಮಾರ್ಕೊ ಯಾನ್ಸೆನ್ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ಗೆ ಸುಲಭ ಕ್ಯಾಚ್ ನೀಡಿ ಹೊರ ನಡೆದ ಸಾಯಿ ಸುದರ್ಶನ್ (13).
ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊದಲ ಯಶಸ್ಸು.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋಸ್ ಬಟ್ಲರ್.
ಮೊದಲ ಮೂರು ಓವರ್ಗಳಲ್ಲಿ 6 ಫೋರ್ಗಳನ್ನು ಬಾರಿಸಿದ ಗುಜರಾತ್ ಟೈಟಾನ್ಸ್ ಆರಂಭಿಕರು.
ಮೂರು ಓವರ್ಗಳ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ಸ್ಕೋರ್ 35 ರನ್ಗಳು.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್.
ಕ್ಸೇವಿಯರ್ ಬಾರ್ಟ್ಲೆಟ್ ಎಸೆದ 2ನೇ ಓವರ್ನ 2ನೇ, 3ನೇ ಮತ್ತು 6ನೇ ಎಸೆತಗಳಲ್ಲಿ ಆಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್.
ದ್ವಿತೀಯ ಓವರ್ನಲ್ಲಿ 14 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್.
ಎಡಗೈ ವೇಗಿ ಅರ್ಷದೀಪ್ ಸಿಂಗ್ ಎಸೆದ ಮೊದಲ ಓವರ್ನ 3ನೇ ಎಸೆತದಲ್ಲಿ ಸಾಯಿ ಸುದರ್ಶನ್ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ್ದಾರೆ.
ಮೊದಲ ಓವರ್ ಮುಕ್ತಾಯದ ವೇಳೆಗೆ ಗುಜರಾತ್ ತಂಡದ ಸ್ಕೋರ್ 9 ರನ್ಗಳು.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.
🚨 Toss 🚨@punjabkingsipl have won the toss against @gujarat_titans and will field first in New Chandigarh!
Updates ➡️ https://t.co/75rCxTCOL1#TATAIPL | #KhelBindaas | #PBKSvGT pic.twitter.com/fHPNAIlqZe
— IndianPremierLeague (@IPL) March 31, 2026
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್.
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವೈಶಾಕ್ ವಿಜಯಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
All eyes on Match No. 4! 👀
Coming 🆙 🔜 😎💻 https://t.co/sdVARQorgM
📱 Official IPL App#TATAIPL | #KhelBindaas | #PBKSvGT | @PunjabKingsIPL | @gujarat_titans pic.twitter.com/9K5w0ROvzf— IndianPremierLeague (@IPL) March 31, 2026
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಈವರೆಗೆ 6 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಪಂಜಾಬ್ ಕಿಂಗ್ಸ್ ತಂಡ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಗುಜರಾತ್ ಟೈಟಾನ್ಸ್ 3 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
New Chandigarh awaits a blockbuster 🏟️@PunjabKingsIPL or @gujarat_titans – 2⃣ points loading for? ⏳#TATAIPL | #KhelBindaas | #PBKSvGT pic.twitter.com/daWMvDeWEy
— IndianPremierLeague (@IPL) March 31, 2026
ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಪಂದ್ಯಕ್ಕೆ ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ರೆಡಿ.
Published On - 6:03 pm, Tue, 31 March 26