New Zealand T20 Squad: ನ್ಯೂಝಿಲೆಂಡ್ ಟಿ20 ತಂಡ ಪ್ರಕಟ: ಕನ್ನಡಿಗನಿಗೆ ಸ್ಥಾನ

Rachin Ravindra: ಈ ಸರಣಿಗಳಿಗೆ ಆಯ್ಕೆಯಾದ ಆಟಗಾರರಲ್ಲಿ ಕನ್ನಡಿಗ ರಚಿನ್ ರವೀಂದ್ರ ಕೂಡ ಇರುವುದು ವಿಶೇಷ. ಈ ಹಿಂದೆಯೇ ನ್ಯೂಝಿಲೆಂಡ್ ತಂಡದ ಪಾದಾರ್ಪಣೆ ಮಾಡಿದ ರಚಿನ್ ಅವರ ಪೋಷಕರು ಬೆಂಗಳೂರು ಮೂಲದವರು.

New Zealand T20 Squad: ನ್ಯೂಝಿಲೆಂಡ್ ಟಿ20 ತಂಡ ಪ್ರಕಟ: ಕನ್ನಡಿಗನಿಗೆ ಸ್ಥಾನ
Rachin Ravindra-New Zealand
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 20, 2023 | 5:16 PM

ಇಂಗ್ಲೆಂಡ್ (NZ vs ENG) ಮತ್ತು ಯುಎಇ (NZ vs UAE) ವಿರುದ್ಧದ ಟಿ20 ಸರಣಿಗಾಗಿ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಆಗಸ್ಟ್ 17 ರಿಂದ ಯುಎಇ ವಿರುದ್ಧ ಶುರುವಾಗಲಿರುವ 3 ಪಂದ್ಯಗಳ ಟಿ20 ಸರಣಿಯಿಂದ ಡೆವೊನ್ ಕಾನ್ವೆ, ಫಿನ್ ಅಲೆನ್, ಡೇರಿಲ್ ಮಿಚೆಲ್, ಇಶ್ ಸೋಧಿ ಸೇರಿದಂತೆ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಇನ್ನು ಈ ಆಟಗಾರರು ಆಗಸ್ಟ್ 30 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇತ್ತ ಪ್ರಮುಖ ಆಟಗಾರರ ಅನುಪಸ್ಥಿತಿಯ ಹಿನ್ನಲೆಯಲ್ಲಿ ಯುಎಇ ವಿರುದ್ಧದ ಸರಣಿಗಾಗಿ ಯುವ ಆಲ್​ರೌಂಡರ್ ಆದಿತ್ಯ ಅಶೋಕ್​ಗೆ ಸ್ಥಾನ ನೀಡಲಾಗಿದೆ. ಆದಿತ್ಯ ಅಶೋಕ್ ಮೂಲತಃ ಚೆನ್ನೈನವರು. ಬಾಲ್ಯದಲ್ಲಿ ಅವರ ಕುಟುಂಬವು ನ್ಯೂಝಿಲೆಂಡ್‌ಗೆ ತೆರಳಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಇದೀಗ ನ್ಯೂಝಿಲೆಂಡ್ ಪರ ಚೊಚ್ಚಲ ಪಂದ್ಯವಾಡಲು ಸಜ್ಜಾಗಿದ್ದಾರೆ.

ಕಿವೀಸ್ ಬಳಗದಲ್ಲಿ ಕನ್ನಡಿಗ:

ಈ ಸರಣಿಗಳಿಗೆ ಆಯ್ಕೆಯಾದ ಆಟಗಾರರಲ್ಲಿ ಕನ್ನಡಿಗ ರಚಿನ್ ರವೀಂದ್ರ ಕೂಡ ಇರುವುದು ವಿಶೇಷ. ಈ ಹಿಂದೆಯೇ ನ್ಯೂಝಿಲೆಂಡ್ ತಂಡದ ಪಾದಾರ್ಪಣೆ ಮಾಡಿದ ರಚಿನ್ ಅವರ ಪೋಷಕರು ಬೆಂಗಳೂರು ಮೂಲದವರು. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ದಂಪತಿ 1990 ರಲ್ಲಿ ನ್ಯೂಝಿಲೆಂಡ್​ಗೆ ತೆರಳಿದ್ದರು. ಅಲ್ಲದೆ ಅಲ್ಲಿನ ಪೌರತ್ವ ಪಡೆಯುವ ಮೂಲಕ ಅಲ್ಲಿಯೇ ನೆಲೆಸಿದ್ದರು.

ಇತ್ತ ರಚಿನ್ ರವೀಂದ್ರ 2016 ರ ಹಾಗೂ 2018ರ ಅಂಡರ್-19 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ಮೂಲಕ ನ್ಯೂಝಿಲೆಂಡ್ ಪರ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಅಲ್ಲದೆ 2021 ರಲ್ಲಿ ನ್ಯೂಝಿಲೆಂಡ್ ಹಿರಿಯರ ತಂಡಕ್ಕೆ ಆಯ್ಕೆಯಾಗುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು.

ನ್ಯೂಝಿಲೆಂಡ್ ಪರ ಈಗಾಗಲೇ 3 ಟೆಸ್ಟ್, 5 ಏಕದಿನ ಹಾಗೂ 14 ಟಿ20 ಪಂದ್ಯಗಳನ್ನಾಡಿರುವ ರಚಿನ್ ರವೀಂದ್ರ ಇದೀಗ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಯುಎಇ ಪ್ರವಾಸಕ್ಕಾಗಿ ನ್ಯೂಝಿಲೆಂಡ್ ತಂಡ:

ಟಿಮ್ ಸೌಥಿ (ನಾಯಕ), ಚಾಡ್ ಬೋವ್ಸ್, ಮಾರ್ಕ್ ಚಾಪ್‌ಮನ್, ಡೇನ್ ಕ್ಲೀವರ್, ಲಾಕಿ ಫರ್ಗುಸನ್, ಡೀನ್ ಫಾಕ್ಸ್‌ಕ್ರಾಫ್ಟ್, ಕೈಲ್ ಜೇಮಿಸನ್, ಕೋಲ್ ಮೆಕ್‌ಕಾಂಚಿ, ಜಿಮ್ಮಿ ನೀಶಮ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್, ಹೆನ್ರಿ ಶಿಪ್ಲಿ, ಎಡಿ ಯಂಗ್.

ಇದನ್ನೂ ಓದಿ: Team India: ಒಟ್ಟು 47 ಪ್ಲೇಯರ್ಸ್​: ಟೀಮ್ ಇಂಡಿಯಾದಿಂದ 32 ಆಟಗಾರರು ಔಟ್..!

ಇಂಗ್ಲೆಂಡ್ ಪ್ರವಾಸಕ್ಕಾಗಿ ನ್ಯೂಝಿಲೆಂಡ್ ತಂಡ:

ಟಿಮ್ ಸೌಥಿ (ನಾಯಕ), ಫಿನ್ ಅಲೆನ್, ಮಾರ್ಕ್ ಚಾಪ್​ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಆ್ಯಡಮ್ ಮಿಲ್ನ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್ , ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್.