Rajan Kumar: ಆರ್​ಸಿಬಿ ಖರೀದಿಸಿದ ಈ ರಜನ್ ಕುಮಾರ್ ಯಾರು ಗೊತ್ತೇ?: ಎಷ್ಟು ಪಂದ್ಯ ಆಡಿದ್ದಾರೆ?

| Updated By: Vinay Bhat

Updated on: Dec 23, 2022 | 7:50 PM

IPL Auction 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಾತೆಯಲ್ಲಿ ದೊಡ್ಡ ಮೊತ್ತವಿಲ್ಲ. ಹೀಗಾಗಿ ಸ್ಟಾರ್ ಆಟಗಾರರ ಮೊರೆ ಹೋಗದೆ ದೇಶೀ ಪ್ರತಿಭೆಗಳ ಮೇಲೆ ಕಣ್ಣಿಟ್ಟು ಖರೀದಿಸಿದೆ. ಇದೀಗ ಆರ್​ಸಿಬಿ ರಜನ್ ಕುಮಾರ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

Rajan Kumar: ಆರ್​ಸಿಬಿ ಖರೀದಿಸಿದ ಈ ರಜನ್ ಕುಮಾರ್ ಯಾರು ಗೊತ್ತೇ?: ಎಷ್ಟು ಪಂದ್ಯ ಆಡಿದ್ದಾರೆ?
RCB IPL 2023
Follow us on

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗಾಗಿ (IPL 2023) ನಡೆಯುತ್ತಿರುವ ಮಿನಿ ಹರಜು ಪ್ರಕ್ರಿಯೆಯಲ್ಲಿ ದಾಖಲೆಗಳು ಸೃಷ್ಟಿಯಾಗಿವೆ. ಐಪಿಎಲ್ ಇತಿಹಾಸದಲ್ಲೇ ಸ್ಯಾಮ್ ಕುರ್ರನ್ ದಾಖಲೆಯ ಮೊತ್ತಕ್ಕೆ ಸೇಲ್ ಆದರು. ಸ್ಟಾರ್ ಆಟಗಾರರ ಖರೀದಿಗೆ ಹಣ ಕೂಡಿಟ್ಟಿದ್ದ ಫ್ರಾಂಚೈಸಿಗಳು ಅಂದುಕೊಂಡಂತೆ ಹಣದ ಮಳೆಯನ್ನೇ ಸುರಿಸಿದೆ. ಕಡಿಮೆ ಮೊತ್ತ ಇದ್ದ ಫ್ರಾಂಚೈಸಿ ತಮ್ಮ ಕೈಲಾದಷ್ಟು ಹಣ ಹಾಕಿ ಅಗತ್ಯವಿರುವ ಪ್ಲೇಯರ್​ಗಳನ್ನು ಖರೀಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಖಾತೆಯಲ್ಲಿ ದೊಡ್ಡ ಮೊತ್ತವಿಲ್ಲ. ಹೀಗಾಗಿ ಸ್ಟಾರ್ ಆಟಗಾರರ ಮೊರೆ ಹೋಗದೆ ದೇಶೀ ಪ್ರತಿಭೆಗಳ ಮೇಲೆ ಕಣ್ಣಿಟ್ಟು ಖರೀದಿಸಿದೆ. ಇದೀಗ ಬೆಂಗಳೂರು ಫ್ರಾಂಚೈಸಿ ಹರಿದ್ವಾರದ ರಜನ್ ಕುಮಾರ್ (Rajan Kumar) ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

20 ಲಕ್ಷ ಮೂಲಬೆಲೆ ಹೊಂದಿದ್ದ ರಜನ್ ಕುಮಾರ್ ಖರೀದಿಗೆ ಆರ್​ಸಿಬಿ ಜೊತೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮುಂದೆಬಂತು. ಅಂತಿಮವಾಗಿ ಇವರನ್ನು ಆರ್​ಸಿಬಿ 70 ಲಕ್ಷಕ್ಕೆ ಖರೀದಿ ಮಾಡಿದೆ. ಇದುವರೆಗೆ ಏಳು ಟಿ20 ಪಂದ್ಯಗಳನ್ನು ಆಡಿರುವ ಇವರು 10 ವಿಕೆಟ್ ಪಡೆದಿದ್ದಾರೆ. 17 ರನ್​ಗೆ 3 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆ ಆಗಿದೆ. ಲಿಸ್ಟ್ ಎ ಯ 5 ಪಂದ್ಯಗಳಲ್ಲಿ 6 ವಿಕೆಟ್ ಪಡೆದುಕೊಂಡಿದ್ದಾರೆ. ಇವರ ಜೊತೆಗೆ ವೇಗಿ ಅವಿನಾಶ್ ಸಿಂಗ್ ಅವರನ್ನು ಆರ್​ಸಿಬಿ 60 ಲಕ್ಷಕ್ಕೆ ಪಡೆದುಕೊಂಡಿತು.

ಆರ್​ಸಿಬಿ ಮನೋಜ್ ಬಂಡಗೆ ಅವರನ್ನು ಮೂಲಬೆಲೆ 20 ಲಕ್ಷಕ್ಕೆ ಖರೀದಿಸಿದೆ. 1.5 ಕೋಟಿಗೆ ಇಂಗ್ಲೆಂಡ್​ನ ವಿಲ್ ಜ್ಯಾಕ್ಸ್ ಅವರನ್ನು ಖರೀದಿಸಿದೆ. ಜೊತೆಗೆ 75 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿಯನ್ನು ಆರ್​ಸಿಬಿ ತಂಡವು 1 ಕೋಟಿ 90 ಲಕ್ಷ ರೂ. ನೀಡಿ ಖರೀದಿಸಿದೆ. ಇಂಗ್ಲೆಂಡ್​ನ ಯುವ ಆಟಗಾರ ವಿಲ್ ಜಾಕ್ಸ್ ಅವರನ್ನು 3.20 ಕೋಟಿ ರೂ. ನೀಡಿ ಖರೀದಿಸಿದೆ.

ಇದನ್ನೂ ಓದಿ
Kyle Jamieson: ಕಳೆದ ಸೀಸನ್​ನಲ್ಲಿ 15 ಕೋಟಿಗೆ ಸೇಲ್ ಆದ ಈ ಪ್ಲೇಯರ್ ಈಬಾರಿ ಹರಾಜಾಗಿದ್ದು ಕೇವಲ 1 ಕೋಟಿಗೆ
IPL 2023 RCB Squad: ಆರ್​ಸಿಬಿ ಪರ ಕಣಕ್ಕಿಳಿಯುವ 8 ವಿದೇಶಿ ಆಟಗಾರರು ಇವರೇ..!
Will Jacks: RCB ತಂಡಕ್ಕೆ ಸ್ಪೋಟಕ ದಾಂಡಿಗ ಎಂಟ್ರಿ
Manish Pandey: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಮನೀಶ್ ಪಾಂಡೆ: ಆಸಕ್ತಿ ತೋರದ ಆರ್​ಸಿಬಿ

ಐಪಿಎಲ್​ ಮಿನಿಹರಾಜು ಪ್ರಕ್ರಿಯೆ ಲೈವ್​

1 ಕೋಟಿಗೆ ಸಿಎಸ್​ಕೆ ಪಾಲಾದ ಜೆಮಿಸನ್:

ಕಳೆದ ಸೀಸನ್​ನಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದ ಪ್ಲೇಯರ್ಸ್ ಈ ಬಾರಿ ಅತಿ ಕಡಿಮೆ ಮೊತ್ತಕ್ಕೆ ಸೇಲ್ ಆದ ಪ್ರಸಂಗವೂ ನಡೆಯಿತು. ಇದಕ್ಕೆ ಉತ್ತಮ ಉದಾಹರಣೆ ಕೈಲ್ ಜೆಮಿಸನ್. ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆಮಿಸನ್ ಅವರನ್ನು ಬರೋಬ್ಬರಿ 16 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆರ್​ಸಿಬಿ ಪರ ಇವರು ಸಾಧಾರಣ ಪ್ರದರ್ಶನ ತೋರಿದ್ದರು. ಆದರೆ, ಈ ಬಾರಿ ಇವರನ್ನು ಖರೀದಿಸಲು ಯಾವ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಅಂತಿಮವಾಗಿ ಇವರು ಮೂಲಬೆಲೆ 1 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದರು.

ಡೆಲ್ಲಿ ಪಾಲಾದ ಮನೀಶ್ ಪಾಂಡೆ:

ಕಳೆದ ಕೆಲವು ಸೀಸನ್​ಗಳಿಂದ ಮಂಕಾಗಿರುವ ಮನೀಶ್ ಪಾಂಡೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಕನ್ನಡಿದ ಮನೀಶ್​ರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ದೊಡ್ಡ ಮನಸ್ಸು ಮಾಡಲಿಲ್ಲ. ಜೊತೆಯೆ ಆರ್​ಸಿಬಿ ಖಾತೆಯಲ್ಲಿ ದೊಡ್ಡ ಮೊತ್ತ ಇಲ್ಲದ ಕಾರಣ ಕಡಿಮೆ ಮೊತ್ತಕ್ಕೆ ಸಿಗುವ ಆಟಗಾರರನ್ನು ಖರೀದಿಸುತ್ತಿದೆ. ಸದ್ಯ 1 ಕೋಟಿ ಮೂಲಬೆಲೆ ಹೊಂದಿದ್ದ ಪಾಂಡೆ 2.4 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಜಮ್ಮು-ಕಾಶ್ಮೀರದ ಪ್ರತಿಭಾವಂತ ಆಲ್ರೌಂಡರ್ ವಿವ್ರಂತ್ ಶರ್ಮಾ ಅವರು ಅಚ್ಚರಿಯ ಮೊತ್ತಕ್ಕೆ ಹರಾಜಾಗಿದ್ದಾರೆ. 20 ಲಕ್ಷ ಮೂಲಬೆಲೆ ಹೊಂದಿದ್ದ ವಿವ್ರಂತ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 2.6 ಕೋಟಿ ಕೊಟ್ಟು ಖರೀದಿ ಮಾಡಿದೆ. 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಕುರ್ರನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ. ನೀಡುವ ಮೂಲಕ ತಮ್ಮದಾಗಿಸಿಕೊಂಡಿದೆ. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ದಾಖಲೆಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ