AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kyle Jamieson: ಕಳೆದ ಸೀಸನ್​ನಲ್ಲಿ 15 ಕೋಟಿಗೆ ಸೇಲ್ ಆದ ಈ ಪ್ಲೇಯರ್ ಈಬಾರಿ ಹರಾಜಾಗಿದ್ದು ಕೇವಲ 1 ಕೋಟಿಗೆ

IPL Auction 2023: ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಆರ್​ಸಿಬಿ ಕೈಲ್ ಜೆಮಿಸನ್ ಅವರನ್ನು ಬರೋಬ್ಬರಿ 16 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆದರೆ, ಈ ಬಾರಿ ಇವರನ್ನು ಖರೀದಿಸಲು ಯಾವ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಅಂತಿಮವಾಗಿ ಮೂಲಬೆಲೆ 1 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದರು.

Kyle Jamieson: ಕಳೆದ ಸೀಸನ್​ನಲ್ಲಿ 15 ಕೋಟಿಗೆ ಸೇಲ್ ಆದ ಈ ಪ್ಲೇಯರ್ ಈಬಾರಿ ಹರಾಜಾಗಿದ್ದು ಕೇವಲ 1 ಕೋಟಿಗೆ
Kyle Jamieson IPL Auction 2023
TV9 Web
| Edited By: |

Updated on:Dec 23, 2022 | 7:15 PM

Share

ಕೊಚ್ಚಿಯಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022 Auction) 16ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆದಿವೆ. ಅಂದುಕೊಂಡಂತೆ ಕೆಲ ಸ್ಟಾರ್ ಆಟಗಾರರು ದುಬಾರಿ ಮೊತ್ತಕ್ಕೆ ಸೇಲ್ ಆದರೆ, ಇನ್ನೂ ಕೆಲ ಆಟಗಾರರು ಕಡಿಮೆ ಮೊತ್ತಕ್ಕೆ ಹಾಗೂ ಸೋಲ್ಡ್ ಆಗದೆ ಉಳಿದುಕೊಂಡರು. ಇದರ ನಡುವೆ ಕಳೆದ ಸೀಸನ್​ನಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದ ಪ್ಲೇಯರ್ಸ್ ಈ ಬಾರಿ ಅತಿ ಕಡಿಮೆ ಮೊತ್ತಕ್ಕೆ ಸೇಲ್ ಆದ ಪ್ರಸಂಗವೂ ನಡೆಯಿತು. ಇದಕ್ಕೆ ಉತ್ತಮ ಉದಾಹರಣೆ ಕೈಲ್ ಜೆಮಿಸನ್ (Kyle Jamieson). ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆಮಿಸನ್ ಅವರನ್ನು ಬರೋಬ್ಬರಿ 16 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆರ್​ಸಿಬಿ (RCB) ಪರ ಇವರು ಸಾಧಾರಣ ಪ್ರದರ್ಶನ ತೋರಿದ್ದರು. ಆದರೆ, ಈ ಬಾರಿ ಇವರನ್ನು ಖರೀದಿಸಲು ಯಾವ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಅಂತಿಮವಾಗಿ ಇವರು ಮೂಲಬೆಲೆ 1 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದರು.

ಸದ್ಯ ಚೆನ್ನೈ ಸೂಪರ್ ಕಿಂಗ್ಸ್​ ಅಜಿಂಕ್ಯಾ ರಹಾನೆ ಅವರನ್ನು 50 ಲಕ್ಷ ರೂ. ಗೆ ಖರೀದಿ ಮಾಡಿದೆ. ಬೆನ್ ಸ್ಟೋಕ್ಸ್ ದಾಖಲೆಯ 16.25 ಕೋಟಿ ಮೊತ್ತಕ್ಕೆ ಪಡೆದುಕೊಂಡಿದೆ. ಶೈಕ್ ರಶೀದ್ 20 ಲಕ್ಷ ಹಾಗೂ ನಿಶಾಂತ್ ಸಿಂಧು ಅವರನ್ನು 60 ಲಕ್ಷಕ್ಕೆ ಪಡೆದುಕೊಂಡಿದೆ. ಇನ್ನು ಆರ್​ಸಿಬಿ ತಂಡ 1.5 ಕೋಟಿಗೆ ಇಂಗ್ಲೆಂಡ್​ನ ವಿಲ್ ಜ್ಯಾಕ್ಸ್ ಅವರನ್ನು ಖರೀದಿಸಿದೆ. ಜೊತೆಗೆ 75 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿಯನ್ನು ಆರ್​ಸಿಬಿ ತಂಡವು 1 ಕೋಟಿ 90 ಲಕ್ಷ ರೂ. ನೀಡಿ ಖರೀದಿಸಿದೆ. ಇಂಗ್ಲೆಂಡ್​ನ ಯುವ ಆಟಗಾರ ವಿಲ್ ಜಾಕ್ಸ್ ಅವರನ್ನು 3.20 ಕೋಟಿ ರೂ. ನೀಡಿ ಖರೀದಿಸಿದೆ.

ಐಪಿಎಲ್​ ಮಿನಿಹರಾಜು ಪ್ರಕ್ರಿಯೆ ಲೈವ್​

ಇದನ್ನೂ ಓದಿ
Image
IPL 2023 RCB Squad: ಆರ್​ಸಿಬಿ ಪರ ಕಣಕ್ಕಿಳಿಯುವ 8 ವಿದೇಶಿ ಆಟಗಾರರು ಇವರೇ..!
Image
Will Jacks: RCB ತಂಡಕ್ಕೆ ಸ್ಪೋಟಕ ದಾಂಡಿಗ ಎಂಟ್ರಿ
Image
Manish Pandey: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಮನೀಶ್ ಪಾಂಡೆ: ಆಸಕ್ತಿ ತೋರದ ಆರ್​ಸಿಬಿ
Image
Himanshu Sharma: RCB ತಂಡಕ್ಕೆ ಯುವ ಆಟಗಾರ ಆಯ್ಕೆ

ದಾಖಲೆ ಮೊತ್ತಕ್ಕೆ ಸ್ಯಾಮ್ ಸೇಲ್:

ಐಪಿಎಲ್ 2023 ಮಿನಿ ಹರಾಜಿನಲ್ಲಿ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಕುರ್ರನ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್​, ಎಸ್​ಆರ್​​ಹೆಚ್​, ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು. ಆದರೆ, ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ. ನೀಡುವ ಮೂಲಕ ಸ್ಯಾಮ್ ಕುರ್ರನ್ ಅವರನ್ನು ತಮ್ಮದಾಗಿಸಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಸ್ಯಾಮ್ ಪಾಲಾಗಿದೆ. ಇದರ ನಡುವೆ ಆಸ್ಟ್ರೇಲಿಯಾದ ಕ್ಯಾಮ್ರೊನ್ ಗ್ರೀನ್ 17.5 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿದೆ.

ಡೆಲ್ಲಿ ಪಾಲಾದ ಮನೀಶ್ ಪಾಂಡೆ:

ಕಳೆದ ಕೆಲವು ಸೀಸನ್​ಗಳಿಂದ ಮಂಕಾಗಿರುವ ಮನೀಶ್ ಪಾಂಡೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಕನ್ನಡಿದ ಮನೀಶ್​ರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ದೊಡ್ಡ ಮನಸ್ಸು ಮಾಡಲಿಲ್ಲ. ಜೊತೆಯೆ ಆರ್​ಸಿಬಿ ಖಾತೆಯಲ್ಲಿ ದೊಡ್ಡ ಮೊತ್ತ ಇಲ್ಲದ ಕಾರಣ ಕಡಿಮೆ ಮೊತ್ತಕ್ಕೆ ಸಿಗುವ ಆಟಗಾರರನ್ನು ಖರೀದಿಸುತ್ತಿದೆ. ಸದ್ಯ 1 ಕೋಟಿ ಮೂಲಬೆಲೆ ಹೊಂದಿದ್ದ ಪಾಂಡೆ 2.4 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಜಮ್ಮು-ಕಾಶ್ಮೀರದ ಪ್ರತಿಭಾವಂತ ಆಲ್ರೌಂಡರ್ ವಿವ್ರಂತ್ ಶರ್ಮಾ ಅವರು ಅಚ್ಚರಿಯ ಮೊತ್ತಕ್ಕೆ ಹರಾಜಾಗಿದ್ದಾರೆ. 20 ಲಕ್ಷ ಮೂಲಬೆಲೆ ಹೊಂದಿದ್ದ ವಿವ್ರಂತ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 2.6 ಕೋಟಿ ಕೊಟ್ಟು ಖರೀದಿ ಮಾಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Fri, 23 December 22

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?