Himanshu Sharma: RCB ತಂಡಕ್ಕೆ ಯುವ ಆಟಗಾರ ಆಯ್ಕೆ

IPL 2023 Auction: ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಐದು ಆಟಗಾರರನ್ನು ರಿಲೀಸ್ ಮಾಡಿದ್ದ ಆರ್​ಸಿಬಿ ತಂಡವು 18 ಪ್ಲೇಯರ್ಸ್ ಅನ್ನು ಉಳಿಸಿಕೊಂಡಿತ್ತು.

TV9 Web
| Updated By: ಝಾಹಿರ್ ಯೂಸುಫ್

Updated on:Dec 23, 2022 | 6:01 PM

ಐಪಿಎಲ್ ಸೀಸನ್ 16 ಮಿನಿ ಹರಾಜಿನಲ್ಲಿ ಆರ್​ಸಿಬಿ 2ನೇ ಆಟಗಾರರನ್ನು ಖರೀದಿಸಿದೆ. ಅನ್​ಕ್ಯಾಪ್ಡ್ ಪ್ಲೇಯರ್ಸ್ ಲೀಸ್ಟ್​ನಲ್ಲಿದ್ದ ಯುವ ಆಟಗಾರ ಹಿಮಾಂಶು ಶರ್ಮಾ ಅವರನ್ನು ಆರ್​ಸಿಬಿ ಮೂಲ ಬೆಲೆ 20 ಲಕ್ಷ ರೂ. ನೀಡಿ ತನ್ನದಾಗಿಸಿಕೊಂಡಿದೆ.

1 / 5
ಇದಕ್ಕೂ ಮುನ್ನ ಆರ್​ಸಿಬಿ ಇಂಗ್ಲೆಂಡ್ ತಂಡದ ಎಡಗೈ ವೇಗಿ ರೀಸ್​ ಟೋಪ್ಲಿ ಅವರನ್ನು 1 ಕೋಟಿ 90 ಲಕ್ಷ ರೂ. ನೀಡಿ ಖರೀದಿಸಿತ್ತು. ಇದೀಗ ಹಿಮಾಂಶು ಶರ್ಮಾ ಅವರ ಖರೀದಿಯೊಂದಿಗೆ ಆರ್​ಸಿಬಿ ಆಟಗಾರರ ಒಟ್ಟು ಸಂಖ್ಯೆ 20 ಕ್ಕೇರಿದೆ.

2 / 5
ದೆಹಲಿ ಮೂಲದ ಎಡಗೈ ಆಟಗಾರನಾಗಿರುವ ಹಿಮಾಂಶು ಶರ್ಮಾ ಕಳೆದ ಸೀಸನ್​ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅದರಂತೆ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡ ಹಿಮಾಂಶು ಅವರನ್ನು ಆರ್​ಸಿಬಿ ತನ್ನದಾಗಿಸಿಕೊಂಡಿದೆ.

3 / 5
ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಐದು ಆಟಗಾರರನ್ನು ರಿಲೀಸ್ ಮಾಡಿದ್ದ ಆರ್​ಸಿಬಿ ತಂಡವು 18 ಪ್ಲೇಯರ್ಸ್ ಅನ್ನು ಉಳಿಸಿಕೊಂಡಿತ್ತು. ಅದರಂತೆ 8.75 ಕೋಟಿ ರೂ. ಹರಾಜು ಮೊತ್ತದೊಂದಿಗೆ ಕಾಣಿಸಿಕೊಂಡಿದ್ದ ಆರ್​ಸಿಬಿ ಇದುವರೆಗೆ ಇಬ್ಬರು ಆಟಗಾರರನ್ನು ಖರೀದಿಸಿದೆ.

4 / 5
ಆರ್​ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್‌, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಝಲ್‌ವುಡ್, ಸಿದ್ಧಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ

5 / 5

Published On - 6:01 pm, Fri, 23 December 22

Follow us