Ranji Trophy 2024: ಚಂಡೀಗಢ್ ವಿರುದ್ಧದ ಪಂದ್ಯ ಡ್ರಾ: ಮುಂದಿನ ಸುತ್ತಿಗೆ ಕರ್ನಾಟಕ
Ranji Trophy 2024: ರಣಜಿ ಟ್ರೋಫಿಯ ಗ್ರೂಪಿ-ಸಿ ನಲ್ಲಿ ನಡೆದ ಕರ್ನಾಟಕ ಮತ್ತು ಚಂಡೀಗಢ್ ನಡುವಣ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ. ಈ ಡ್ರಾನ ಹೊರತಾಗಿಯೂ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದು, ಮುಂದಿನ ಪಂದ್ಯದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. ಈ ಪಂದ್ಯವು ನಾಗ್ಪುರದ ವಿಸಿಎ ಮೈದಾನದಲ್ಲಿ ನಡೆಯಲಿದೆ.
ಹುಬ್ಬಳ್ಳಿಯ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಚಂಡೀಗಢ್-ಕರ್ನಾಟಕ ನಡುವಣ ರಣಜಿ ಪಂದ್ಯವು (Ranji Trophy 2024) ಡ್ರಾನಲ್ಲಿ ಅಂತ್ಯ ಕಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚಂಡೀಗಢ ತಂಡವು ಕರಣ್ ಕೈಲಾ (79) ಅವರ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 267 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಕರ್ನಾಟಕ ತಂಡದ ಪರ ಮಯಾಂಕ್ ಅಗರ್ವಾಲ್ (57), ಹಾರ್ದಿಕ್ ರಾಜ್ (82) ಅರ್ಧಶತಕ ಬಾರಿಸಿದರೆ, ಮನೀಶ್ ಪಾಂಡೆ (148), ಶ್ರೀನಿವಾಸ್ ಶರತ್ (100) ಹಾಗೂ ವಿಜಯಕುಮಾರ್ ವೈಶಾಕ್ (103) ಭರ್ಜರಿ ಶತಕ ಸಿಡಿಸಿದರು. ಈ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 563 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.
ದ್ವಿತೀಯ ಇನಿಂಗ್ಸ್ ಆರಂಭಿಸಿದ ಚಂಡೀಗಢ್ ತಂಡದ ಪರ ಅರ್ಸ್ಲಾನ್ ಖಾನ್ (63) ಅರ್ಧಶತಕ ಬಾರಿಸಿದರೆ, ಮಯಾಂಕ್ ಸಿಧು (56) ಹಾಗೂ ಕರಣ್ ಕೈಲಾ (25) ಕ್ರೀಸ್ ಕಚ್ಚಿ ನಿಂತರು. ಪರಿಣಾಮ ಕರ್ನಾಟಕ ತಂಡವು 236 ರನ್ಗಳಿಗೆ 5 ವಿಕೆಟ್ ಕಬಳಿಸಿದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಈ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿತು.
ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಮನೀಶ್ ಪಾಂಡೆ , ಹಾರ್ದಿಕ್ ರಾಜ್ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಅನೀಶ್ ಕೆ ವಿ , ಮುರಳೀಧರ ವೆಂಕಟೇಶ್ , ವಿಜಯ್ ಕುಮಾರ್ ವೈಶಾಕ್ , ಶಶಿ ಕುಮಾರ್ ಕೆ , ವಾಸುಕಿ ಕೌಶಿಕ್.
ಇದನ್ನೂ ಓದಿ: Yashasvi Jaiswal: ಸಿಕ್ಸ್ ಸಿಡಿಸಿಯೇ ವಿಶ್ವ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಚಂಡೀಗಢ್ ಪ್ಲೇಯಿಂಗ್ ಇಲೆವೆನ್: ಮನನ್ ವೋಹ್ರಾ (ನಾಯಕ) , ಶಿವಂ ಭಾಂಬ್ರಿ , ಅರ್ಸ್ಲಾನ್ ಖಾನ್ , ಕುನಾಲ್ ಮಹಾಜನ್ , ಅಂಕಿತ್ ಕೌಶಿಕ್ , ಮಯಾಂಕ್ ಸಿಧು (ವಿಕೆಟ್ ಕೀಪರ್) , ಗುರಿಂದರ್ ಸಿಂಗ್ , ರೋಹಿತ್ ಧಂಡಾ , ಕರಣ್ ಕೈಲಾ , ಜಗಜಿತ್ ಸಿಂಗ್ , ಹರ್ತೇಜಸ್ವಿ ಕಪೂರ್.
ಕ್ವಾರ್ಟರ್ ಫೈನಲ್ಗೆ ಕರ್ನಾಟಕ:
ಈ ಡ್ರಾ ಹೊರತಾಗಿಯೂ ಕರ್ನಾಟಕ ತಂಡವು ರಣಜಿ ಟ್ರೋಫಿ 2024 ರಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಆಡಿರುವ 7 ಪಂದ್ಯಗಳಲ್ಲಿ 3 ಜಯ, 3 ಡ್ರಾ ಹಾಗೂ 1 ಸೋಲಿನೊಂದಿಗೆ ಕರ್ನಾಟಕ ತಂಡವು ಗ್ರೂಪ್-ಸಿ ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದು, ಈ ಮೂಲಕ ಮುಂದಿನ ಹಂತಕ್ಕೇರಿದೆ. ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡ ವಿದರ್ಭ ತಂಡವನ್ನು ಎದುರಿಸಲಿದೆ.