Ranji Trophy: ಜನವರಿ 5 ರಿಂದ ರಣಜಿ ಟ್ರೋಫಿ ಆರಂಭ; ದೇಶಿ ಸೀಸನ್​ ಪೂರ್ಣ ವೇಳಾಪಟ್ಟಿ ಹೀಗಿದೆ

Ranji Trophy: ಭಾರತದ ಪ್ರಧಾನ ರೆಡ್-ಬಾಲ್ ದೇಶೀಯ ಪಂದ್ಯಾವಳಿಯಾದ ರಣಜಿ ಟ್ರೋಫಿಯನ್ನು ಮುಂದಿನ ವರ್ಷ ಅಂದರೆ, 2024ರ ಜನವರಿ 5 ರಿಂದ ಮಾರ್ಚ್ 14 ರವರೆಗೆ ಆಡಲು ನಿರ್ಧರಿಸಲಾಗಿದೆ.

Ranji Trophy: ಜನವರಿ 5 ರಿಂದ ರಣಜಿ ಟ್ರೋಫಿ ಆರಂಭ; ದೇಶಿ ಸೀಸನ್​ ಪೂರ್ಣ ವೇಳಾಪಟ್ಟಿ ಹೀಗಿದೆ
ರಣಜಿ ಟ್ರೋಫಿ
Follow us
TV9 Web
| Updated By: ಪೃಥ್ವಿಶಂಕರ

Updated on:Jun 19, 2023 | 1:48 PM

2023-24 ರ ಭಾರತದ ದೇಶೀ ಕ್ರಿಕೆಟ್ ಸೀಸನ್ ದುಲೀಪ್ ಟ್ರೋಫಿ (Duleep Trophy)ಯೊಂದಿಗೆ ಜೂನ್ 28 ರಂದು ಪ್ರಾರಂಭವಾಗಲಿದೆ. ಇದರೊಂದಿಗೆ ಭಾರತ ದೇಶೀ ಕ್ರಿಕೆಟ್​ಗೆ ಚಾಲನೆ ಸಿಗಲಿದೆ. ಆ ಬಳಿಕ ದೇವಧರ್ ಟ್ರೋಫಿ ಜುಲೈ 24 ರಿಂದ ಆಗಸ್ಟ್ 4 ರವರೆಗೆ ನಡೆಯಲಿದೆ. ಅಕ್ಟೋಬರ್ 1 ರಿಂದ 5 ರ ನಡುವೆ ಇರಾನಿ ಕಪ್ ನಡೆಯಲಿದೆ. ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ (Syed Mushtaq Ali) ಟ್ರೋಫಿ ಅಕ್ಟೋಬರ್ 16 ರಿಂದ 27 ರವರೆಗೆ ಮೊಹಾಲಿ, ಮುಂಬೈ, ರಾಂಚಿ, ಜೈಪುರ ಮತ್ತು ಡೆಹ್ರಾಡೂನ್‌ನಲ್ಲಿ ನಡೆಯಲಿದೆ. ನಾಕೌಟ್ ಪಂದ್ಯಗಳು ಮೊಹಾಲಿಯಲ್ಲಿ ಅಕ್ಟೋಬರ್ 31 ರಿಂದ ನವೆಂಬರ್ 6 ರವರೆಗೆ ನಡೆಯಲಿವೆ. ಆ ಬಳಿಕ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯಗಳು ನವೆಂಬರ್ 23 ರಿಂದ ಡಿಸೆಂಬರ್ 5 ರವರೆಗೆ ನಡೆಯಲಿದ್ದು, ನಾಕೌಟ್ ಪಂದ್ಯಗಳು ಡಿಸೆಂಬರ್ 9 ರಿಂದ 16 ರವರೆಗೆ ನಡೆಯಲಿವೆ. ಆ ಬಳಿಕ ಭಾರತದ ಪ್ರಧಾನ ರೆಡ್-ಬಾಲ್ ದೇಶೀಯ ಪಂದ್ಯಾವಳಿಯಾದ ರಣಜಿ ಟ್ರೋಫಿಯನ್ನು (Ranji Trophy 2024) ಮುಂದಿನ ವರ್ಷ ಅಂದರೆ, 2024ರ ಜನವರಿ 5 ರಿಂದ ಮಾರ್ಚ್ 14 ರವರೆಗೆ ಆಡಲು ನಿರ್ಧರಿಸಲಾಗಿದೆ.

ರಣಜಿಯ ಹೊಸ ಸೀಸನ್ ಜನವರಿ 5 ರಂದು ಪ್ರಾರಂಭವಾಗಲಿದೆ. ಇದು 70 ದಿನಗಳ ಕಾಲ ನಡೆಯಲಿದ್ದು, ಪಂದ್ಯಾವಳಿ ಮಾರ್ಚ್ 14 ರಂದು ಮುಕ್ತಾಯಗೊಳ್ಳಲಿದೆ. ಲೀಗ್ ಹಂತದ ಪಂದ್ಯಗಳು ಫೆ.19 ರವರೆಗೆ ನಡೆಯಲಿವೆ. ಆ ಬಳಿಕ ಫೆಬ್ರವರಿ 23 ರಿಂದ ನಾಕೌಟ್ ಪಂದ್ಯಗಳು ಪ್ರಾರಂಭವಾಗಲಿವೆ. ಕಳೆದ ಆವೃತ್ತಿಯ ಸೆಮಿಫೈನಲಿಸ್ಟ್​ಗಳಾದ ಕರ್ನಾಟಕ ಮತ್ತು ತಮಿಳುನಾಡು ಮುಂಬರುವ ರಣಜಿ ಸೀಸನ್​ನಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಅಲ್ಲದೆ ಸೌರಾಷ್ಟ್ರ ಮತ್ತು ಮಹಾರಾಷ್ಟ್ರ ಕೂಡ ಇದೇ ಗುಂಪಿನಲ್ಲಿವೆ.

BCCI: ರಣಜಿ ಗೆದ್ದವರಿಗೆ 5 ಕೋಟಿ; ದೇಶೀಯ ಪಂದ್ಯಾವಳಿಗಳ ಬಹುಮಾನದ ಗಾತ್ರ ಹೆಚ್ಚಿಸಿದ ಬಿಸಿಸಿಐ..!

ಎಲ್ಲಾ ತಂಡಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಗಿದೆ

  1. ಗುಂಪು ಎ: ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ವಿದರ್ಭ, ರಾಜಸ್ಥಾನ, ಹರಿಯಾಣ, ಮಣಿಪುರ.
  2. ಗುಂಪು ಬಿ: ಬಂಗಾಳ, ಆಂಧ್ರ, ಮುಂಬೈ, ಕೇರಳ, ಛತ್ತೀಸ್‌ಗಢ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ.
  3. ಗುಂಪು ಸಿ: ಕರ್ನಾಟಕ, ಪಂಜಾಬ್, ರೈಲ್ವೆ, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರ, ಚಂಡೀಗಢ.
  4. ಗುಂಪು ಡಿ: ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ, ಬರ್ದಾ, ದೆಹಲಿ, ಒಡಿಶಾ, ಪುದುಚೇರಿ, ಜಮ್ಮು ಮತ್ತು ಕಾಶ್ಮೀರ.
  5. ಪ್ಲೇಟ್ ಗುಂಪು: ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ, ಅರುಣಾಚಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Mon, 19 June 23

ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ