
ಪಾಕಿಸ್ತಾನ ಕ್ರಿಕೆಟ್ನ ಲೆಗ್ ಸ್ಪಿನ್ನರ್ ಯಾಸಿರ್ ಶಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಇಸ್ಲಾಮಾಬಾದ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. 14 ವರ್ಷದ ಬಾಲಕಿ ಯಾಸಿರ್ ಶಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಯಾಸಿರ್ ಶಾ ಸ್ನೇಹಿತ ಫರ್ಹಾನ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಫರ್ಹಾನ್ ಮತ್ತು ಯಾಸಿರ್ ಶಾ ತನಗೆ ಕಿರುಕುಳ ನೀಡಿದ್ದಲ್ಲದೆ, ಈ ಕೃತ್ಯವನ್ನು ಎಲ್ಲೂ ಹೇಳದಂತೆ ಧಮ್ಕಿ ಹಾಕಿದ್ದಾರೆ ಎಂದು 14 ವರ್ಷದ ಬಾಲಕಿ ಆರೋಪಿಸಿದ್ದಾರೆ. ಯಾಸಿರ್ ಶಾ ಹುಡುಗಿಗೆ ಫೋನ್ ಮೂಲಕ ಬೆದರಿಕೆ ಹಾಕಿದ್ದು, ತನ್ನ ಸ್ನೇಹಿತ ಫರ್ಹಾನ್ನನ್ನು ಮದುವೆಯಾಗುವಂತೆ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಯಾಸಿರ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಅದೇ ಸಮಯದಲ್ಲಿ, ಆರೋಪ ಮಾಡಿದ ಯುವತಿಯ ವೈದ್ಯಕೀಯ ಪರೀಕ್ಷೆಯನ್ನು ಶೀಘ್ರದಲ್ಲೇ ಮಾಡಲಾಗುವುದು ಮತ್ತು ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 35 ವರ್ಷದ ಯಾಸಿರ್ ಶಾ ಪಾಕಿಸ್ತಾನದ ದಿಗ್ಗಜ ಸ್ಪಿನ್ನರ್‌ಗಳಲ್ಲಿ ಒಬ್ಬರು. ಈ ಆಟಗಾರ 46 ಟೆಸ್ಟ್‌ಗಳಲ್ಲಿ 235 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ, ಯಾಸಿರ್ 25 ಏಕದಿನ ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.
ಯಾಸಿರ್ ಶಾ ಇಂತಹ ಗಂಭೀರ ಆರೋಪ ಎದುರಿಸುತ್ತಿರುವ ಮೊದಲ ಪಾಕಿಸ್ತಾನಿ ಕ್ರಿಕೆಟಿಗರೇನಲ್ಲ. ಪಾಕಿಸ್ತಾನದ ನಾಯಕ ಬಾಬರ್ ಅಜಮ್, ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ಇಂತಹ ಗಂಭೀರ ಆರೋಪಗಳನ್ನು ಎದುರಿಸಿದ್ದಾರೆ. ಆದರೆ, ಆ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.