IND vs ENG: ಕೋಚ್ ರವಿಶಾಸ್ತ್ರಿ ಎಡವಟ್ಟು; ಮ್ಯಾಂಚೆಸ್ಟರ್ ಟೆಸ್ಟ್ ಮುಂದೂಡಿದ ಆಡಳಿತ ಮಂಡಳಿ

TV9 Digital Desk

| Edited By: ಪೃಥ್ವಿಶಂಕರ

Updated on: Sep 10, 2021 | 3:56 PM

IND vs ENG: ಲಂಡನ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವಾಗಿದ್ದು, ಶಾಸ್ತ್ರಿ ಮತ್ತು ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಇತರ ಸದಸ್ಯರು ಭಾಗವಹಿಸಿದ್ದರು. ಮಾಹಿತಿಯ ಪ್ರಕಾರ, ಪುಸ್ತಕ ಬಿಡುಗಡೆಯಲ್ಲಿ ಇಡೀ ಸಭಾಂಗಣವು ಜನರಿಂದ ತುಂಬಿತ್ತು.

IND vs ENG: ಕೋಚ್ ರವಿಶಾಸ್ತ್ರಿ ಎಡವಟ್ಟು; ಮ್ಯಾಂಚೆಸ್ಟರ್ ಟೆಸ್ಟ್ ಮುಂದೂಡಿದ ಆಡಳಿತ ಮಂಡಳಿ
ರವಿಶಾಸ್ತ್ರಿ

ತಪ್ಪು ಯಾವಾಗ ಭಾರವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಂಗ್ಲೆಂಡಿನಲ್ಲಿ ಏನೇ ನಡೆದರೂ ಅದು ಒಂದು ದೊಡ್ಡ ತಪ್ಪಿನ ಅಡ್ಡ ಪರಿಣಾಮ. ಈ ತಪ್ಪನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಮಾಡಿದ್ದಾರೆ. ಈ ತಪ್ಪಿನಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕೂಡ ಪಾಲುದಾರರಾಗಿದ್ದಾರೆ. ವಾಸ್ತವವಾಗಿ, TOI ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಕಳೆದ ವಾರ ಲಂಡನ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಭಾಗವಹಿಸಿದ್ದಕ್ಕೆ ಬಿಸಿಸಿಐ ಅಸಮಾಧಾನಗೊಂಡಿತು. ಆಂಗ್ಲ ಪತ್ರಿಕೆ ಬಿಸಿಸಿಐಗೆ ಸಂಬಂಧಿಸಿದ ಮೂಲಗಳಿಂದ ಈ ಮಾಹಿತಿಯನ್ನು ಹೊರಹಾಕಿತ್ತು.

ಇದು ಲಂಡನ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವಾಗಿದ್ದು, ಶಾಸ್ತ್ರಿ ಮತ್ತು ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಇತರ ಸದಸ್ಯರು ಭಾಗವಹಿಸಿದ್ದರು. ಮಾಹಿತಿಯ ಪ್ರಕಾರ, ಪುಸ್ತಕ ಬಿಡುಗಡೆಯಲ್ಲಿ ಇಡೀ ಸಭಾಂಗಣವು ಜನರಿಂದ ತುಂಬಿತ್ತು. ಈ ಕಾರ್ಯಕ್ರಮಕ್ಕೆ ಹಾಜರಾದ 5 ದಿನಗಳ ನಂತರ ರವಿಶಾಸ್ತ್ರಿ ಕೊರೊನಾ ಸೋಂಕಿಗೆ ತುತ್ತಾದರು. ಅವರ ಸಂಪರ್ಕದಿಂದಾಗಿ, ಬೌಲಿಂಗ್ ತರಬೇತುದಾರ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್, ಮತ್ತು ಫಿಸಿಯೋ ನಿತಿನ್ ಪಟೇಲ್, ಎಲ್ಲರೂ ಪಾಸಿಟಿವ್ ಆಗಿ ಕಂಡುಬಂದರು. ಅದರ ನಂತರ ಇವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಎರಡು ದಿನಗಳ ನಂತರ, ತಂಡದ ಮತ್ತೊಬ್ಬ ಸದಸ್ಯರಾದ ಫಿಸಿಯೋ ಯೋಗೀಶ್ ಪರ್ಮಾರ್ ಅವರಿಗೂ ಕೊರೊನಾ ಪಾಸಿಟಿವ್ ಆಗಿದೆ.

ಎಷ್ಟು ದೊಡ್ಡ ತಪ್ಪು? ಆದಾಗ್ಯೂ, ರವಿಶಾಸ್ತ್ರಿ ಮಾಡಿದ ತಪ್ಪು ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಹೊರತುಪಡಿಸಿ, ಭಾರತೀಯ ಕ್ರಿಕೆಟ್ ತಂಡದ ಎಲ್ಲಾ ಸಹಾಯಕ ಸಿಬ್ಬಂದಿ ಒಬ್ಬರ ನಂತರ ಒಬ್ಬರಂತೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಶಾಸ್ತ್ರಿಯವರ ತಪ್ಪಿನಿಂದಾಗಿ, ಟೀಮ್ ಇಂಡಿಯಾದೊಳಗೆ ಕೊರೊನಾ ಪ್ರವೇಶ ಮಾಡಿದೆ. ಇದರ ಪರಿಣಾಮ ಎಂಬಂತೆ ಈಗ ಪಂದ್ಯ ರದ್ದಾಗಿದೆ

ಕೊರೊನಾ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಟೀಮ್ ಇಂಡಿಯಾದ ಆಟಗಾರರು ಮ್ಯಾಂಚೆಸ್ಟರ್‌ನಲ್ಲಿ ಆಡಲು ನಿರಾಕರಿಸಿದರು. ಹೀಗಾಗಿ 5 ನೇ ಟೆಸ್ಟ್ ಅನ್ನು ಮುಂದೂಡಬೇಕಾಯಿತು. ಅದೇ ಸಮಯದಲ್ಲಿ, 14 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ಸರಣಿ ಗೆಲುವಿನ ಅಂಚಿನಲ್ಲಿರುವ ಟೀಮ್ ಇಂಡಿಯಾಕ್ಕಾಗಿ ಕಾಯುವಿಕೆ ಕೂಡ ಹೆಚ್ಚಾಗಿದೆ. ಏಕೆಂದರೆ, ಈ ಟೆಸ್ಟ್ ಪಂದ್ಯವನ್ನು ನಂತರ ಆಡಲಾಗುವುದು ಎಂದು ಬಿಸಿಸಿಐ ಮೂಲಗಳನ್ನು ಆದರಿಸಿ ಪಿಟಿಐ ಮಾಹಿತಿ ನೀಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada