IND vs ENG: ಇಂಗ್ಲೆಂಡ್ ಬ್ಯಾಟರ್​ಗೆ ಓಪನ್ ಚಾಲೆಂಜ್ ಮಾಡಿದ ಜಡೇಜಾ: ಹೆದರಿದ ಜೋ ರೂಟ್: ವಿಡಿಯೋ

Ravindra Jadeja and Joe Root: ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ನ ಮೊದಲ ದಿನದಂದು ಇಂಗ್ಲೆಂಡ್ ಪರ ಜೋ ರೂಟ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ದಿನದ ಅಂತ್ಯದ ವೇಳೆಗೆ ಅವರಿಗೆ ಶತಕ ಪೂರೈಸುವ ಸುವರ್ಣಾವಕಾಶ ಕೂಡ ಇತ್ತು. ಆದರೆ, ಅವರು ರವೀಂದ್ರ ಜಡೇಜಾಗೆ ಹೆದರಿ ಈ ಸಾಹಸದಿಂದ ಹಿಂದೆ ಸರಿದರು.

IND vs ENG: ಇಂಗ್ಲೆಂಡ್ ಬ್ಯಾಟರ್​ಗೆ ಓಪನ್ ಚಾಲೆಂಜ್ ಮಾಡಿದ ಜಡೇಜಾ: ಹೆದರಿದ ಜೋ ರೂಟ್: ವಿಡಿಯೋ
Joe Root And Ravindra Jadeja
Updated By: Vinay Bhat

Updated on: Jul 16, 2025 | 6:37 PM

ಬೆಂಗಳೂರು (ಜು. 11): ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯ ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲ ದಿನದಾಟದ ಅಂತ್ಯದ ವೇಳೆಗೆ, ಇಂಗ್ಲೆಂಡ್ ತಂಡವು 4 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದೆ. ಜೋ ರೂಟ್ 99 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ ಮತ್ತು ಬೆನ್ ಸ್ಟೋಕ್ಸ್ 39 ರನ್‌ ಗಳಿಸಿದ್ದಾರೆ. ಜೋ ರೂಟ್​ಗೆ ಶತಕ ಪೂರ್ಣಗೊಳಿಸಲು ಕೇವಲ ಒಂದು ರನ್ ಮಾತ್ರ ಬಾಕಿಯಿದೆ.

ಪಂದ್ಯದ ಮೊದಲ ದಿನದಂದು ಇಂಗ್ಲೆಂಡ್ ಪರ ಜೋ ರೂಟ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ದಿನದ ಅಂತ್ಯದ ವೇಳೆಗೆ ಅವರಿಗೆ ಶತಕ ಪೂರೈಸುವ ಸುವರ್ಣಾವಕಾಶ ಕೂಡ ಇತ್ತು. ಆದರೆ, ಜಡೇಜಾ ಅವರಿಗೆ ಹೆದರಿ ಈ ಸಾಹಸದಿಂದ ಹಿಂದೆ ಸರಿದರು. ಮೊದಲ ದಿನದ ಕೊನೆಯ 83ನೇ ಓವರ್ ಅನ್ನು ಆಕಾಶ್ ದೀಪ್ ಎಸೆದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ರೂಟ್ ಒಂದು ರನ್ ಪಡೆದರು. ಇದರೊಂದಿಗೆ ಅವರು 99 ರನ್‌ಗಳಿಗೆ ತಲುಪಿದರು. ನಂತರ ಅವರು ಎರಡನೇ ರನ್ ತೆಗೆದುಕೊಳ್ಳಲು ಬಯಸಿದ್ದರು. ಆದರೆ ಚೆಂಡು ಫೀಲ್ಡರ್ ರವೀಂದ್ರ ಜಡೇಜಾ ಅವರ ಕೈಯಲ್ಲಿತ್ತು.

ಇದನ್ನೂ ಓದಿ
ಇಂಗ್ಲೆಂಡ್​ನ ಬಾಝ್ ಬಾಲ್ ಆಟಕ್ಕೆ ಬ್ರೇಕ್ ಹಾಕಿದ ಭಾರತ
ಮಳೆ-ಕೆಟ್ಟ ಹವಾಮಾನ ಅಲ್ಲ.. ಆದರೂ ಮೂರನೇ ಟೆಸ್ಟ್ ದಿಢೀರ್ ನಿಂತಿದ್ದೇಕೆ?
ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್‌ 251/4
ಸತತ ಐದು ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ಐರಿಶ್ ವೇಗಿ

ರವೀಂದ್ರ ಜಡೇಜಾ- ಜೋ ರೂಟ್ ತಮಾಷೆಯ ವಿಡಿಯೋ:

 

ರೂಟ್ ಎರಡು ರನ್ ಗಳಿಸಬಹುದು ಎಂದು ಭಾವಿಸಿದ ಜಡೇಜಾ ಬೇಗನೆ ಚೆಂಡನ್ನು ಹಿಡಿದು ವಿಕೆಟ್ ಕೀಪರ್ ತುದಿಗೆ ಎಸೆಯಲು ಮುಂದಾದರು. ಆದರೆ, ವಿಶ್ವದ ಶ್ರೇಷ್ಠ ಫೀಲ್ಡರ್ ಜಡೇಜಾ ಕೈಯಲ್ಲಿ ಬಾಲ್ ಇದ್ದ ಕಾರಣ ರೂಟ್ ಎರಡು ರನ್ ಓಡಬೇಕೆ ಅಥವಾ ಬೇಡವೆ ಎಂಬ ಗೊಂದಲದಲ್ಲಿದ್ದರು. ಇದೇ ಸಂದರ್ಭ ತಮಾಷೆಯ ಘಟನೆಯೊಂದು ನಡೆಯಿತು. ರೂಟ್‌ ಬಳಿ ಜಡೇಜಾ ಇನ್ನೊಂದು ರನ್‌ಗಾಗಿ ಓಡಲು ತನ್ನ ಕೈಯಿಂದ ಸಿಗ್ನಲ್ ಮಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೆ ಜಡ್ಡು ಚೆಂಡನ್ನು ಪುನಃ ನೆಲಕ್ಕೆ ಬೀಳಿಸಿದರು.

IND vs ENG: ಇಂಗ್ಲೆಂಡ್​ನ ಬಾಝ್ ಬಾಲ್ ಆಟಕ್ಕೆ ಬ್ರೇಕ್ ಹಾಕಿದ ಭಾರತ: ಸ್ಟೋಕ್ಸ್ ಪಡೆಯ ನಿಧಾನಗತಿಯ ಆಟ

ಈ ಸಮಯದಲ್ಲಿ, ರೂಟ್ ಕ್ರೀಸ್‌ನಿಂದ ಹೊರಬಂದರು. ತಕ್ಷಣ ಜಡೇಜಾ ಪುನಃ ಎತ್ತಿ ವಿಕೆಟ್ ಕೀಪರ್ ಕಡೆಗೆ ಎಸೆದರು. ಅತ್ತ ರೂಟ್ ಮುಗುಳ್ನಕ್ಕು ಪುನಃ ಕ್ರೀಸ್ ಒಳಗೆ ಹಿಂತಿರುಗಿದರು. ಜಡೇಜಾ ಕೂಡ ನಗುತ್ತಾ ಪ್ರತಿಕ್ರಿಯಿಸಿದರು. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬೆನ್ ಸ್ಟೋಕ್ಸ್ ಓವರ್‌ನ ಕೊನೆಯ ಎರಡು ಎಸೆತಗಳನ್ನು ಆಡಿದ ಪರಿಣಾಮ ದಿನದ ಆಟ ಕೊನೆಗೊಂಡಿತು. ಈ ರೀತಿಯಾಗಿ ಜೋ ರೂಟ್ 99 ರನ್‌ಗಳಿಗೆ ಔಟಾಗದೆ ಉಳಿದರು.

ರೂಟ್ ಶತಕಕ್ಕೆ ಕೇವಲ ಒಂದು ರನ್ ಬೇಕು

ಭಾರತ ತಂಡದ ವಿರುದ್ಧದ ಮೊದಲ ದಿನದಂದು ಜ್ಯಾಕ್ ಕ್ರೌಲಿ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ ಮತ್ತು 18 ರನ್ ಗಳಿಸಿ ಔಟಾದರು. ಅವರನ್ನು ಹೊರತುಪಡಿಸಿ, ಬೆನ್ ಡಕೆಟ್ 23 ರನ್ ಗಳಿಸಿದರು. ನಿತೀಶ್ ರೆಡ್ಡಿ ಇಬ್ಬರ ವಿಕೆಟ್ ಪಡೆದರು. 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ಓಲಿ ಪೋಪ್ 44 ರನ್ ಗಳಿಸಿದರು. ಜೋ ರೂಟ್ ಇದುವರೆಗೆ 191 ಎಸೆತಗಳಲ್ಲಿ 99 ರನ್ ಗಳಿಸಿದ್ದಾರೆ, ಇದರಲ್ಲಿ 9 ಬೌಂಡರಿಗಳು ಸೇರಿವೆ. ಈಗ ಅವರು ಎರಡನೇ ದಿನದ ಆರಂಭದಲ್ಲೇ ಶತಕ ಗಳಿಸುವ ಸಂಭವವಿದೆ. ಬೆನ್ ಸ್ಟೋಕ್ಸ್ 39 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 am, Fri, 11 July 25