ನನ್ನ ಪತಿ ಒಳ್ಳೆಯವರು, ಟೀಮ್ ಇಂಡಿಯಾದ ಉಳಿದವರು ಕೆಟ್ಟವರು..!

Ravindra Jadeja: ಭಾರತ ತಂಡದ ಅನುಭವಿ ಆಲ್​ರೌಂಡರ್ ರವೀಂದ್ರ ಜಡೇಜಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದಾಗ್ಯೂ ಅವರು ಭಾರತ ಏಕದಿನ ಹಾಗೂ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿ ಮುಂದುವರೆದಿದ್ದಾರೆ.

ನನ್ನ ಪತಿ ಒಳ್ಳೆಯವರು, ಟೀಮ್ ಇಂಡಿಯಾದ ಉಳಿದವರು ಕೆಟ್ಟವರು..!
Ravindra Jadeja - Rivaba Jadeja

Updated on: Dec 11, 2025 | 9:53 AM

ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ರಿವಾಬಾ ಜಡೇಜಾ ನೀಡಿರುವ ಹೇಳಿಕೆಯೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪತಿಯನ್ನು ಹೊಗಳುವ ಭರದಲ್ಲಿ ಅವರು ಟೀಮ್ ಇಂಡಿಯಾದ ಇತರೆ ಆಟಗಾರರು ತೆಗಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ರಾಜಕೀಯ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮಾತನಾಡಿದ ರಿವಾಬಾ, ತಮ್ಮ ಪತಿ ರವೀಂದ್ರ ಜಡೇಜಾ ಲಂಡನ್, ದುಬೈ ಮತ್ತು ಆಸ್ಟ್ರೇಲಿಯಾದಂತಹ ಹಲವು ದೇಶಗಳಿಗೆ ಕ್ರಿಕೆಟ್ ಆಡಲು ಪ್ರಯಾಣಿಸುತ್ತಾರೆ. ಇದರ ಹೊರತಾಗಿಯೂ, ಅವರು ಎಂದಿಗೂ ಯಾವುದೇ ವ್ಯಸನಗಳಿಗೆ ಒಳಗಾಗಿಲ್ಲ. ಅಂದರೆ, ಅವರು ಯಾವುದೇ ತಪ್ಪು ಮಾಡುತ್ತಿಲ್ಲ. ತುಂಬಾ ಒಳ್ಳೆಯವರು. ಆದರೆ ವಿದೇಶಿ ಪ್ರವಾಸದ ವೇಳೆ ಟೀಮ್ ಇಂಡಿಯಾದ ಇತರೆ ಆಟಗಾರರು ಕೆಟ್ಟ ಪ್ರವೃತ್ತಿಗಳಲ್ಲಿತೊಡಗುತ್ತಾರೆ ಎಂದು ಆರೋಪಿಸಿದ್ದಾರೆ.

ರಿವಾಬಾ ಜಡೇಜಾ ಅವರು ತಮ್ಮ ಪತಿಗೆ ಇಂತಹ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ಹಿಂಜರಿಕೆ ಇಲ್ಲ. ಅವರು ಬಯಸಿದರೆ  ಅದನ್ನು ಮಾಡಬಹುದು. ಆದರೆ ಅವರು ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವುದರಿಂದ ಅವರು ಹಾಗೆ ಮಾಡುವುದಿಲ್ಲ. ಆದರೆ ಭಾರತ ತಂಡದಲ್ಲಿರುವ ಇತರೆ ಆಟಗಾರರು ಕೆಟ್ಟ ಪ್ರವೃತ್ತಿಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಇದಾಗ್ಯೂ ರಿವಾಬಾ ಜಡೇಜಾ ಟೀಮ್ ಇಂಡಿಯಾ ಆಟಗಾರರು ಯಾವ ರೀತಿಯ ಕೆಟ್ಟ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇದೀಗ ತನ್ನ ಪತ್ನಿ ತುಂಬಾ ಒಳ್ಳೆಯವರು, ಇತರೆ ಆಟಗಾರರು ಕೆಟ್ಟವರು ಎಂಬಾರ್ಥದಲ್ಲಿ ರಿವಾಬಾ ಜಡೇಜಾ ನೀಡಿರುವ ಹೇಳಿಕೆ ಭಾರೀ ವೈರಲ್ ಆಗಿದ್ದು, ಜಡೇಜಾ ಪತ್ನಿ ವಿರುದ್ಧದ ಇತರೆ ಕ್ರಿಕೆಟಿಗರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: 56 ನಂಬರ್ ಕೇಳಿದ ಬಾಬರ್ ಆಝಂ, ಝೀರೋ ಸೇರಿಸಿ ನಂಬರ್ ನೀಡಿದ ಸಿಡ್ನಿ ಸಿಕ್ಸರ್ಸ್

ಅಂದಹಾಗೆ ರಿವಾಬಾ ಜಡೇಜಾ ಗುಜರಾತ್ ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಒಂದು ರಾಜ್ಯದ ಶಿಕ್ಷಣ ಸಚಿವರು ಭಾರತ ತಂಡದಲ್ಲಿರುವ ಇತರೆ ಆಟಗಾರರ ವಿರುದ್ಧದ ಮಾಡಿರುವ ಗಂಭೀರ ಆರೋಪ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.