AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಭಾರತೀಯ ಮೂಲದ ಇಬ್ಬರಿಗೆ ಸ್ಥಾನ

Men's U-19 World Cup 2026: ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಲಿರುವ ಅಂಡರ್-19 ಪುರುಷರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಜನವರಿ 15 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಬಾಂಗ್ಲಾದೇಶ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ಕಿರಿಯ ಆಟಗಾರರು ಕಣಕ್ಕಿಳಿಯಲಿದ್ದಾರೆ.

ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಭಾರತೀಯ ಮೂಲದ ಇಬ್ಬರಿಗೆ ಸ್ಥಾನ
Australia
ಝಾಹಿರ್ ಯೂಸುಫ್
|

Updated on: Dec 11, 2025 | 12:18 PM

Share

ಜನವರಿ 15 ರಿಂದ ಶುರುವಾಗಲಿರುವ ಅಂಡರ್​-19 ಪುರುಷರ ಕ್ರಿಕೆಟ್ ವಿಶ್ವಕಪ್​​ಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಭಾರತೀಯ ಮೂಲದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ತಂಡದ ನಾಯಕನಾಗಿ ಒಲೀವರ್ ಪೀಕ್ ಕಾಣಿಸಿಕೊಂಡಿದ್ದಾರೆ.

ಆಸೀಸ್ ಪಡೆಯಲ್ಲಿ ಭಾರತೀಯ ಮೂಲದವರು:

ಹದಿನೈದು ಸದಸ್ಯರುಗಳಲ್ಲಿ ಭಾರತೀಯ ಮೂಲದವರಾದ ಆರ್ಯನ್ ಶರ್ಮಾ ಹಾಗೂ ಜಾನ್ ಜೇಮ್ಸ್ ಸ್ಥಾನ ಪಡೆದಿದ್ದಾರೆ. ಆರ್ಯನ್  ಎಡಗೈ ಬ್ಯಾಟ್ಸ್‌ಮನ್ ಆಗಿದ್ದರೆ, ಜಾನ್ ಜೇಮ್ಸ್ ಬಲಗೈ ವೇಗದ ಆಲ್‌ರೌಂಡರ್. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದ ಅಂಡರ್-19 ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಇಬ್ಬರೂ ಆಟಗಾರರು ಕಾಣಿಸಿಕೊಂಡಿದ್ದರು.

ಈ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆರ್ಯನ್ ಶರ್ಮಾ ಹಾಗೂ ಜಾನ್ ಜೇಮ್ಸ್​ಗೆ ಕಿರಿಯರ ವಿಶ್ವಕಪ್ ತಂಡದಲ್ಲೂ ಸ್ಥಾನ ಲಭಿಸಿದೆ.

ಆಸ್ಟ್ರೇಲಿಯಾದಲ್ಲಿ ಏಷ್ಯನ್ನರ ಪಾರುಪತ್ಯ:

ಕಿರಿಯರ ವಿಶ್ವಕಪ್​ಗೆ ಪ್ರಕಟಿಸಲಾದ 15 ಸದಸ್ಯರುಗಳ ಈ ತಂಡದಲ್ಲಿ ಐದು ಮಂದಿ ಏಷ್ಯನ್ನರು ಇರುವುದು ವಿಶೇಷ. ಅಂದರೆ ಆರ್ಯನ್ ಶರ್ಮಾ ಮತ್ತು ಜಾನ್ ಜೇಮ್ಸ್ ಅಲ್ಲದೆ, ಶ್ರೀಲಂಕಾ ಮೂಲದ ನಾಡೆನ್ ಕೂರೆ ಮತ್ತು ನಿತೇಶ್ ಸ್ಯಾಮ್ಯುಯೆಲ್ ಕಾಣಿಸಿಕೊಂಡಿದ್ದಾರೆ. ಇನ್ನು  ಚೀನೀ ಮೂಲದ ಒಅಲೆಕ್ಸ್ ಲೀ ಯಂಗ್ ಕೂಡ ಆಸೀಸ್ ಪಡೆಯಲ್ಲಿದ್ದಾರೆ. ಅಂದರೆ 15 ಮಂದಿಯಲ್ಲಿ 5 ಮಂದಿ ಏಷ್ಯಾ ಮೂಲದವರು ಎಂಬುದು ವಿಶೇಷ.

ಆಸ್ಟ್ರೇಲಿಯಾ ಅಂಡರ್-19 ಏಕದಿನ​ ತಂಡ: ಒಲೀವರ್ ಪೀಕ್ (ನಾಯಕ), ಕೇಸಿ ಬಾರ್ಟನ್, ನಾಡೆನ್ ಕೂರೆ, ಜೇಡೆನ್ ಡ್ರೇಪರ್, ಬೆನ್ ಗಾರ್ಡನ್, ಸ್ಟೀವನ್ ಹೊಗನ್, ಥಾಮಸ್ ಹೊಗನ್, ಜಾನ್ ಜೇಮ್ಸ್, ಚಾರ್ಲ್ಸ್ ಲ್ಯಾಚ್ಮಂಡ್, ವಿಲ್ ಮಲಾಜ್‌ಜುಕ್, ನಿತೇಶ್ ಸ್ಯಾಮ್ಯುಯೆಲ್, ಹೇಡನ್ ಶಿಲ್ಲರ್, ಆರ್ಯನ್ ಶರ್ಮಾ, ವಿಲಿಯಂ ಟೇಲರ್, ಅಲೆಕ್ಸ್ ಲೀ ಯಂಗ್.

ಇದನ್ನೂ ಓದಿ: IPL 2026: ಐಪಿಎಲ್​ನಿಂದ ಸ್ಟಾರ್ ಆಟಗಾರ ಬ್ಯಾನ್..!

ಅಂಡರ್ 19 ವಿಶ್ವಕಪ್​ ಯಾವಾಗ?

ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಲಿರುವ ಅಂಡರ್-19 ಪುರುಷರ ಕ್ರಿಕೆಟ್​​ ವಿಶ್ವಕಪ್​ ಟೂರ್ನಿಯು ಜನವರಿ 15 ರಿಂದ ಶುರುವಾಗಲಿದೆ. ಏಕದಿನ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ.

ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್
ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್
‘ದಿ ಡೆವಿಲ್’ ಸಿನಿಮಾ: 15 ದಿನಗಳಿಂದ ಮನೆಗೆ ಹೋಗಿಲ್ಲ ದರ್ಶನ್ ಫ್ಯಾನ್ಸ್
‘ದಿ ಡೆವಿಲ್’ ಸಿನಿಮಾ: 15 ದಿನಗಳಿಂದ ಮನೆಗೆ ಹೋಗಿಲ್ಲ ದರ್ಶನ್ ಫ್ಯಾನ್ಸ್
ಸರ್ಕಾರದ ವಿರುದ್ಧ ತೊಡೆತಟ್ಟಿ ಗೆದ್ದ IPS:ಅಲೋಕ್ ಕುಮಾರ್ ಗತ್ತು ನೋಡಿ
ಸರ್ಕಾರದ ವಿರುದ್ಧ ತೊಡೆತಟ್ಟಿ ಗೆದ್ದ IPS:ಅಲೋಕ್ ಕುಮಾರ್ ಗತ್ತು ನೋಡಿ
Bigg Boss: ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?
Bigg Boss: ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?
ಭೀಕರ ಬೈಕ್​​ ಅಪಘಾತ: ಎದೆ ಝಲ್​​ ಎನಿಸುವಂತಿದೆ ದೃಶ್ಯ
ಭೀಕರ ಬೈಕ್​​ ಅಪಘಾತ: ಎದೆ ಝಲ್​​ ಎನಿಸುವಂತಿದೆ ದೃಶ್ಯ
ದರ್ಶನ್ ರಾಜಕೀಯಕ್ಕೆ ಬರಬೇಕಾ ಬೇಡವಾ ಅನ್ನೋದು ಫ್ಯಾನ್ಸ್ ನಿರ್ಧಾರ: ದಿನಕರ್
ದರ್ಶನ್ ರಾಜಕೀಯಕ್ಕೆ ಬರಬೇಕಾ ಬೇಡವಾ ಅನ್ನೋದು ಫ್ಯಾನ್ಸ್ ನಿರ್ಧಾರ: ದಿನಕರ್
ಹೊಸ ಲುಕ್​​ನಲ್ಲಿ ಪ್ರಧಾನಿ; ಧುರಂಧರ್ ಸ್ಟೈಲ್​ನ ಮೋದಿ ಮಾಂಟೇಜ್ ವೈರಲ್
ಹೊಸ ಲುಕ್​​ನಲ್ಲಿ ಪ್ರಧಾನಿ; ಧುರಂಧರ್ ಸ್ಟೈಲ್​ನ ಮೋದಿ ಮಾಂಟೇಜ್ ವೈರಲ್
ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಡಿಕೆ ಶಿವಕುಮಾರ್ ಆಪ್ತ
ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಡಿಕೆ ಶಿವಕುಮಾರ್ ಆಪ್ತ
ಗಿಲ್ಲಿ ಬಗ್ಗೆ ಮನೆಮಂದಿಗೆ ಇರುವ ಅಭಿಪ್ರಾಯ ಬದಲಿಸಲು ಯತ್ನಿಸಿದ ರಜತ್
ಗಿಲ್ಲಿ ಬಗ್ಗೆ ಮನೆಮಂದಿಗೆ ಇರುವ ಅಭಿಪ್ರಾಯ ಬದಲಿಸಲು ಯತ್ನಿಸಿದ ರಜತ್
ಸಿದ್ದರಾಮಯ್ಯ ಬದಲಾಯಿಸಲು ಗಟ್ಸ್ ಯಾರಿಗಿದೆ? ಗುಡುಗಿದ ಸಚಿವ ಜಮೀರ್
ಸಿದ್ದರಾಮಯ್ಯ ಬದಲಾಯಿಸಲು ಗಟ್ಸ್ ಯಾರಿಗಿದೆ? ಗುಡುಗಿದ ಸಚಿವ ಜಮೀರ್