IPL 2025 Qualifier 1: ಆರ್​ಸಿಬಿ ವೇಗಿಗಳ ಆರ್ಭಟ; ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಪಂಜಾಬ್

IPL 2025 Qualifier 1, RCB vs PBKS: 2025ರ ಐಪಿಎಲ್ ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಆರ್‌ಸಿಬಿ, ಪಂಜಾಬ್ ಅನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿತು. ಪಂಜಾಬ್ ತಂಡ ಪವರ್‌ಪ್ಲೇಯಲ್ಲಿ 4 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿದೆ. ಆರ್‌ಸಿಬಿ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

IPL 2025 Qualifier 1: ಆರ್​ಸಿಬಿ ವೇಗಿಗಳ ಆರ್ಭಟ; ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಪಂಜಾಬ್
Rcb

Updated on: May 29, 2025 | 8:19 PM

ಪಂಜಾಬ್​ನ ಮುಲ್ಲನ್‌ಪುರದ ಮಹಾರಾಜ ಯದ್ವಿಂದರ್ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025 ರ ಐಪಿಎಲ್RCB vs PBKS Live Score, IPL 2025: ಪಂಜಾಬ್ 5ನೇ ವಿಕೆಟ್ ಪತನ; ಶ್ರೇಯಸ್ ಔಟ್ (IPL 2025 Qualifier 1) ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು (RCB vs PBKS) ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಂಜಾಬ್ ತಂಡಕ್ಕೆ ಆರಂಭದಲ್ಲೇ ಪವರ್ ಕಳೆದುಕೊಂಡಿದೆ. ಪಂಜಾಬ್ ಪವರ್‌ಪ್ಲೇನಲ್ಲೇ ಅಂದರೆ ಮೊದಲ 6 ಓವರ್​ಗಳಲ್ಲೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದು 48 ರನ್​ಗಳನ್ನು ಕಲೆಹಾಕಿದೆ.

ಪಂಜಾಬ್​ಗೆ ಕಳಪೆ ಆರಂಭ

ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಪ್ರಿಯಾಂಶು ಆರ್ಯ ಹಾಗೂ ಪ್ರಭಾಸಿಮ್ರಾನ್ ಸಿಂಗ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಯಶ್ ದಯಾಳ್ ಎಸೆದ 2ನೇ ಓವರ್​ನ 2ನೇ ಎಸೆತದಲ್ಲಿ ಪ್ರಿಯಾಂಶು ಆರ್ಯ, ಕೃನಾಲ್ ಪಾಂಡ್ಯಗೆ ಕ್ಯಾಚಿತ್ತು ಔಟಾದರು. ಈ ಪಂದ್ಯದಲ್ಲಿ ಪ್ರಿಯಾಂಶುಗೆ ಕೇವಲ 7 ರನ್ ಕಲೆಹಾಕಲಷ್ಟೇ ಸಾಧ್ಯವಾಯಿತು. ಮತ್ತೊಬ್ಬ ಆರಂಭಿಕ ಪ್ರಭಾಸಿಮ್ರಾನ್ ಸಿಂಗ್ ಕೂಡ ಹೊಡಿಬಡಿ ಆಟಕ್ಕೆ ಯತ್ನಿಸಿ ಭುವನೇಶ್ವರ್ ಎಸೆದ ಮೂರನೇ ಓವರ್​ನ ಕೊನೆಯ ಎಸೆತದಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.

ಶ್ರೇಯಸ್ ಮತ್ತೆ ಫೇಲ್

ಆರಂಭದಲ್ಲೇ ಆರಂಭಿಕರಿಬ್ಬರು ಔಟಾದ ಕಾರಣದಿಂದಾಗಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಜೋಸ್ ಇಂಗ್ಲಿಸ್ ಮೇಲೆ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಇತ್ತು. ಆದರೆ ಆರಂಭಿಕ ಒತ್ತಡದಿಂದ ಈ ಇಬ್ಬರಿಗೂ ಹೊರಬರಲಾಗಲಿಲ್ಲ. ಈ ಮೈದಾನದಲ್ಲಿ ತನ್ನ ಕಳಪೆ ಫಾರ್ಮ್​ ಮುಂದುವರೆಸಿದ ನಾಯಕ ಶ್ರೇಯಸ್ ಅಯ್ಯರ್ ಕೇವಲ 2 ರನ್ ಬಾರಿಸಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು. ಅಯ್ಯರ್ ನಂತರ ಇಂಗ್ಲಿಸ್ ಕೂಡ ಅವರ ಹಿಂದೆ ಪೆವಿಲಿಯನ್ ಹಾದಿ ಹಿಡಿದರು. ಹೀಗಾಗಿ ಪಂಜಾಬ್ ತಂಡ 5.1 ಓವರ್​ಗಳಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು 38 ರನ್ ಮಾತ್ರ ಕಲೆಹಾಕಿತು.

IPL 2025 Qualifier 1: ಟಾಸ್ ಗೆದ್ದ ಆರ್​ಸಿಬಿ; ಆನೆ ಬಲ ತಂದ ಹೇಜಲ್‌ವುಡ್ ಆಗಮನ

60 ರನ್​ಗಳಿಗೆ 6 ವಿಕೆಟ್

ಪವರ್​ಪ್ಲೇ ನಂತರವೂ ಪಂಜಾಬ್ ಪೆವಿಲಿಯನ್ ಪರೇಡ್ ಮುಂದುವರೆದಿದ್ದು, 7ನೇ ಓವರ್​ನಲ್ಲಿ ನೇಹಲ್ ವದೇರಾಗೆ ಯಶ್ ದಯಾಳ್ ಪೆವಿಲಿಯನ್ ಹಾದಿ ತೋರಿಸಿದ್ದಾರೆ. 9ನೇ ಓವರ್​ನಲ್ಲಿ ದಾಳಿಗಿಳಿದ ಸುಯೇಶ್, ಶಶಾಂಕ್​ ಸಿಂಗ್​ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ ಅರ್ಧ ಪಂಜಾಬ್ ತಂಡ ಈಗಾಗಲೇ ಪೆವಿಲಿಯನ್​ಗೆ ವಾಪಸ್ಸಾಗಿದೆ. ಆರಂಭದಿಂದಲೂ ಆರ್​ಸಿಬಿ ವೇಗಿಗಳು ಕರಾರುವಕ್ಕಾದ ಬೌಲಿಂಗ್ ಮಾಡುತ್ತಿದ್ದು, ಫೀಲ್ಡಿಂಗ್​ನಲ್ಲೂ ಆರ್​ಸಿಬಿ ಕಡೆಯಿಂದ ಅದ್ಭುತ ಪ್ರದರ್ಶನ ಕಂಡುಬರುತ್ತಿದೆ. ಈ ಸುದ್ದಿ ಬರೆಯುವ ಹೊತ್ತಿಗೆ ಪಂಜಾಬ್ ತಂಡ 6 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 pm, Thu, 29 May 25