RCB IPL Auction 2025: ಹರಾಜಿನಲ್ಲಿ ಆರ್​ಸಿಬಿ ಖರೀದಿಸಿದ ಎಲ್ಲಾ ಆಟಗಾರರ ಪಟ್ಟಿ ಇಲ್ಲಿದೆ

Royal Challengers Bengaluru Auction Players: ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 19 ಆಟಗಾರರನ್ನು ಖರೀದಿಸಿದೆ. ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಮೂವರು ಆಟಗಾರರನ್ನು ಉಳಿಸಿಕೊಂಡಿತ್ತು. ಅವರಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟೀದರ್ ಹಾಗೂ ಯಶ್ ದಯಾಳ್ ಸೇರಿದ್ದರು.

RCB IPL Auction 2025: ಹರಾಜಿನಲ್ಲಿ ಆರ್​ಸಿಬಿ ಖರೀದಿಸಿದ ಎಲ್ಲಾ ಆಟಗಾರರ ಪಟ್ಟಿ ಇಲ್ಲಿದೆ
ಆರ್​ಸಿಬಿ 2025
Follow us
ಪೃಥ್ವಿಶಂಕರ
|

Updated on:Nov 25, 2024 | 11:41 PM

ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 19 ಆಟಗಾರರನ್ನು ಖರೀದಿಸಿದೆ. ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಮೂವರು ಆಟಗಾರರನ್ನು ಉಳಿಸಿಕೊಂಡಿತ್ತು. ಅವರಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟೀದರ್ ಹಾಗೂ ಯಶ್ ದಯಾಳ್ ಸೇರಿದ್ದರು. ಹೀಗಾಗಿ ಮೆಗಾ ಹರಾಜಿನಲ್ಲಿ ಆರ್​ಸಿಬಿ ಕನಿಷ್ಠ 15 ಆಟಗಾರರನ್ನು ಖರೀದಿಸಲೇಬೇಕಿತ್ತು. ಅದರಂತೆ ಆರ್​ಸಿಬಿ 19 ಆಟಗಾರರನ್ನು ಖರೀದಿಸಿದ್ದು, ತಂಡದಲ್ಲಿರುವ ಒಟ್ಟು ಆಟಗಾರರ ಸಂಖ್ಯೆ 22 ಕ್ಕೇರಿದೆ.

ಆರ್​ಸಿಬಿ ಮೆಗಾ ಹರಾಜಿನ ಮೊದಲ ದಿನ ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಸಿಖ್ ದಾರ್ ಮತ್ತು ಸುಯ್ಯಾಶ್ ಶರ್ಮಾ ಅವರನ್ನು ಖರೀದಿಸಿತ್ತು. ಹೀಗಿರುವಾಗ ಹರಾಜಿನ ಎರಡನೇ ಮತ್ತು ಕೊನೆಯ ದಿನದಂದು ಆರ್‌ಸಿಬಿ 5 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 16 ಆಟಗಾರರನ್ನು 30.65 ಕೋಟಿ ರೂ.ಗೆ ಖರೀದಿಸಬೇಕಿತ್ತು. ಅದರಂತೆ ಎರಡನೇ ದಿನ ಹರಾಜಿಗೆ ಪ್ರವೇಶಿಸಿದ್ದ ಆರ್​ಸಿಬಿ, 13 ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಉಳಿದಂತೆ ಆರ್​ಸಿಬಿ ಯಾವ ಆಟಗಾರರನ್ನು ಎಷ್ಟು ಮೊತ್ತಕ್ಕೆ ಖರೀದಿಸಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ.

ಆಟಗಾರರ ವಿವರ

  1. ವಿರಾಟ್ ಕೊಹ್ಲಿ (23 ಕೋಟಿ, ರಿಟೈನ್)
  2. ರಜತ್ ಪಾಟಿದಾರ್ (11 ಕೋಟಿ, ರಿಟೈನ್)
  3. ಯಶ್ ದಯಾಳ್ (5ಕೋಟಿ ರಿಟೈನ್)
  4. ಲಿಯಾಮ್ ಲಿವಿಂಗ್ಸ್ಟೋನ್: 8.75 ಕೋಟಿ
  5. ಫಿಲ್ ಸಾಲ್ಟ್: 11.50 ಕೋಟಿ
  6. ಜಿತೇಶ್ ಶರ್ಮಾ: 11 ಕೋಟಿ
  7. ಜೋಶ್ ಹ್ಯಾಜಲ್‌ವುಡ್: 12.50 ಕೋಟಿ
  8. ರಸಿಖ್ ದಾರ್: 6 ಕೋಟಿ
  9. ಸುಯಶ್ ಶರ್ಮಾ: 2.60 ಕೋಟಿ
  10. ಭುವನೇಶ್ವರ್ ಕುಮಾರ್: 10.75 ಕೋಟಿ
  11. ಕೃನಾಲ್ ಪಾಂಡ್ಯ: 5.75 ಕೋಟಿ
  12. ಸ್ವಪ್ನಿಲ್ ಸಿಂಗ್: 50 ಲಕ್ಷ
  13. ಟಿಮ್ ಡೇವಿಡ್: 3 ಕೋಟಿ
  14. ಜಾಕೋಬ್ ಬೆಥೆಲ್: 2.6 ಕೋಟಿ
  15. ರೊಮಾರಿಯೋ ಶೆಫರ್ಡ್: 1.50 ಕೋಟಿ
  16. ನುವಾನ್ ತುಷಾರ: 1.60 ಕೋಟಿ
  17. ದೇವದತ್ ಪಡಿಕಲ್: 2 ಕೋಟಿ
  18. ಸ್ವಸ್ತಿಕ್ ಚಿಕಾರ: 30 ಲಕ್ಷ
  19. ಮನೋಜ್ ಭಾಂಡಗೆ: 30 ಲಕ್ಷ
  20. ಲುಂಗಿ ಎನ್‌ಗಿಡಿ: 1 ಕೋಟಿ
  21. ಅಭಿನಂದನ್ ಸಿಂಗ್: 30 ಲಕ್ಷ
  22. ಮೋಹಿತ್ ರಥಿ: 30 ಲಕ್ಷ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 pm, Mon, 25 November 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ