MI vs DC: ಮುಂಬೈ ಗೆದ್ದ ತಕ್ಷಣ ಪಂದ್ಯ ನೋಡುತ್ತಿದ್ದ ಆರ್​​ಸಿಬಿ ಆಟಗಾರರು ಮಾಡಿದ್ದೇನು ನೋಡಿ

| Updated By: Vinay Bhat

Updated on: May 22, 2022 | 7:59 AM

RCB qualify for IPL 2022 playoffs: ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ-ಮುಂಬೈ ಅಭಿಮಾನಿಗಳಿಗಿಂತ ಆರ್​ಸಿಬಿ ಅಭಿಮಾನಿಗಳೇ ತುಂಬಿ ಹೋಗಿದ್ದರು. ಮುಂಬೈ ಗೆದ್ದ ತಕ್ಷಣ ಬೆಂಗಳೂರು ಫ್ಯಾನ್ಸ್ ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸಿದರು. ಅತ್ತ ಆರ್​ಸಿಬಿ ಆಟಗಾರರು ಏನು ಮಾಡಿದರು?.

MI vs DC: ಮುಂಬೈ ಗೆದ್ದ ತಕ್ಷಣ ಪಂದ್ಯ ನೋಡುತ್ತಿದ್ದ ಆರ್​​ಸಿಬಿ ಆಟಗಾರರು ಮಾಡಿದ್ದೇನು ನೋಡಿ
RCB After MI Victory
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ 15ನೇ ಆವೃತ್ತಿಯಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರಣ ರೋಚಕ ಕದನದಲ್ಲಿ ಮುಂಬೈ ಇಂಡಿಯನ್ಸ್ (MI vs DC) ತಂಡ 5 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ರಿಷಭ್ ಪಂತ್ ಪಡೆ ಟೂರ್ನಿಯಿಂದ ಹೊರಬಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ನಾಲ್ಕನೇ ತಂಡವಾಗಿ ಪ್ಲೇ ಆಫ್​ಗೆ ಕ್ವಾಲಿಫೈ ಆಗಿದೆ. ಈ ಪಂದ್ಯ ಕೇವಲ ಒಂದು ತಂಡಕ್ಕಲ್ಲ ಮೂರು ತಂಡಕ್ಕೆ ಬಹಳ ಮುಖ್ಯವಾಗಿತ್ತು. ಪ್ಲೇ ಆಫ್ ಸುತ್ತು ಪ್ರವೇಶಿಸಬೇಕಾದರೆ ಡೆಲ್ಲಿ ಇಲ್ಲಿ ಗೆಲ್ಲಲೇ ಬೇಕಿತ್ತು. ಮುಂಬೈ ಕೊನೆಯ ಲೀಗ್ ಪಂದ್ಯದಲ್ಲಾದರೂ ಗೆಲುವು ಸಾಧಿಸಬೇಕೆಂದು ಪಣ ತೊಟ್ಟಿತ್ತು. ಅತ್ತ ಆರ್​ಸಿಬಿ ಪ್ಲೇ ಆಫ್ (Playoffs) ಪ್ರವೇಶಿಸಬೇಕಾದರೆ ಡೆಲ್ಲಿ ಸೋಲಬೇಕಿತ್ತು. ಮುಂಬೈ ಗೆಲ್ಲಬೇಕಿತ್ತು. ಇದಕ್ಕಾಗಿಯೇ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ-ಮುಂಬೈ ಅಭಿಮಾನಿಗಳಿಗಿಂತ ಆರ್​ಸಿಬಿ ಅಭಿಮಾನಿಗಳೇ ತುಂಬಿ ಹೋಗಿದ್ದರು. ಮುಂಬೈ ಗೆದ್ದ ತಕ್ಷಣ ಬೆಂಗಳೂರು ಫ್ಯಾನ್ಸ್ ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸಿದರು. ಅತ್ತ ಆರ್​ಸಿಬಿ ಆಟಗಾರರು ಏನು ಮಾಡಿದರು?.

ವಾಂಖೆಡೆಯಲ್ಲಿ ಶೇ. 80 ರಷ್ಟು ಅಭಿಮಾನಿಗಳು ಆರ್​ಸಿಬಿ ಜೆರ್ಸಿ ತೊಟ್ಟು ಮತ್ತು ಮುಂಬೈ ಜೆರ್ಸಿಯೊಂದಿಗೆ ಬಂದಿದ್ದರು. ಸ್ಟೇಡಿಯಂನಲ್ಲಿ ಆರ್​ಸಿಬಿ… ಆರ್​ಸಿಬಿ… ಎಂಬ ಕೂಗು ಕೇಳಿಸುತ್ತಲೇ ಇತ್ತು. ಅತ್ತ ಕೊನೆಯ ಓವರ್​ನಲ್ಲಿ ಮುಂಬೈ ಗೆಲ್ಲುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ಇತ್ತ ಬೆಂಗಳೂರು ತಂಡದ ಆಟಗಾರರು ಕೂಡ ತುದಿಗಾಲಿನಲ್ಲಿ ನಿಂತು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ದೊಡ್ಡ ಪರದೆ ಮೇಲೆ ಮ್ಯಾಚ್ ನೋಡುತ್ತಿದ್ದರು. ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುತ್ತಿದ್ದಂತೆ ಎಲ್ಲ ಆರ್​ಸಿಬಿ ಪ್ಲೇಯರ್ಸ್​ ಕುಳಿತಲ್ಲಿಂದ ಎದ್ದು ಕುಣಿದು ಕುಪ್ಪಳಿಸಿದ್ದಾರೆ. ಆರ್​ಸಿಬಿ ಟ್ವಿಟರ್ ಈ ಫೋಟೋವನ್ನು ಹಂಚಿಕೊಂಡಿದೆ. ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಕೋಲ್ಕತ್ತಾ ಫ್ಲೈಟ್ ಏರಲಿದ್ದೇವೆ ಎಂಬ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ
MI vs DC, IPL 2022: ಮುಂಬೈ ವಿನ್: ಆರ್​ಸಿಬಿ ಇನ್​
IPL 2022: ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಕೈಕೊಟ್ಟ CSK ಬ್ಯಾಟರ್​ಗಳು
IPL 2022: ನೀಲಿ ಬಣ್ಣಕ್ಕೆ ತಿರುಗಿದ ಕೆಂಪು: ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ ಮುಂಬೈ, RCB
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

 

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು ಆರಂಭದಲ್ಲಿಯೇ ಕುಸಿಯಿತು. ಎರಡು ರನ್‌ ಅಂತರದಲ್ಲಿ ಡೇವಿಡ್ ವಾರ್ನರ್‌ (5) ಮತ್ತು ಮಿಚೆಲ್‌ ಮಾರ್ಷ್‌(0) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಪೃಥ್ವಿ ಶಾ (24) ಔಟಾದ ಕಾರಣ ತಂಡ ಶೋಚನೀಯ ಸ್ಥಿತಿಗೆ ಬಿತ್ತು. 50 ರನ್‌ ತಲುಪಿದಾಗ ತಂಡದ ಸರ್ಫರಾಜ್‌ ಖಾನ್‌ (10) ಕೂಡ ಔಟಾದರು. ಪೊವೆಲ್‌ ಹಾಗೂ ಪಂತ್ ಆರನೇ ವಿಕೆಟಿಗೆ 75 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಪಂತ್‌ 33 ಎಸೆತ ಎದುರಿಸಿ 4 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 39 ರನ್‌ ಹೊಡೆದರೆ, ಪೊವೆಲ್‌ 43 ರನ್‌ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್​​ಗೆ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.

IND vs SA: ದ. ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಇಂದು ಭಾರತ ತಂಡ ಪ್ರಕಟ: ಈ ಪ್ಲೇಯರ್​ಗೆ ಚಾನ್ಸ್ ಖಚಿತ

160 ರನ್​​ಗಳ ಟಾರ್ಗೆಟ್​​​​ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್​​​ 2 ರನ್​​ಗಳಿಸಿದ ನಾಯಕ ರೋಹಿತ್​​ ಶರ್ಮಾ ವಿಕೆಟ್​​ ಬೇಗನೆ ಕಳೆದುಕೊಂಡಿತು. ಇಶಾನ್​​ ಕಿಶನ್​​ ಮತ್ತು ಡಿವಾಲ್ಡ್​​ ಬ್ರೆವಿಸ್​​​​ ಇನ್ನಿಂಗ್ಸ್​​ಗೆ ಚೇತರಿಕೆ ಕೊಟ್ಟರು. ಕಿಶನ್​​​​​ 35 ಎಸೆತಗಳಲ್ಲಿ 3 ಫೋರ್​​ ಮತ್ತು 4 ಸಿಕ್ಸರ್​ ನೆರವಿನಿಂದ 48 ರನ್​​ಗಳಿಸಿ ಔಟಾದರು. ಬ್ರೆವಿಸ್​​​​​​ 37 ರನ್​​ ಗಳಿಸಿ ಮಿಂಚಿದರು. ಟಿಮ್​​ ಡೇವಿಡ್​​ ಆರಂಭದಲ್ಲಿ ಸಿಕ್ಕಿದ ಜೀವದಾನದ ಲಾಭ ಪಡೆದು ಕೇವಲ 11 ಎಸೆತಗಳಲ್ಲಿ 34 ರನ್​​ ಚಚ್ಚಿ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ತಿಲಕ್​​ ವರ್ಮಾ ಕೂಡ 21 ರನ್​​ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು. ಹೀಗೆ ಮುಂಬೈ 19.1 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಜಯ ಕಂಡಿತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:59 am, Sun, 22 May 22