ಐಪಿಎಲ್ 2022 (IPL 2022) ಟೂರ್ನಿ ಆರಂಭ ಹತ್ತಿರವಾಗುತ್ತಿದ್ದಂತೆ ಎಲ್ಲ ಹತ್ತು ಫ್ರಾಂಚೈಸಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು ಮೈದಾನದಲ್ಲಿ ಅಭ್ಯಾಸ ಶುರು ಮಾಡಿದೆ. ಮಾರ್ಚ್ 26 ರಂದು ಆರಂಭವಾಗಲಿರುವ ಕೂಟದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸೆಣೆಸಾಟ ನಡೆಸಲಿದೆ. ಮುಂದಿನ ದಿನ ಮಾರ್ಚ್ 27 ರಂದು ಫಾಫ್ ಡುಪ್ಲೆಸಿಸ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ (RCB vs PBKS) ಅನ್ನು ಎದುರಿಸಲಿದೆ. ಆರ್ಸಿಬಿ ಈಗಾಗಲೇ ಮುಂಬೈಗೆ ತಲುಪಿ ಕಠಿಣ ಪ್ರ್ಯಾಕ್ಟೀಸ್ನಲ್ಲಿ ನಿರತವಾಗಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಭಾನುವಾರ ಆರ್ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ. ಇದರ ನಡುವೆ ಬೆಂಗಳೂರು ತಂಡದಲ್ಲಿ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಆರ್ಸಿಬಿ ಸದ್ದಿಲ್ಲದೆ ಅಫ್ಘಾನಿಸ್ತಾನ ದೇಶದ ಯುವ ಆಟಗಾರನೊಬ್ಬರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಹೌದು, ಇದುವರೆಗೆ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಅಫ್ಘಾನಿಸ್ತಾನ ದೇಶದ ಯುವ ಲೆಗ್ ಸ್ಪಿನ್ನರ್ ಇಝಾರುಲ್ಹಕ್ ನವೀದ್ ಅವರನ್ನು ನೆಟ್ ಬೌಲರ್ ಆಗಿ ಆರ್ಸಿಬಿ ಐಪಿಎಲ್ 2022ಕ್ಕೆ ಆಯ್ಕೆ ಮಾಡಿಕೊಂಡಿದೆ. 18 ವರ್ಷ ಪ್ರಾಯಾದ ನವೀದ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೇಟಸ್ ಹಂಚಿಕೊಂಡಿದ್ದು ಆರ್ಸಿಬಿ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ. ಇವರು ಈ ವರ್ಷದ ಆರಂಭದಲ್ಲಿ ನಡೆದ ಐಸಿಸಿ ಅಂಡರ್- 19 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ತಂಡದ ಪರ ಸ್ಥಾನ ಪಡೆದಿದ್ದರು.
ಅಂಡರ್- 19 ವಿಶ್ವಕಪ್ನಲ್ಲಿ ಇವರು ಭಾರೀ ಭರವಸೆ ಮೂಡಿಸಿದ್ದರು. ಆಡಿದ 6 ಪಂದ್ಯಗಳಲ್ಲಿ 4 ವಿಕೆಟ್ ಕಿತ್ತಿದ್ದಾರೆ. ಅದುಕೂಡ ಕೇವಲ 3.63 ಎಕಾನಮಿಯಲ್ಲಿ ಎಂಬುದು ವಿಶೇಷ. ಸದ್ಯ ಇವರನ್ನು ಆರ್ಸಿಬಿ ತನ್ನ ನೆಟ್ ಬೌಲರ್ ಆಗಿ ಆಯ್ಕೆ ಮಾಡಿದ್ದು, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಫಾಫ್ ಡುಪ್ಲೆಸಿಸ್ ರಂತಹ ದಿಗ್ಗಜ ಬ್ಯಾಟರ್ಗಳಿಗೆ ಬೌಲಿಂಗ್ ಮಾಡಲಿದ್ದಾರೆ. ಇಝಾರುಲ್ಹಕ್ ನವೀದ್ ನೆಟ್ನಲ್ಲಿ ತಮ್ಮ ಸ್ಪಿನ್ ಜಾದು ಪ್ರದರ್ಶಿಸಿದರೆ ಮುಂದಿನ ಆವೃತ್ತಿಯಲ್ಲಿ ಹರಾಜಾಗುವುದು ಖಚಿತ.
ಅಫ್ಘಾನಿಸ್ತಾನ ತಂಡ ಹೆಚ್ಚು ಘಾತಕ ಸ್ನಿನ್ನರ್ಗಳಿಂದಲೇ ಫೇಮಸ್. ಈಗಾಗಲೇ ರಶೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ಅವರಂತಹ ಅಪಾಯಕಾರಿ ಸ್ಪಿನ್ನರ್ಗಳು ಹುಟ್ಟುಕೊಂಡಿದ್ದೆ ಅಫ್ಘಾನ್ನಲ್ಲಿ. ಇದೀಗ ಅದೇ ಸಾಲಿಗೆ ಇಝಾರುಲ್ಹಕ್ ನವೀದ್ ಕೂಡ ಸೇರ್ಪಡಗೊಳ್ಳಬಹುದು. ಇದಕ್ಕಾಗಿಯೇ ಆರ್ಸಿಬಿ ಈ ಸ್ಪಿನ್ನರ್ ಅನ್ನು ನೆಟ್ ಬೌಲರ್ ಆಗಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಆರ್ಸಿಬಿ ಸೇರಿದ ಕಿಂಗ್ ಕೊಹ್ಲಿ:
ಹೌದು, ಆರ್ಸಿಬಿ ಪಾಳಯಕ್ಕೆ ಕಿಂಗ್ ಕೊಹ್ಲಿ ಕಾಲಿಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರ ಸ್ತಂಭ ವಿರಾಟ್ ಕೊಹ್ಲಿ ಆರ್ಸಿಬಿ ಪಾಳಯವನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು ಕಿಂಗ್ ಕೊಹ್ಲಿಯ ಆಗಮನವಾಗಿದೆ. ಇದುವೇ ಈಗ ದೊಡ್ಡ ಸುದ್ದಿ ಎಂದು ಬರೆದುಕೊಂಡಿದೆ. ಕೊಹ್ಲಿ ಬಹುಶಃ ಎರಡು ದಿನಗಳ ಕ್ವಾರಂಟೈನ್ ಅನುಭವಿಸಿ ಮುಂಬೈನಲ್ಲಿರುವ ಆರ್ಸಿಬಿ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದು ಇದೀಗ ಒಬ್ಬ ಬ್ಯಾಟರ್ ಆಗಿ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಯಾವರೀತಿ ಪ್ರದರ್ಶನ ತೋರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಇತ್ತ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಆರ್ಸಿಬಿ ತಂಡ ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ. ನೂತನ ನಾಯಕ ಫಾಫ್ ಡುಪ್ಲೆಸಿಸ್ ಆಟಗಾರರ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದು ದೊಡ್ಡ ಗೇಮ್ ಪ್ಲಾನ್ ಅನ್ನೇ ರೂಪಿಸುತ್ತಿದ್ದಾರೆ. ಪಂಜಾಬ್ ವಿರುದ್ಧದ ಮೊದಲ ಪಂದ್ಯದಲ್ಲಿ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲು ಆರ್ಸಿಬಿ ಈಗಿನಿಂದಲೇ ತಯಾರಿ ಆರಂಭಿಸಿದೆ.
Virat Kohli: ಎದುರಾಳಿಗರಲ್ಲಿ ಭಯ ಶುರು: ಹೊಸದಾಗಿ ಆರ್ಸಿಬಿ ತಂಡ ಸೇರಿಕೊಂಡಿದ್ದು ಯಾರು ನೋಡಿ