
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅನ್ಬಾಕ್ಸ್ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡದ ಅನ್ಬಾಕ್ಸ್ ಇವೆಂಟ್ ನಡೆಯಲಿದೆ. ಸಂಗೀತ ರಸಮಂಜರಿಯೊಂದಿಗೆ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಆರ್ಸಿಬಿ ತಂಡದ ನೂತನ ಜೆರ್ಸಿಯನ್ನು ಅನಾವರಣಗೊಳಿಸಲಾಗುತ್ತದೆ.
ಇನ್ನು ಈ ಕಾರ್ಯಕ್ರಮದಲ್ಲಿ ಆರ್ಸಿಬಿ ತಂಡದ ಆಟಗಾರರು ಕಾಣಿಸಿಕೊಳ್ಳಲಿದ್ದು, ಇವರೊಂದಿಗೆ ಕೆಲ ಮಾಜಿ ಆಟಗಾರರು ಸಹ ಉಪಸ್ಥಿತರಿರಲಿದ್ದಾರೆ. ಅದರಲ್ಲೂ ಈ ಬಾರಿ ಆರ್ಸಿಬಿ ಆಲ್ ಫೇಮ್ ಪ್ರಶಸ್ತಿ ಯಾರಿಗೆ ನೀಡಲಿದ್ದಾರೆ ಎಂಬುದೇ ಕುತೂಹಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ತಂಡದ ಪರ ಆಡಿದ ಮಾಜಿ ಆಟಗಾರರನ್ನು ಕಳೆದ ಎರಡು ವರ್ಷಗಳಿಂದ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿಗೆ ಆರ್ಸಿಬಿ ಹಾಲ್ ಆಫ್ ಫೇಮ್ ಎಂಬ ಹೆಸರಿಡಲಾಗಿದೆ.
ಈ ಗೌರವ ಪ್ರಶಸ್ತಿಯನ್ನು ಆರ್ಸಿಬಿ ಪರ ಆಡಿದ ಎಲ್ಲಾ ಆಟಗಾರರಿಗೆ ನೀಡಲಾಗುವುದಿಲ್ಲ. ಬದಲಾಗಿ ತಂಡದ ಪರ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ಮಾತ್ರ ಸಲ್ಲುತ್ತದೆ. ಇದಕ್ಕಾಗಿ ಒಂದಷ್ಟು ಷರತ್ತುಗಳನ್ನು ಕೂಡ ಆರ್ಸಿಬಿ ರೂಪಿಸಿದೆ.
ಈ ಷರತ್ತುಗಳೆಂದರೆ, ಕನಿಷ್ಠ 3 ವರ್ಷಗಳ ಕಾಲ RCB ಪರ ಆಡಿರಬೇಕು. ಪ್ರಸ್ತುತ, ಅವರು ಐಪಿಎಲ್‌ನ ಯಾವುದೇ ತಂಡದ ಭಾಗವಾಗಿರಬಾರದು. ಮೈದಾನದಲ್ಲಿ ಮತ್ತು ಹೊರಗೆ RCB ಮೇಲೆ ಗಮನಾರ್ಹ ಪರಿಣಾಮ ಬೀರಬೇಕು. ಇಂತಹ ಸರ್ವ ಶ್ರೇಷ್ಠ ಆಟಗಾರರಿಗೆ ಮಾತ್ರ ಆರ್ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡಲಾಗುತ್ತದೆ.
ಕಳೆದ ಎರಡು ಸೀಸನ್ಗಳಲ್ಲಿ ಆರ್ಸಿಬಿಯ ಆಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದವರೆಂದರೆ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಹಾಗೂ ವಿನಯ್ ಕುಮಾರ್. ಹೀಗಾಗಿ ಈ ಬಾರಿ ಈ ಪ್ರಶಸ್ತಿಯನ್ನು ಯಾರು ಪಡೆಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇದಕ್ಕೆ ಉತ್ತರ ಮಾರ್ಚ್ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಗಲಿದೆ.
ಇದನ್ನೂ ಓದಿ: IPL 2025: RCB ತಂಡದ ಹೊಸ ಜೆರ್ಸಿ ಫೋಟೋ ಲೀಕ್?