
(ಬೆಂಗಳೂರು, ಏ. 03): ಮೊಹಮ್ಮದ್ ಸಿರಾಜ್ ಮತ್ತು ಸಾಯಿ ಕಿಶೋರ್ ಅವರ ಅತ್ಯುತ್ತಮ ಬೌಲಿಂಗ್ ನಂತರ, ಜೋಸ್ ಬಟ್ಲರ್ ಅವರ ಸ್ಫೋಟಕ ಅರ್ಧಶತಕದ ಬಲದಿಂದ ಗುಜರಾತ್ ಟೈಟಾನ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs GT IPL 2025) ವಿರುದ್ಧ ಎಂಟು ವಿಕೆಟ್‌ಗಳ ಸುಲಭ ಜಯ ದಾಖಲಿಸಿತು. ಆರ್‌ಸಿಬಿ ನೀಡಿದ 170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೈಟಾನ್ಸ್ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ಜಯ ಸಾಧಿಸಿತು. ಸಿರಾಜ್ ಮೂರು ವಿಕೆಟ್ ಪಡೆದರೆ, ಬಟ್ಲರ್ 187 ಸ್ಟ್ರೈಕ್ ರೇಟ್‌ನಲ್ಲಿ 73 ರನ್ ಗಳಿಸಿದರು. ಈ ಪಂದ್ಯದಲ್ಲಿ ಆರ್‌ಸಿಬಿ ಮಾಡಿದ ಕೆಲ ತಪ್ಪುಗಳು ಅವರ ಸೋಲಿಗೆ ಪ್ರಮುಖ ಕಾರಣವಾಯಿತು.
ಕೃನಾಲ್ ಪಾಂಡ್ಯ
ಆರ್‌ಸಿಬಿ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ಕೃನಾಲ್ ಪಾಂಡ್ಯ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಆದರೆ, ಜಿಟಿ ವಿರುದ್ಧ ಅವರು ಬ್ಯಾಟ್ ಮತ್ತು ಚೆಂಡಿನ ಎರಡೂ ವಿಭಾಗಗಳಲ್ಲಿ ವಿಫಲರಾದರು. ಕ್ರುನಾಲ್ ಬ್ಯಾಟಿಂಗ್‌ನಲ್ಲಿ ಕೇವಲ 5 ರನ್ ಗಳಿಸಿದರು. 13 ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದು ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊರಲಿಲ್ಲ. ಬೌಲಿಂಗ್‌ನಲ್ಲಿ ಅವರು 3 ಓವರ್‌ಗಳಲ್ಲಿ 34 ರನ್‌ಗಳನ್ನು ನೀಡಿದರು.
ಜೋಶ್ ಹ್ಯಾಜಲ್‌ವುಡ್
ಹೊಸ ಚೆಂಡಿನೊಂದಿಗೆ ವೇಗದ ಬೌಲರ್‌ಗಳಿಗೆ ಪಿಚ್ ನೆರವು ನೀಡಿತು. ಪವರ್‌ಪ್ಲೇನಲ್ಲಿ ಆರ್‌ಸಿಬಿಯ ಹ್ಯಾಜಲ್‌ವುಡ್ ವಿಕೆಟ್ ಪಡೆಯುವ ನಿರೀಕ್ಷೆಯಲ್ಲಿತ್ತು, ಆದರೆ ಇದು ಆಗಲಿಲ್ಲ. ಅವರು ತಮ್ಮ ಮೊದಲ ಎರಡು ಓವರ್‌ಗಳಲ್ಲಿ 17 ರನ್‌ಗಳನ್ನು ಬಿಟ್ಟುಕೊಟ್ಟರು. ಇದು ಗುಜರಾತ್ ಮೇಲೆ ಭುವನೇಶ್ವರ್ ಕುಮಾರ್ ಸೃಷ್ಟಿಸಿದ್ದ ಒತ್ತಡವನ್ನು ಕಡಿಮೆ ಮಾಡಿತು. ಮೊದಲ ಎರಡು ಓವರ್‌ಗಳಲ್ಲಿ ಭುವಿ ಕೇವಲ 7 ರನ್‌ಗಳನ್ನು ಮಾತ್ರ ನೀಡಿದ್ದರು.
Shubman Gill: ಕೊಹ್ಲಿಗೆ ಬಿಸಿ ಮುಟ್ಟಿಸಿದ ಗಿಲ್: ಕಿಚ್ಚು ಹತ್ತಿಸಿತು ಪಂದ್ಯದ ಬಳಿಕ ಮಾಡಿದ ಟ್ವೀಟ್
ಫಿಲ್ ಸಾಲ್ಟ್
ಆರ್‌ಸಿಬಿಯ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಮೊದಲ ಎರಡು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಆದರೆ. ಈ ಪಂದ್ಯದಲ್ಲಿ ಅವರಿಗೆ ಮೊದಲ ಓವರ್‌ನಲ್ಲಿಯೇ ಜೀವದಾನ ಸಿಕ್ಕಿತು. ಜೋಸ್ ಬಟ್ಲರ್ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ನಂತರ ಅವರು ರನ್ ಔಟ್ ಆಗುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾದರು. ಎರಡು ಜೀವದಾನ ಪಡೆದ ನಂತರವೂ, ಸಾಲ್ಟ್ 13 ಎಸೆತಗಳಲ್ಲಿ ಕೇವಲ 14 ರನ್ ಗಳಿಸಲು ಸಾಧ್ಯವಾಯಿತಷ್ಟೆ.
ದೇವದತ್ ಪಡಿಕ್ಕಲ್
ದೇವದತ್ ಪಡಿಕಲ್ ಭಾರತ ತಂಡಕ್ಕಾಗಿ ಆಡಿದ ಅನುಭವ ಹೊಂದಿದ್ದಾರೆ. ವಿರಾಟ್ ಬೇಗನೆ ಔಟಾದ ನಂತರ, ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಅವರ ಮೇಲಿತ್ತು. ಆದರೆ ಅವರು ತಮ್ಮ ವಿಕೆಟ್ ಅನ್ನು ಸುಲಭವಾಗಿ ಕೈಚೆಲ್ಲಿದರು. ಸ್ಫೋಟಕ ಬೌಲಿಂಗ್ ಮಾಡುತ್ತಿದ್ದ ಸಿರಾಜ್ ಮೇಲೆ ದಾಳಿ ಮಾಡುವುದು ಮೂರ್ಖತನ ಅವರು ಮಾಡಿದರು. ಕೇವಲ 4 ರನ್ಗೆ ನಿರ್ಗಮಿಸಿದರು.
ವಿರಾಟ್ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನಲ್ಲಿ ವಿರಾಟ್ ಕೊಹ್ಲಿಯ ಪಾತ್ರ ಕೂಡ ಇದೆ. ವಿರಾಟ್ ತಂಡದ ಪ್ರಮುಖ ಬ್ಯಾಟ್ಸ್‌ಮನ್. ಆದರೆ, ಅವರು ಕಳೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿಧಾನವಾಗಿ ಬ್ಯಾಟಿಂಗ್ ಮಾಡಿದರು. ಜಿಟಿ ವಿರುದ್ಧದ ಪಂದ್ಯದಲ್ಲಿ, ಅನ್‌ಕ್ಯಾಪ್ಡ್ ಬೌಲರ್ ಅರ್ಷದ್ ಖಾನ್ ಎರಡನೇ ಓವರ್‌ನಲ್ಲಿ 7 ರನ್ ಗಳಿಸಿ ಹೀನಾಯವಾಗಿ ಔಟ್ ಆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ