RCB vs SRH Turning Point: ದಿಢೀರ್ ಕುಸಿತ: ಆರ್​ಸಿಬಿ ಸೋಲಿನ ಕಥೆ ಬರೆದ ಆ 5 ಎಸೆತ

15.3 ಓವರ್‌ಗಳವರೆಗೆ ಪಂದ್ಯವು ಆರ್ಸಿಬಿ ಪರವಾಗಿಯೇ ಇತ್ತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವು ಕೇವಲ 5 ಎಸೆತಗಳಲ್ಲಿ ಖಚಿತವಾಯಿತು. ಈ 5 ಎಸೆತಗಳಲ್ಲಿ ಹೈದರಾಬಾದ್ ತಂಡ ಮೂವರು ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿತು. 16ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರಜತ್ ಪಟಿದಾರ್ ರನೌಟ್ ಆದರು.

RCB vs SRH Turning Point: ದಿಢೀರ್ ಕುಸಿತ: ಆರ್​ಸಿಬಿ ಸೋಲಿನ ಕಥೆ ಬರೆದ ಆ 5 ಎಸೆತ
Rcb Vs Srh Ipl 2025

Updated on: May 24, 2025 | 7:00 AM

ಬೆಂಗಳೂರು (ಮೇ. 24): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Royal Challengers Bengaluru vs Sunrisers Hyderabad) ವಿರುದ್ಧ ತನ್ನ 13 ನೇ ಪಂದ್ಯದಲ್ಲಿ ಸೋತಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 42 ರನ್‌ಗಳ ಹೀನಾಯ ಸೋಲು ಅನುಭವಿಸಿತು. ತಂಡಕ್ಕೆ ಗೆಲ್ಲಲು 232 ರನ್‌ಗಳ ಗುರಿ ಸಿಕ್ಕಿತ್ತು. ಇದಕ್ಕೆ ಪ್ರತಿಯಾಗಿ ಆರ್‌ಸಿಬಿ ಸ್ಫೋಟಕ ಆರಂಭ ಪಡೆದು ಬೊಂಬಾಟ್ ಬ್ಯಾಟಿಂಗ್ ಮಾಡಿತು. 15.3 ಓವರ್‌ಗಳ ನಂತರ, ಆರ್‌ಸಿಬಿ 173/3 ಸ್ಕೋರ್ ಮಾಡಿತು. ಕೊನೆಯ 27 ಎಸೆತಗಳಲ್ಲಿ ತಂಡಕ್ಕೆ ಗೆಲ್ಲಲು 59 ರನ್‌ಗಳು ಬೇಕಾಗಿದ್ದವು. ಜಿತೇಶ್ ಶರ್ಮಾ ಮತ್ತು ರಜತ್ ಪಾಟಿದಾರ್ ಕ್ರೀಸ್‌ನಲ್ಲಿದ್ದರು. ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಮತ್ತು ಕೃನಾಲ್ ಪಾಂಡ್ಯ ಬರಬೇಕಿತ್ತು.

ಪಂದ್ಯದ ಗತಿ ಬದಲಾಯಿಸಿದ 5 ಎಸೆತ:

15.3 ಓವರ್‌ಗಳವರೆಗೆ ಪಂದ್ಯವು ಆರ್​ಸಿಬಿ ಪರವಾಗಿಯೇ ಇತ್ತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವು ಕೇವಲ 5 ಎಸೆತಗಳಲ್ಲಿ ಖಚಿತವಾಯಿತು. ಈ 5 ಎಸೆತಗಳಲ್ಲಿ ಹೈದರಾಬಾದ್ ತಂಡ ಮೂವರು ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿತು. 16ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರಜತ್ ಪಟಿದಾರ್ ರನೌಟ್ ಆದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಸ್ಫೋಟಕ ರೊಮಾರಿಯೊ ಶೆಫರ್ಡ್ ಸೊನ್ನೆ ಸುತ್ತಿ ನಿರ್ಗಮಿಸಿದರು. ಮಾಲಿಂಗ ಬೌಲಿಂಗ್​​ನಲ್ಲಿ ಅವರಿಗೇ ಕ್ಯಾಚ್ ನೀಡಿ ಔಟ್ ಆದರು.

ಇದನ್ನೂ ಓದಿ
ದುಬಾರಿಯಾದ ಬೌಲರ್ಸ್​; ಆರ್​ಸಿಬಿಗೆ 42 ರನ್ ಸೋಲು
ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿದ ಭುವನೇಶ್ವರ್ ಕುಮಾರ್
ಅಭಿಷೇಕ್ ಶರ್ಮಾ ಸಿಡಿಸಿದ ಸಿಕ್ಸ್​ಗೆ ಟಾಟಾ ಕಾರಿನ ಗ್ಲಾಸ್ ಪುಡಿಪುಡಿ: VIDEO
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು

17ನೇ ಓವರ್‌ನ ಎರಡನೇ ಎಸೆತದಲ್ಲಿ ನಾಯಕ ಜಿತೇಶ್ ಶರ್ಮಾ ಔಟಾದರು. ಜಯದೇವ್ ಉನದ್ಕತ್ ಅವರ ವಿಕೆಟ್ ಕಿತ್ತರು. ಸತತವಾಗಿ ವಿಕೆಟ್ ಕಳೆದುಕೊಂಡಿದ್ದು ಬೆಂಗಳೂರಿ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಇದು ಎಸ್​ಆರ್​ಹೆಚ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

IPL 2025: ಅಭಿಷೇಕ್ ಶರ್ಮಾ ಸಿಡಿಸಿದ ಸಿಕ್ಸ್​ಗೆ ಟಾಟಾ ಕಾರಿನ ಗ್ಲಾಸ್ ಪುಡಿಪುಡಿ: ವಿಡಿಯೋ ನೋಡಿ

ಬೃಹತ್ ಮೊತ್ತ ಕಲೆಹಾಕಿದ ಹೈದರಾಬಾದ್:

ಇಶಾನ್ ಕಿಶನ್ ಅವರ ಅಜೇಯ 94 ರನ್‌ಗಳ ಇನ್ನಿಂಗ್ಸ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಮಾರಕ ಬೌಲಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್ ಆರ್‌ಸಿಬಿಯನ್ನು 42 ರನ್‌ಗಳಿಂದ ಸೋಲಿಸಿತು. 232 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡವು 19.5 ಓವರ್‌ಗಳಲ್ಲಿ ಒಂದು ಎಸೆತ ಬಾಕಿ ಇರುವಾಗ ಆಲೌಟ್ ಆಯಿತು. ತಂಡವು ಉತ್ತಮ ಆರಂಭವನ್ನು ಹೊಂದಿತ್ತು. ಆರ್‌ಸಿಬಿ ಪರ ಆರಂಭಿಕರಾದ ವಿರಾಟ್ ಕೊಹ್ಲಿ (43) ಮತ್ತು ಫಿಲ್ ಸಾಲ್ಟ್ (62) ತ್ವರಿತಗತಿಯ ರನ್ ಗಳಿಸಿದರು. ಅದಾದ ನಂತರ, ಯಾವುದೇ ಬ್ಯಾಟ್ಸ್‌ಮನ್‌ಗೆ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ.

ಎಸ್‌ಆರ್‌ಹೆಚ್ ಪರ ನಾಯಕ ಪ್ಯಾಟ್ ಕಮ್ಮಿನ್ಸ್ ಗರಿಷ್ಠ ಮೂರು ವಿಕೆಟ್ ಪಡೆದರೆ, ಇಶಾನ್ ಮಾಲಿಂಗ ಎರಡು ವಿಕೆಟ್ ಪಡೆದರು. ಏತನ್ಮಧ್ಯೆ, ಜಯದೇವ್ ಉನಾದ್ಕಟ್, ಹರ್ಷಲ್ ಪಟೇಲ್, ಹರ್ಷ್ ದುಬೆ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ SRH ತಂಡ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ 48 ಎಸೆತಗಳಲ್ಲಿ ಅಜೇಯ 94 ರನ್ ಚಚ್ಚಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ