
ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಿಂಕು ಸಿಂಗ್ (Rinku Singh) ಮತ್ತು ಜೌನ್‌ಪುರದ ಮಚ್ಲಿಶಹರ್‌ನ ಎಸ್‌ಪಿ ಸಂಸದೆ ಪ್ರಿಯಾ ಸರೋಜ್ (Priya Saroj) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೂನ್ 8 ರ ಭಾನುವಾರ, ಲಕ್ನೋದ ಪಂಚತಾರಾ ಹೋಟೆಲ್ ದಿ ಸೆಂಟ್ರಮ್‌ನಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡರು. ರಿಂಕು ಸಿಂಗ್, ಪ್ರಿಯಾ ಸರೋಜ್ ಅವರ ಬೆರಳಿಗೆ ಉಂಗುರ ತೊಡಿಸುತ್ತಿದ್ದಂತೆ, ಪ್ರಿಯಾ ಅವರು ಭಾವುಕರಾದರು. ಕೂಡಲೇ ರಿಂಕು ಸಿಂಗ್ ಅವರನ್ನು ಸಮಾಧಾನಪಡಿಸಿದರು. ಇದೀಗ ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಕೂಡ ಈ ನಿಶ್ಚಿತಾರ್ಥ ಸಮಾರಂಭಕ್ಕೆ ಆಗಮಿಸಿದ್ದರು. ಇವರ ಜೊತೆಗೆ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಜಯಾ ಬಚ್ಚನ್, ಟೀಂ ಇಂಡಿಯಾದ ಮಾಜಿ ಆಟಗಾರರಾದ ಪ್ರವೀಣ್ ಕುಮಾರ್ ಮತ್ತು ಪಿಯೂಷ್ ಚಾವ್ಲಾ ಅವರಲ್ಲದೆ, ಯುಪಿ ರಣಜಿ ತಂಡದ ನಾಯಕ ಆರ್ಯನ್ ಜುಯಾಲ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.
ರಿಂಕು ಸಿಂಗ್ ಬಿಳಿ ಶೇರ್ವಾನಿ ಧರಿಸಿದ್ದರೆ, ಪ್ರಿಯಾ ಸರೋಜ್ ಗುಲಾಬಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡರು. ವೇದಿಕೆ ಮೇಲೇರಿದ ತಕ್ಷಣ, ಪ್ರಿಯಾ ಭಾವುಕರಾದರು. ಅವರ ಕಣ್ಣುಗಳಿಂದ ನೀರು ಬಂತು, ಇದನ್ನು ಗಮನಿಸಿದ ರಿಂಕು ಸಿಂಗ್ ಅವರನ್ನು ಸಮಾಧಾನ ಪಡಿಸಿದರು. ಇದಾದ ನಂತರ, ಇಬ್ಬರೂ ನಗುತ್ತಾ ಪೋಸ್ ನೀಡಲು ಪ್ರಾರಂಭಿಸಿದರು. ಈ ಸಮಾರಂಭಕ್ಕೆ ಸುಮಾರು 300 ಅತಿಥಿಗಳು ಆಗಮಿಸಿದ್ದರು. ಇದರಲ್ಲಿ ಎಸ್‌ಪಿ ನಾಯಕರಾದ ರಾಮ್ ಗೋಪಾಲ್ ಯಾದವ್, ಶಿವಪಾಲ್ ಸಿಂಗ್ ಯಾದವ್, ಸಂಸದ ರಾಜೀವ್ ರೈ, ಜಿಯಾವುರ್ ರೆಹಮಾನ್ ಬಾರ್ಕ್, ಮೊಹಿಬುಲ್ಲಾ ನದ್ವಿ ಸೇರಿದ್ದಾರೆ.
You can see live pictures of engagement of MP Priya Saroj and #cricketer Rinku Singh here Many congratulations to Rinku Singh and Priya Saroj on starting a new life. #RinkuSingh #PriyaSaroj #rinkusingh #Lucknow https://t.co/48lwOk7T3J pic.twitter.com/KV8l72xbFI
— Indian Observer (@ag_Journalist) June 8, 2025
ನಿಶ್ಚಿತಾರ್ಥ ಸಮಾರಂಭಕ್ಕಾಗಿ, ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಪರಸ್ಪರ ವಿಶೇಷ ಉಂಗುರಗಳನ್ನು ಆರ್ಡರ್ ಮಾಡಿದ್ದರು. ಪ್ರಿಯಾ ಕೋಲ್ಕತ್ತಾದಿಂದ ಡಿಸೈನರ್ ಉಂಗುರವನ್ನು ಖರೀದಿಸಿದ್ದರೆ, ರಿಂಕು ಸಿಂಗ್ ಮುಂಬೈನಿಂದ ವಿಶೇಷ ಉಂಗುರವನ್ನು ಆರ್ಡರ್ ಮಾಡಿದ್ದರು. ಎರಡೂ ಉಂಗುರಗಳ ಒಟ್ಟು ಬೆಲೆ ಸುಮಾರು 2.5 ಲಕ್ಷ ರೂ. ಎಂದು ಹೇಳಲಾಗುತ್ತದೆ. ಇದಲ್ಲದೆ ಈ ಸಮಾರಂಭದಲ್ಲಿ ವಿಶೇಷ ಭೋಜನ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇದರಲ್ಲಿ ಯುರೋಪಿಯನ್ನಿಂದ ಚೈನೀಸ್ ವರೆಗೆ ವಿವಿಧ ಭಕ್ಷ್ಯಗಳು ಸೇರಿದ್ದವು.
Rinku Singh’s Wedding: ಭಾವಿ ಪತ್ನಿಯ ಆಸೆಯಂತೆ ಐಷರಾಮಿ ಮನೆ ಖರೀದಿಸಿದ ರಿಂಕು ಸಿಂಗ್
ರಿಂಕು ಮತ್ತು ಪ್ರಿಯಾ ಅವರ ವಿವಾಹ ನವೆಂಬರ್ 18 ರಂದು ವಾರಣಾಸಿಯ ಹೋಟೆಲ್ ತಾಜ್‌ನಲ್ಲಿ ನಡೆಯಲಿದೆ. ಕ್ರಿಕೆಟ್ ತಾರೆಯರು, ಚಲನಚಿತ್ರ ಸ್ಟಾರ್ಸ್ ಮತ್ತು ಕೈಗಾರಿಕೋದ್ಯಮಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ