ಟೀಂ ಇಂಡಿಯಾದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant) ಸುಮಾರು 18 ತಿಂಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಟಿ20 ವಿಶ್ವಕಪ್ನಲ್ಲಿ (T20 World Cup 2024) ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗಿರುವ ರಿಷಬ್ ಪಂತ್, ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪಂತ್ 32 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 165.52 ಸ್ಟ್ರೈಕ್ ರೇಟ್‌ನಲ್ಲಿ 53 ರನ್ ಕಲೆಹಾಕಿದರು. ವಿಶ್ವಕಪ್ ಆರಂಭಕ್ಕೂ ಮುನ್ನ ಪಂತ್ ಅವರ ಈ ಸ್ಫೋಟಕ ಬ್ಯಾಟಿಂಗ್ ಪಂತ್ ಅಭಿಮಾನಿಗಳ ಮನದಲ್ಲಿ ಸಂತಸ ಮೂಡಿದೆ. ಈ ಸಂತಸವನ್ನು ವಿಭಿನ್ನವಾಗಿ ಆಚರಿಸಿರುವ ಪಂತ್ ಅವರ ಅಭಿಮಾನಿಗಳ ಸತ್ಕಾರ್ಯಕ್ಕೆ ಇದೀಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ರಿಷಬ್ ಪಂತ್ ಕೇರಳದಲ್ಲೂ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಆ ಅಭಿಮಾನಿಗಳಲ್ಲಿ ಕೆಲವರು ಕೊಲ್ಲಂನ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಶಾಲಾ ಬ್ಯಾಗ್‌ಗಳು, ಸ್ಟೇಷನರಿ ಕಿಟ್‌ಗಳನ್ನು ವಿತರಿಸಿದ್ದಾರೆ. ಇದಲ್ಲದೇ ಸ್ಟಾರ್ ಆಟಗಾರನ ಪುನರಾಗಮನವನ್ನು ಅವರೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಈ ಕೇಕ್ ಮೇಲೆ ರಿಷಬ್ ಪಂತ್ಗಾಗಿ ವಿಶೇಷ ಸಂದೇಶವನ್ನೂ ಬರೆಯಲಾಗಿತ್ತು. ಈ ಮೂಲಕ 18 ತಿಂಗಳ ಸುದೀರ್ಘ ಸಮಯದ ನಂತರ ಪಂತ್ ಟೀಂ ಇಂಡಿಯಾಗೆ ಮರಳುತ್ತಿರುವುದನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ.
Rishabh Pant fans in Kerala celebrated their Idol’s return to Indian team after 18 long months in an orphanage in Kollam by distributing school bags, Stationary kits to kids and cutting a cake with them. 👌 pic.twitter.com/xhWeT9GvDL
— Johns. (@CricCrazyJohns) June 3, 2024
2022 ರ ಡಿಸೆಂಬರ್ನಲ್ಲಿ ರಿಷಬ್ ಪಂತ್ ಕಾರು ಅಪಘಾತಕ್ಕೊಳಹಗಾಗಿದ್ದರು. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ನಂತರ, ಪಂತ್ ಸುಮಾರು 1.5 ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದರು. ಇಂಜುರಿಯಿಂದ ಚೇತರಿಸಿಕೊಂಡ ಪಂತ್ ಐಪಿಎಲ್ ಮೂಲಕ ಕ್ರಿಕೆಟ್‌ಗೆ ಮರಳಿದ್ದರು. ಅಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪಂತ್ರನ್ನು ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಆಯ್ಕೆ ಮಾಡಲಾಯಿತು. ಇದೀಗ ಪಂತ್ ತಂಡದ ಪ್ರಮುಖ ವಿಕೆಟ್ ಕೀಪರ್ ಪಾತ್ರವನ್ನು ನಿರ್ವಹಿಸಲು ಸಿದ್ಧರಾಗಿದ್ದಾರೆ.
T20 World Cup 2024: ಪಂತ್ ಅಥವಾ ಸ್ಯಾಮ್ಸನ್; ಗವಾಸ್ಕರ್ ಪ್ರಕಾರ ಯಾರಿಗೆ ತಂಡದಲ್ಲಿ ಸ್ಥಾನ?
ಇತ್ತೀಚೆಗಷ್ಟೇ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ್ದ ಪಂತ್, ಟೀಂ ಇಂಡಿಯಾದ ಜೆರ್ಸಿ ಧರಿಸಿದ ನಂತರ ನನ್ನೊಳಗೆ ಬೇರೆಯದೇ ಆದ ಚೈತನ್ಯ ಮೂಡಿದೆ. ನಾನು ಥ್ರಿಲ್ ಆಗಿದ್ದೇನೆ. ಇದೊಂದು ವಿಭಿನ್ನ ರೀತಿಯ ಅನುಭವ. ನಾನು ಮತ್ತೆ ಪಾದಾರ್ಪಣೆ ಮಾಡುತ್ತಿರುವಂತೆ ಭಾಸವಾಗುತ್ತಿದೆ. ನಾನು ಫ್ರೆಶ್ ಆಗಿ ಬರುತ್ತಿದ್ದೇನೆ. ಜೀವನದಲ್ಲಿ ಚಿಂತನೆಯ ದೃಷ್ಟಿಕೋನವೂ ಸಾಕಷ್ಟು ಬದಲಾಗಿದೆ. ಈಗ ಮತ್ತೆ ಟೀಂ ಇಂಡಿಯಾ ಪರ ಆಡುವ ಸಮಯಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ