Rishabh Pant Injury: ರಿಷಭ್ ಪಂತ್ 4ನೇ ಟೆಸ್ಟ್​ನಲ್ಲಿ ಆಡಲು ಸಾಧ್ಯವಾಗುತ್ತ ಅಥವಾ ಇಲ್ಲವೇ?: ಇಲ್ಲಿದೆ ಮಾಹಿತಿ

India vs England 4th Test: ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ದಿನದಂದು, ಭಾರತ ತಂಡದ ಇನ್ನಿಂಗ್ಸ್‌ನ 68 ನೇ ಓವರ್ ನಡೆಯುತ್ತಿರುವಾಗ, ರಿಷಭ್ ಪಂತ್ ಕ್ರಿಸ್ ವೋಕ್ಸ್ ಅವರ ಫುಲ್ ಟಾಸ್ ಚೆಂಡಿನ ಮೇಲೆ ರಿವರ್ಸ್ ಸ್ವೀಪ್ ಶಾಟ್ ಆಡಲು ಪ್ರಯತ್ನಿಸಿದರು. ಚೆಂಡು ಪಂತ್ ಅವರ ಬ್ಯಾಟ್‌ಗೆ ತಾಗದೆ ನೇರವಾಗಿ ಅವರ ಶೂಗೆ ಬಡಿಯಿತು, ನಂತರ ಪಂತ್‌ಗೆ ತುಂಬಾ ನೋವು ಕಾಣಿಸಿಕೊಂಡಿತು.

Rishabh Pant Injury: ರಿಷಭ್ ಪಂತ್ 4ನೇ ಟೆಸ್ಟ್​ನಲ್ಲಿ ಆಡಲು ಸಾಧ್ಯವಾಗುತ್ತ ಅಥವಾ ಇಲ್ಲವೇ?: ಇಲ್ಲಿದೆ ಮಾಹಿತಿ
Rishabh Pant Injury
Edited By:

Updated on: Jul 24, 2025 | 8:24 AM

ಬೆಂಗಳೂರು (ಜು. 24): ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಟೀಮ್ ಇಂಡಿಯಾ (Indian Cricket Team) ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದುಕೊಂಡಿತು, ಇದರಲ್ಲಿ ಮೊದಲ ದಿನದ ಆಟದ ಅಂತ್ಯದಲ್ಲಿ, ಭಾರತ ತಂಡವು 4 ವಿಕೆಟ್‌ಗಳ ನಷ್ಟಕ್ಕೆ 264 ರನ್ ಗಳಿಸಿದೆ. ಮೊದಲ ದಿನದ ಕೊನೆಯ ಅವಧಿಯಲ್ಲಿ ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಕಾಲಿಗೆ ಗಾಯ ಮಾಡಿಕೊಂಡು ನಂತರ ಅವರು ಮೈದಾನದಿಂದ ಹೊರನಡೆಯಬೇಕಾಯಿತು. ಪಂತ್ ಅವರ ಗಾಯದ ತೀವ್ರತೆ ಎಷ್ಟಿತ್ತೆಂದರೆ ಅವರಿಗೆ ನಡೆಯಲೂ ಸಾಧ್ಯವಾಗದೆ ವೈದ್ಯಕೀಯ ವಾಹನದ ಮೂಲಕ ಮೈದಾನ ತೊರೆಯಬೇಕಾಯಿತು.

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ದಿನದಂದು, ಭಾರತ ತಂಡದ ಇನ್ನಿಂಗ್ಸ್‌ನ 68 ನೇ ಓವರ್ ನಡೆಯುತ್ತಿರುವಾಗ, ರಿಷಭ್ ಪಂತ್ ಕ್ರಿಸ್ ವೋಕ್ಸ್ ಅವರ ಫುಲ್ ಟಾಸ್ ಚೆಂಡಿನ ಮೇಲೆ ರಿವರ್ಸ್ ಸ್ವೀಪ್ ಶಾಟ್ ಆಡಲು ಪ್ರಯತ್ನಿಸಿದರು. ಚೆಂಡು ಪಂತ್ ಅವರ ಬ್ಯಾಟ್‌ಗೆ ತಾಗದೆ ನೇರವಾಗಿ ಅವರ ಶೂಗೆ ಬಡಿಯಿತು, ನಂತರ ಪಂತ್‌ಗೆ ತುಂಬಾ ನೋವು ಕಾಣಿಸಿಕೊಂಡಿತು. ಇದರ ನಂತರ, ಫಿಸಿಯೋ ಮೈದಾನದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಪ್ರಯತ್ನಿಸಿದರು ಆದರೆ ಗಾಯವು ತುಂಬಾ ಗಂಭೀರವಾಗಿತ್ತು.

ಪಂತ್ ತಮ್ಮ ಶೂ ತೆಗೆದಾಗ, ಅವರ ಪಾದದಿಂದ ರಕ್ತವೂ ಹರಿಯುತ್ತಿತ್ತು. ರಿಷಭ್ ಪಂತ್ ಬಗ್ಗೆ ಬಿಸಿಸಿಐ ನೀಡಿದ ಅಪ್‌ಡೇಟ್‌ನಲ್ಲಿ, ಪಂತ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಮ್ಯಾಂಚೆಸ್ಟರ್ ಟೆಸ್ಟ್‌ನ ಮೊದಲ ದಿನದಂದು ಬ್ಯಾಟಿಂಗ್ ಮಾಡುವಾಗ ಅವರ ಬಲಗಾಲಿಗೆ ಗಾಯವಾಗಿತ್ತು ಎಂದು ಬಿಸಿಸಿಐ ತಿಳಿಸಿದೆ. ಅವರನ್ನು ಸ್ಕ್ಯಾನ್‌ಗಾಗಿ ಕ್ರೀಡಾಂಗಣದಿಂದ ಕರೆದೊಯ್ಯಲಾಯಿತು. ಅವರು ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ
ರಿಷಭ್ ಪಂತ್​​ಗೆ ಗಾಯ; ದಿನದಾಟದಂತ್ಯಕ್ಕೆ ಭಾರತ 264/4
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಯೂತ್ ಟೆಸ್ಟ್‌ನಲ್ಲಿ ಅನಗತ್ಯ ದಾಖಲೆ ಬರೆದ ವೈಭವ್ ಸೂರ್ಯವಂಶಿ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್

IND vs ENG: ಜೈಸ್ವಾಲ್- ಸುದರ್ಶನ್ ಅರ್ಧಶತಕ; ಮೊದಲ ದಿನದಾಟದಂತ್ಯಕ್ಕೆ ಭಾರತ 264/4

ಪಂತ್ ಜೊತೆ ತಂಡದ ನಾಯಕ ಶುಭ್​ಮನ್ ಗಿಲ್ ಕೂಡ ಅವರನ್ನು ನೋಡಲು ವೈದ್ಯಕೀಯ ಕೇಂದ್ರಕ್ಕೆ ಹೋಗಿದ್ದರು. ಪಂತ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಿಷಭ್ ಪಂತ್ ಅವರ ಕಾಲಿನಲ್ಲಿ ಗಾಯವಾದಾಗ, ಅದು ಊದಿಕೊಂಡಿತ್ತು, ಇದರಿಂದಾಗಿ ಅವರು ಸರಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಈ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಅಥವಾ ವಿಕೆಟ್ ಕೀಪಿಂಗ್ ಮಾಡುವುದು ತುಂಬಾ ಕಷ್ಟಕರವೆಂದು ತೋರುತ್ತದೆ.

ಆದಾಗ್ಯೂ, ಪಂದ್ಯದ ಎರಡನೇ ದಿನದಂದು ಪಂತ್ ಲಭ್ಯತೆ ಬಗ್ಗೆ ಖಚಿತ ಮಾಹಿತಿ ಹೊರಬೀಳಿಬಹುದು. ಪಂತ್ ಗಾಯಗೊಂಡು ಪೆವಿಲಿಯನ್‌ಗೆ ಮರಳಿದಾಗ, ಆ ಹೊತ್ತಿಗೆ ಅವರು 48 ಎಸೆತಗಳಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 37 ರನ್ ಗಳಿಸಿದ್ದರು. ಇದಕ್ಕೂ ಮೊದಲು ರಿಷಭ್ ಪಂತ್ ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಂದು ವಿಕೆಟ್ ಕೀಪಿಂಗ್ ಮಾಡುವಾಗ ಅವರ ಕೈಗೆ ಗಾಯವಾಗಿತ್ತು, ಇದರಿಂದಾಗಿ ಅವರು ಇಡೀ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಮಾತ್ರ ಮೈದಾನಕ್ಕೆ ಬಂದಿದ್ದರು. ವಿಕೆಟ್ ಕೀಪಿಂಗ್ ಧ್ರುವ್ ಜೂರೆಲ್ ಮಾಡಿದ್ದರು. ಈ ಬಾರಿ ಕೂಡ ಮತ್ತೆ ಜೂರೆಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊರುವ ಸಾಧ್ಯತೆ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ