ಸಂಕಷ್ಟದ ಸಂದರ್ಭದಲ್ಲಿ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವುದು ಹೇಗೆ ಎಂಬುದಕ್ಕೆ ದಕ್ಷಿಣ ಆಫ್ರಿಕಾ ವಿರುದ್ದದ 2ನೇ ಪಂದ್ಯದಲ್ಲಿ ರಿಷಭ್ ಪಂತ್ ಔಟಾದ ರೀತಿಯೇ ಸಾಕ್ಷಿ. ಏಕೆಂದರೆ ಪಂದ್ಯದ ಮೂರನೇ ದಿನ ರಿಷಭ್ ಪಂತ್ ಬ್ಯಾಟಿಂಗ್‌ಗೆ ಇಳಿದಾಗ ಭಾರತ 163 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಅದಾಗಲೇ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿದ್ದರು. ಇಂತಹ ಸಂದರ್ಭದಲ್ಲೇ ಟೀಮ್ ಇಂಡಿಯಾಗೆ ರಕ್ಷಣಾತ್ಮಕ ಆಟದೊಂದಿಗೆ ಮತ್ತೊಂದು ಜೊತೆಯಾಟದ ಅಗತ್ಯವಿತ್ತು. ಆದರೆ ದಕ್ಷಿಣ ಆಫ್ರಿಕಾ ಆಟಗಾರರು ಕೆಣಕುತ್ತಿದ್ದಂತೆ ರಿಷಭ್ ಪಂತ್ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಹೀಗೆ ಸ್ಲೆಡ್ಜಿಂಗ್ ಬಲೆಗೆ ಬಿದ್ದು ವಿಕೆಟ್ ನೀಡಿದ ಪಂತ್ ಅವರದ್ದು ಬೇಜವಾಬ್ದಾರಿ ಬ್ಯಾಟಿಂಗ್ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ಮೇಲುಗೈ ಸಾಧಿಸಿದ್ದ ದಕ್ಷಿಣ ಆಫ್ರಿಕಾಗೆ ರಿಷಭ್ ಪಂತ್ ಅವರ ವಿಕೆಟ್ ನಿರ್ಣಾಯಕವಾಗಿತ್ತು. ಹೀಗಾಗಿ ಪಂತ್ ಆಗಮಿಸುತ್ತಿದ್ದಂತೆ ರಸ್ಸಿ ವಂಡೆರ್ ಡುಸ್ಸೆನ್ ಕೆಣಕಲು ಆರಂಭಿಸಿದ್ದರು. ಮೊದಲ ಎರಡು ಎಸೆತಗಳನ್ನು ಪಂತ್ ಆ ಬಳಿಕ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಪಂತ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ರಬಾಡ ತಂಡಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟರು.
ಸ್ಲೆಡ್ಜಿಂಗ್ ಸೆಣಸಾಟ:
ಪಂತ್ ಕ್ರೀಸ್‌ಗೆ ಬಂದ ಕೂಡಲೇ ಶಾರ್ಟ್ ಲೆಗ್‌ನಲ್ಲಿ ನಿಂತಿದ್ದ ವಂಡೆರ್ ಡುಸ್ಸೆನ್ ಪಂತ್ ಅವರನ್ನು ಕೆಣಕಲು ಆರಂಭಿಸಿದ್ದರು. ಏಕೆಂದರೆ ಜೋಹಾನ್ಸ್‌ಬರ್ಗ್ ಟೆಸ್ಟ್‌ನ ಎರಡನೇ ದಿನದಂದು ಪಂತ್ ಡುಸ್ಸೆನ್ ಕ್ಯಾಚ್ ಹಿಡಿದಿದ್ದರು. ಆದರೆ ಆ ವೇಳೆ ಚೆಂಡು ನೆಲಕ್ಕೆ ತಾಗಿದ್ದರೂ ಟೀಮ್ ಇಂಡಿಯಾ ಆಟಗಾರರು ಹಾಗೂ ಪಂತ್ ಮಾಡಿದ ಮನವಿಗೆ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಇದೇ ಕಾರಣದಿಂದ ಪಂತ್ ಬ್ಯಾಟಿಂಗ್‌ಗೆ ಆಗಮಿಸಿದಾಗ ರಸ್ಸಿ ವಂಡೆರ್ ಡುಸ್ಸೆನ್ ಕೆಣಕಲಾರಂಭಿಸಿದ್ದರು. ಇದೇ ವೇಳೆ ಪಂತ್ ಸುಮ್ಮನಿರುವಂತೆ ಸೂಚಿಸಿದ್ದರು. ಇದಾಗ್ಯೂ ಡುಸ್ಸೆನ್ ಸ್ಲೆಡ್ಜಿಂಗ್ ಮುಂದುವರೆಸಿದ್ದರು. ಇತ್ತ ಕೋಪವನ್ನು ನಿಯಂತ್ರಿಸಲಾಗದೇ ಪಂತ್ ವಿಕೆಟ್ ಕೈಚೆಲ್ಲಿ ಹೊರನಡೆದರು.
ಗಬ್ಬಾ ಟೆಸ್ಟ್‌ನಲ್ಲಿ ಅದ್ಭುತ ಗೆಲುವಿನ ಬಳಿಕ ವಿದೇಶದಲ್ಲಿ ರಿಷಭ್ ಪಂತ್ ಅವರ ಟೆಸ್ಟ್ ಪ್ರದರ್ಶನ ನಿರಂತರವಾಗಿ ಕುಸಿಯುತ್ತಿದೆ. ಕಳೆದ 13 ಇನ್ನಿಂಗ್ಸ್‌ಗಳಲ್ಲಿ 19.23 ಸರಾಸರಿಯಲ್ಲಿ ಕೇವಲ 250 ರನ್ ಗಳಿಸಿದ್ದಾರೆ. ಅಂದರೆ ಕಳೆದ 13 ಇನಿಂಗ್ಸ್ಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಪಂತ್ ಸಂಪೂರ್ಣ ವಿಫಲರಾಗಿದ್ದಾರೆ. ಇದೀಗ ವೈಫಲ್ಯ ದಕ್ಷಿಣ ಆಫ್ರಿಕಾದಲ್ಲೂ ಮುಂದುವರೆದಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Rishabh pant lost his wicket after chat with rassie van der dussen)