ಡಿಸೆಂಬರ್ 2022 ರ ಕೊನೆಯಲ್ಲಿ, ಕಾರು ಅಪಘಾತಕ್ಕೊಳಗಾದ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಗುಣಮುಖರಾಗಿ ಐಪಿಎಲ್ 2024 ಮೂಲಕ 15 ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ಋತುವಿನ ಮೊದಲೆರಡು ಪಂದ್ಯಗಳಲ್ಲಿ ಪಂತ್ ಕಡೆಯಿಂದ ವಾವ್ ಎಂಬಂತ ಪ್ರದರ್ಶನ ಬಂದಿರಲಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅವರ ಬ್ಯಾಟ್ ಜೋರಾಗಿಯೇ ಸದ್ದು ಮಾಡಿತು. ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿತು.
ಸಿಎಸ್‌ಕೆ ವಿರುದ್ಧ ಪಂತ್ ತಮ್ಮ ಹಳೆಯ ಶೈಲಿಯಲ್ಲಿ ಕಾಣಿಸಿಕೊಂಡರು. ಅದರಲ್ಲೂ ಹೆಲಿಕಾಪ್ಟರ್ ಶಾಟ್ ಸೃಷ್ಟಿಕರ್ತ ಎಂಎಸ್ ಧೋನಿ ಅವರ ಮುಂದೆ ಅದೆರೀತಿಯ ಶಾಟ್ ಆಡಿ ಸಿಎಸ್‌ಕೆ ಶಾಕ್ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಪಂತ್ ಬಹುತೇಕ ಯಾರ್ಕರ್ ಎಸೆತವನ್ನು ಸ್ಲ್ಯಾಮ್ ಮಾಡಿ ವೈಡ್ ಲಾಂಗ್-ಆನ್ ಮೂಲಕ ಸಿಕ್ಸರ್ ಸಿಡಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಒಂದೇ ಕೈಯಲ್ಲಿ ಸಿಕ್ಸ್ ಸಿಡಿಸಿ ನಿಬ್ಬೆರಗಾಗಿಸಿದ 42 ವರ್ಷದ ಧೋನಿ: ವಿಡಿಯೋ ನೋಡಿ
— Cricket Videos (@cricketvid123) March 31, 2024
That iconic one-handed six is back 🥹#DCvCSK #JioCinemaSports #TATAIPL #IPLonJioCinema pic.twitter.com/N01gOlTLRM
— JioCinema (@JioCinema) March 31, 2024
ಇನ್ನು 18ನೇ ಓವರ್ ನ 5ನೇ ಎಸೆತದಲ್ಲಿ ಮುಸ್ತಫಿಜುರ್ ರೆಹಮಾನ್ ವಿರುದ್ಧ ಪಂತ್ ಒಂದು ಕೈಯಿಂದ ಸಿಕ್ಸರ್ ಬಾರಿಸಿದರು. ಪಂತ್ ಹೊಡೆದ ಹೊಡೆತವು ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಬೌಂಡರಿ ಗೆರೆಯ ಹೊರಗೆ ಪ್ರೇಕ್ಷಕರ ನಡುವೆ ಬಿದ್ದಿತು. ಈ ಪಂದ್ಯದಲ್ಲಿ ರಿಷಬ್ ಪಂತ್ ಅರ್ಧಶತಕ ಬಾರಿಸಿದರು. 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 19ನೇ ಓವರ್‌ನಲ್ಲಿ ಪಂತ್ ಪತಿರಾನ ವಿರುದ್ಧ 4 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಒಟ್ಟು 32 ಎಸೆತಗಳಲ್ಲಿ 4 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 51 ರನ್ ಗಳಿಸಿದರು.
ಅಗ್ರಸ್ಥಾನದಿಂದ ಕುಸಿದ ಸಿಎಸ್‌ಕೆ: ಪಾಯಿಂಟ್ಸ್ ಟೇಬಲ್ನಲ್ಲಿ ದೊಡ್ಡ ಬದಲಾವಣೆ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಈ ಋತುವಿನ ಮೊದಲ ಜಯ ಸಾಧಿಸಿತು. ಡೆಲ್ಲಿ ಈ ಪಂದ್ಯವನ್ನು ತಂಡ 20 ರನ್‌ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ 5 ವಿಕೆಟ್‌ಗೆ 191 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಸಿಎಸ್‌ಕೆ ತಂಡ 6 ವಿಕೆಟ್‌ಗೆ 171 ರನ್ ಗಳಿಸಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ