AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾ-ಬಾಂಗ್ಲಾದೇಶ ಟೆಸ್ಟ್ ಮಧ್ಯೆ ಭಾರತದ 48 ವರ್ಷಗಳ ಹಳೆಯ ವಿಶ್ವ ದಾಖಲೆ ಉಡೀಸ್

Sri Lanka vs Bangladesh 2nd Test: ಮೊದಲ ಇನ್ನಿಂಗ್ಸ್‌ನಲ್ಲಿ 531 ರನ್‌ಗಳ ಶ್ರೀಲಂಕಾ ಮೊತ್ತವು ಯಾವುದೇ ಬ್ಯಾಟರ್ ಶತಕ ಗಳಿಸಲು ಸಾಧ್ಯವಾಗದ ಟೆಸ್ಟ್ ಪಂದ್ಯವೊಂದರಲ್ಲಿ ತಂಡದಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ. 1976 ರಲ್ಲಿ ಕಾನ್ಪುರದಲ್ಲಿ ನ್ಯೂಝಿಲೆಂಡ್ ವಿರುದ್ಧ ಬಿಷನ್ ಸಿಂಗ್ ಬೇಡಿ ನಾಯಕತ್ವದಲ್ಲಿ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 524 ರನ್ ಗಳಿಸಿತ್ತು.

ಶ್ರೀಲಂಕಾ-ಬಾಂಗ್ಲಾದೇಶ ಟೆಸ್ಟ್ ಮಧ್ಯೆ ಭಾರತದ 48 ವರ್ಷಗಳ ಹಳೆಯ ವಿಶ್ವ ದಾಖಲೆ ಉಡೀಸ್
Sri Lanka Cricket
Vinay Bhat
|

Updated on: Apr 01, 2024 | 10:22 AM

Share

ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಶ್ರೀಲಂಕಾದ (Sri Lanka vs Bangladesh) ಪುರುಷರ ಕ್ರಿಕೆಟ್ ತಂಡವು ಭಾನುವಾರ (ಮಾರ್ಚ್ 31) ಇತಿಹಾಸವನ್ನು ಸೃಷ್ಟಿಸಿತು. ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಜರುಗುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು 531 ರನ್ ಗಳಿಸಿದ ನಂತರ, ಶ್ರೀಲಂಕಾ ತಂಡ ಭಾರತ ನಿರ್ಮಿಸಿದ್ದ 48 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಿ, ವಿಶೇಷ ಸಾಧನೆ ಮಾಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 531 ರನ್‌ಗಳ ಶ್ರೀಲಂಕಾ ಮೊತ್ತವು ಯಾವುದೇ ಬ್ಯಾಟರ್ ಶತಕ ಗಳಿಸಲು ಸಾಧ್ಯವಾಗದ ಟೆಸ್ಟ್ ಪಂದ್ಯವೊಂದರಲ್ಲಿ ತಂಡದಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ. ನಿಶಾನ್ ಮದುಷ್ಕಾ (57), ದಿಮುತ್ ಕರುಣಾರತ್ನೆ (86), ಕುಸಾಲ್ ಮೆಂಡಿಸ್ (93), ದಿನೇಶ್ ಚಾಂಡಿಮಾಲ್ (59), ಧನಂಜಯ ಡಿ ಸಿಲ್ವಾ (70) ಮತ್ತು ಕಮಿಂದು ಮೆಂಡಿಸ್ (92) ಒಟ್ಟು ಆರು ಬ್ಯಾಟ್ಸ್‌ಮನ್‌ಗಳು ಲಂಕಾ ಪರ ಅರ್ಧಶತಕ ಗಳಿಸಿದರು. ಸಿಲ್ವಾ ನೇತೃತ್ವದ ತಂಡದ ಪರ ಯಾರೂ ಟ್ರಿಪಲ್-ಫಿಗರ್ ಮಾರ್ಕ್ ಅನ್ನು ತಲುಪಲು ಸಾಧ್ಯವಾಗಲಿಲ್ಲ.

ಧೋನಿ ಎದುರೇ ಹೆಲಿಕಾಫ್ಟರ್ ಶಾಟ್ ಸಿಡಿಸಿ ಶಾಕ್ ಕೊಟ್ಟ ರಿಷಭ್ ಪಂತ್: ವಿಡಿಯೋ

1976 ರಲ್ಲಿ ಕಾನ್ಪುರದಲ್ಲಿ ನ್ಯೂಝಿಲೆಂಡ್ ವಿರುದ್ಧ ಬಿಷನ್ ಸಿಂಗ್ ಬೇಡಿ ನಾಯಕತ್ವದಲ್ಲಿ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 524 ರನ್ ಗಳಿಸಿತ್ತು. ಇದು ಭಾರತ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಶತಕವಿಲ್ಲದೆ ಅತಿ ಹೆಚ್ಚು ರನ್ ಗಳಿಸಿದ ಹಿಂದಿನ ದಾಖಲೆಯಾಗಿತ್ತು. ಆ ಪಂದ್ಯದಲ್ಲಿ ಭಾರತದ ಪರ ಸುನಿಲ್ ಗವಾಸ್ಕರ್ (66), ಮೊಹಿಂದರ್ ಅಮರನಾಥ್ (70), ಗುಂಡಪ್ಪ ವಿಶ್ವನಾಥ್ (68), ಅಶೋಕ್ ಮಂಕಡ್ (50), ಸೈಯದ್ ಕಿರ್ಮಾನಿ (64) ಮತ್ತು ಬಿಷನ್ ಸಿಂಗ್ ಬೇಡಿ (50) ಅರ್ಧಶತಕ ಗಳಿಸಿದ್ದರು. ಇದೀಗ ಈ ದಾಖಲೆಯನ್ನು ಶ್ರೀಲಂಕಾ ಮುರಿದಿದೆ.

ಕಳೆದ ವಾರ ಸಿಲ್ಹೆಟ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 238 ರನ್‌ಗಳಿಂದ ಗೆದ್ದಿದ್ದ ಶ್ರೀಲಂಕಾ, ಇದೀಗ ಎರಡನೇ ಟೆಸ್ಟ್​ನಲ್ಲಿ ಎರಡನೇ ದಿನದಾಟದ ಅಂತ್ಯದಲ್ಲಿ ಒಬ್ಬ ಬಾಂಗ್ಲಾದೇಶದ ಬ್ಯಾಟಿಂಗ್‌ನ್ನು ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಅವರು ಇನ್ನೂ ಶ್ರೀಲಂಕಾದ ಮೊದಲ ಇನ್ನಿಂಗ್ಸ್ ಸ್ಕೋರ್‌ಗಿಂತ 476 ರನ್‌ಗಳಿಂದ ಹಿನ್ನಡೆಯಲ್ಲಿದ್ದಾರೆ. ಶ್ರೀಲಂಕಾ ತಂಡದ ವಿರುದ್ಧ ಟೆಸ್ಟ್ ಸರಣಿಯ ಸೋಲನ್ನು ತಪ್ಪಿಸಬೇಕಾದರೆ ಬಾಂಗ್ಲಾದೇಶಕ್ಕೆ ಈ ಟೆಸ್ಟ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಒಂದೇ ಕೈಯಲ್ಲಿ ಸಿಕ್ಸ್ ಸಿಡಿಸಿ ನಿಬ್ಬೆರಗಾಗಿಸಿದ 42 ವರ್ಷದ ಧೋನಿ: ವಿಡಿಯೋ ನೋಡಿ

ಆತಿಥೇಯರ ಪರ, ಲೆಜೆಂಡರಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮೊದಲ ಇನ್ನಿಂಗ್ಸ್‌ನಲ್ಲಿ 37 ಓವರ್‌ಗಳಲ್ಲಿ 110 ರನ್ ನೀಡಿ ಮೂರು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಇಬ್ಬರು ಬ್ಯಾಟರ್‌ಗಳನ್ನು ಹಸನ್ ಮಹಮೂದ್ ಡಗೌಟ್‌ಗೆ ಕಳುಹಿಸಿದರು. ವೇಗಿ ಹಸನ್ ಮಹಮೂದ್ ಮತ್ತು ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ ಕ್ರಮವಾಗಿ 20 ಮತ್ತು 46 ಎಸೆತಗಳಲ್ಲಿ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ