DC vs CSK: ಧೋನಿ ಎದುರೇ ಹೆಲಿಕಾಫ್ಟರ್ ಶಾಟ್ ಸಿಡಿಸಿ ಶಾಕ್ ಕೊಟ್ಟ ರಿಷಭ್ ಪಂತ್: ವಿಡಿಯೋ

Rishabh Pant’s Helicopter Shot: ಐಪಿಎಲ್ 2024ರ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ರಿಷಭ್ ಪಂತ್ ತಮ್ಮ ಹಳೆಯ ಶೈಲಿಯಲ್ಲಿ ಕಾಣಿಸಿಕೊಂಡರು. ಅದರಲ್ಲೂ ಹೆಲಿಕಾಪ್ಟರ್ ಶಾಟ್ ಸೃಷ್ಟಿಕರ್ತ ಎಂಎಸ್ ಧೋನಿ ಅವರ ಮುಂದೆ ಅದೆರೀತಿಯ ಶಾಟ್ ಆಡಿ ಸಿಎಸ್​ಕೆ ಶಾಕ್ ನೀಡಿದರು.

DC vs CSK: ಧೋನಿ ಎದುರೇ ಹೆಲಿಕಾಫ್ಟರ್ ಶಾಟ್ ಸಿಡಿಸಿ ಶಾಕ್ ಕೊಟ್ಟ ರಿಷಭ್ ಪಂತ್: ವಿಡಿಯೋ
Rishabh Pant Six
Follow us
Vinay Bhat
|

Updated on: Apr 01, 2024 | 8:40 AM

ಡಿಸೆಂಬರ್ 2022 ರ ಕೊನೆಯಲ್ಲಿ, ಕಾರು ಅಪಘಾತಕ್ಕೊಳಗಾದ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಗುಣಮುಖರಾಗಿ ಐಪಿಎಲ್ 2024 ಮೂಲಕ 15 ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ಋತುವಿನ ಮೊದಲೆರಡು ಪಂದ್ಯಗಳಲ್ಲಿ ಪಂತ್ ಕಡೆಯಿಂದ ವಾವ್ ಎಂಬಂತ ಪ್ರದರ್ಶನ ಬಂದಿರಲಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅವರ ಬ್ಯಾಟ್ ಜೋರಾಗಿಯೇ ಸದ್ದು ಮಾಡಿತು. ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿತು.

ಸಿಎಸ್​ಕೆ ವಿರುದ್ಧ ಪಂತ್ ತಮ್ಮ ಹಳೆಯ ಶೈಲಿಯಲ್ಲಿ ಕಾಣಿಸಿಕೊಂಡರು. ಅದರಲ್ಲೂ ಹೆಲಿಕಾಪ್ಟರ್ ಶಾಟ್ ಸೃಷ್ಟಿಕರ್ತ ಎಂಎಸ್ ಧೋನಿ ಅವರ ಮುಂದೆ ಅದೆರೀತಿಯ ಶಾಟ್ ಆಡಿ ಸಿಎಸ್​ಕೆ ಶಾಕ್ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಪಂತ್ ಬಹುತೇಕ ಯಾರ್ಕರ್ ಎಸೆತವನ್ನು ಸ್ಲ್ಯಾಮ್ ಮಾಡಿ ವೈಡ್ ಲಾಂಗ್-ಆನ್‌ ಮೂಲಕ ಸಿಕ್ಸರ್ ಸಿಡಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಒಂದೇ ಕೈಯಲ್ಲಿ ಸಿಕ್ಸ್ ಸಿಡಿಸಿ ನಿಬ್ಬೆರಗಾಗಿಸಿದ 42 ವರ್ಷದ ಧೋನಿ: ವಿಡಿಯೋ ನೋಡಿ

ರಿಷಭ್ ಪಂತ್ ಸಿಕ್ಸ್ ಸಿಡಿಸಿದ ವಿಡಿಯೋಗಳು:

ಇನ್ನು 18ನೇ ಓವರ್ ನ 5ನೇ ಎಸೆತದಲ್ಲಿ ಮುಸ್ತಫಿಜುರ್ ರೆಹಮಾನ್ ವಿರುದ್ಧ ಪಂತ್ ಒಂದು ಕೈಯಿಂದ ಸಿಕ್ಸರ್ ಬಾರಿಸಿದರು. ಪಂತ್ ಹೊಡೆದ ಹೊಡೆತವು ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಬೌಂಡರಿ ಗೆರೆಯ ಹೊರಗೆ ಪ್ರೇಕ್ಷಕರ ನಡುವೆ ಬಿದ್ದಿತು. ಈ ಪಂದ್ಯದಲ್ಲಿ ರಿಷಬ್ ಪಂತ್ ಅರ್ಧಶತಕ ಬಾರಿಸಿದರು. 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 19ನೇ ಓವರ್‌ನಲ್ಲಿ ಪಂತ್ ಪತಿರಾನ ವಿರುದ್ಧ 4 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಒಟ್ಟು 32 ಎಸೆತಗಳಲ್ಲಿ 4 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 51 ರನ್ ಗಳಿಸಿದರು.

ಅಗ್ರಸ್ಥಾನದಿಂದ ಕುಸಿದ ಸಿಎಸ್​ಕೆ: ಪಾಯಿಂಟ್ಸ್ ಟೇಬಲ್​ನಲ್ಲಿ ದೊಡ್ಡ ಬದಲಾವಣೆ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಈ ಋತುವಿನ ಮೊದಲ ಜಯ ಸಾಧಿಸಿತು. ಡೆಲ್ಲಿ ಈ ಪಂದ್ಯವನ್ನು ತಂಡ 20 ರನ್‌ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ 5 ವಿಕೆಟ್‌ಗೆ 191 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಸಿಎಸ್‌ಕೆ ತಂಡ 6 ವಿಕೆಟ್‌ಗೆ 171 ರನ್ ಗಳಿಸಲಷ್ಟೇ ಶಕ್ತವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್