Rishab Pant: ಆಹಾ ಅದೆಂತಹ ಅದ್ಭುತ ಕ್ಯಾಚ್​!: ಟ್ರೋಲಿಗರಿಗೆ ಉತ್ತರ ನೀಡುತ್ತಲೇ ಇದ್ದಾರೆ ರಿಷಬ್​ ಪಂತ್​

Ind vs Eng, 2nd Test: ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಅಷ್ಟೇ. 55 ರನ್​ ಬಾರಿಸಿ ಅಜೇಯರಾಗಿ ಉಳಿದಿದ್ದರು. ಇದರಲ್ಲಿ ಏಳು ಬೌಂಡರಿ, ಮೂರು ಸಿಕ್ಸರ್​​ಗಳನ್ನು ಒಳಗೊಂಡಿದೆ.

Rishab Pant: ಆಹಾ ಅದೆಂತಹ ಅದ್ಭುತ ಕ್ಯಾಚ್​!: ಟ್ರೋಲಿಗರಿಗೆ ಉತ್ತರ ನೀಡುತ್ತಲೇ ಇದ್ದಾರೆ ರಿಷಬ್​ ಪಂತ್​
ರಿಷಬ್​ ಪಂತ್​ ಕ್ಯಾಚ್​ ಹಿಡಿದ ದೃಶ್ಯ
Follow us
|

Updated on:Feb 14, 2021 | 2:57 PM

ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್​ ಕೀಪರ್​ ನೀಡಿದ ಅದ್ಭುತ ಪ್ರದರ್ಶನವನ್ನು ಯಾರೂ ಮರೆಯುವಂತಿಲ್ಲ. ಆದರೆ, ಈ ಅದ್ಭುತ ಪ್ರದರ್ಶನಕ್ಕೂ ಮೊದಲು ಅವರು ಹಿಗ್ಗಾ-ಮುಗ್ಗಾ ಟ್ರೋಲ್​ ಆಗಿದ್ದರು. ಸತತ ಕ್ಯಾಚ್​ ಬಿಡುವ ಮೂಲಕ ಟ್ರೋಲ್​​ ಮಾಡುವವರಿಗೆ ಆಹಾರವಾಗಿದ್ದರು. ನಂತರ ಪುಟಿದೆದ್ದ ರಿಷಬ್​ ತನ್ನ ಓಟವನ್ನು ನಿಲ್ಲಿಸಿಲ್ಲ. ಆಸ್ಟ್ರೇಲಿಯಾ ನೆಲದಲ್ಲಿ ಮಾತ್ರವಲ್ಲದೆ ಭಾರತ ನೆಲದಲ್ಲೂ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಂದು ಅವರು ಹಿಡಿದ ಅದ್ಭುತ ಕ್ಯಾಚ್​ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಆಸ್ಟ್ರೇಲಿಯಾ ನೆಲದಲ್ಲಿ ರಿಷಬ್​ ಕ್ಯಾಚ್​ ಬಿಟ್ಟಿದ್ದಕ್ಕೆ ಸಾಕಷ್ಟು ಜನರು ‘ಈ ಆಟಗಾರರನ್ನು ಏಕೆ ಹಾಕಿಕೊಂಡಿದ್ದೀರಿ?’ ಎಂದು ಪ್ರಶ್ನೆ ಮಾಡಿದ್ದರು. ಈ ರೀತಿಯ ಟ್ರೋಲ್​ಗಳನ್ನು ನೋಡಿ ಮೈದಾನದಲ್ಲಿ ಆಡುವುದಿದೆಯಲ್ಲ ಅದು ನಿಜಕ್ಕೂ ಒಂದು ಸವಾಲಿನ ಕೆಲಸ. ಮೈದಾನದಲ್ಲಿ ಇರುವ ಒತ್ತಡ ಒಂದು ಕಡೆ ಆದರೆ, ಬ್ಯಾಟ್​ ಬೀಸುವಾಗ, ಫೀಲ್ಡಿಂಗ್​ ಮಾಡುವಾಗ ನೆನಪಾಗುವ ಟ್ರೋಲ್​ಗಳು ಮತ್ತೊಂದು ಕಡೆ. ಇದೆಲ್ಲದರ ವಿರುದ್ಧ ಸಿಡಿದೆದ್ದ ರಿಷಬ್​, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Ind vs Eng, 2nd Test, Day 2, LIVE Score: ಸಿರಾಜ್​ಗೆ ಮೊದಲ ಎಸೆತದಲ್ಲೇ ವಿಕೆಟ್​, ಶತಕ ಪೂರೈಸಿದ ಇಂಗ್ಲೆಂಡ್​

ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಅಷ್ಟೇ. 55 ರನ್​ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ ಏಳು ಬೌಂಡರಿ, ಮೂರು ಸಿಕ್ಸರ್​​ಗಳು ಒಳಗೊಂಡಿವೆ. ಇನ್ನು, ಅವರು ಹಿಡಿದ ಅದ್ಭುತ ಕ್ಯಾಚ್​ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಆಸ್ಟ್ರೇಲಿಯಾ ಐದು ವಿಕೆಟ್​ಗಳನ್ನು ಕಳೆದುಕೊಂಡು ಆಡುತ್ತಿತ್ತು. ಈ ವೇಳೆ, ಮೊಹ್ಮದ್​ ಸಿರಾಜ್​ ಹಾಕಿದ ಬೌಲ್​ಅನ್ನು ಇಂಗ್ಲೆಂಡ್​ ಆಟಗಾರ ಆಲಿ ಪೋಪ್ ಬೌಂಡರಿಗೆ ಕಳುಹಿಸಲು ಹೋದರು.  ಆದರೆ ಅದು ಎಡ್ಜ್​​ ಆಗಿ ಬೌಲ್​ ನೇರವಾಗಿ ಪಂತ್​ ಕೈ ಬಳಿ ಹೋಗಿತ್ತು. ಪಂತ್​ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದರು. ಈ ಅದ್ಭುತ ಕ್ಯಾಚ್​ಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Rishabh pant

ರಿಷಬ್​ ಪಂತ್​ ಕ್ಯಾಚ್​ ಹಿಡಿದ ದೃಶ್ಯ

ಇದನ್ನೂ ಓದಿ: ICC award Rishabh Pant ವಿಕೆಟ್​ ಕೀಪರ್-ಬ್ಯಾಟ್ಸ್​ಮನ್ ರಿಷಬ್​ ಪಂತ್​ ಅದ್ಭುತ ಆಟಕ್ಕೆ ICC ಯಿಂದ ಸಿಕ್ತು ವಿಶೇಷ ಗೌರವ!

Published On - 2:54 pm, Sun, 14 February 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್