ನಮೀಬಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ: ರಿಯಾನ್ ಪರಾಗ್​ ನಾಯಕ; ವೇಳಾಪಟ್ಟಿ ಪ್ರಕಟ

Assam vs Namibia ODI Series: ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದರೆ, ಅಸ್ಸಾಂ ರಾಜ್ಯ ಕ್ರಿಕೆಟ್ ತಂಡವು ನಮೀಬಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಸಿದ್ಧವಾಗಿದೆ. ರಿಯಾನ್ ಪರಾಗ್ ನಾಯಕನಾಗಿರುವ ಈ ಸರಣಿ ಜೂನ್ 21 ರಿಂದ 29 ರವರೆಗೆ ನಡೆಯಲಿದೆ. ನಮೀಬಿಯಾದಲ್ಲಿ ನಡೆಯುವ ಈ ಸರಣಿಯಲ್ಲಿ ಅಸ್ಸಾಂ ತಂಡ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ನಮೀಬಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ: ರಿಯಾನ್ ಪರಾಗ್​ ನಾಯಕ; ವೇಳಾಪಟ್ಟಿ ಪ್ರಕಟ
Riyan Parag

Updated on: Jun 11, 2025 | 6:31 PM

ಟೀಂ ಇಂಡಿಯಾ ಪ್ರಸ್ತುತ ಇಂಗ್ಲೆಂಡ್ (Ind vs Eng) ಪ್ರವಾಸದಲ್ಲಿದ್ದು, ಶುಭ್​ಮನ್ ಗಿಲ್ (Shubman Gill) ನೇತೃತ್ವದಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ಜೂನ್ 20 ರಿಂದ ಪ್ರಾರಂಭವಾಗಲಿದೆ. ರೋಹಿತ್ ಶರ್ಮಾ (Rohit Sharma) ಟೆಸ್ಟ್​ನಿಂದ ನಿವೃತ್ತರಾದ ನಂತರ, ಶುಭ್​ಮನ್ ಗಿಲ್ ಅವರಿಗೆ ಟೆಸ್ಟ್ ನಾಯಕತ್ವ ನೀಡಲಾಗಿದೆ. ಈ ನಡುವೆ ರಾಜ್ಯ ತಂಡವೊಂದು ನಮೀಬಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆಡಲು ಸಜ್ಜಾಗಿದೆ. ಅಸ್ಸಾಂ ತಂಡ 5 ಪಂದ್ಯಗಳ ಏಕದಿನ ಸರಣಿಗಾಗಿ ನಮೀಬಿಯಾ ಪ್ರವಾಸ ಕೈಗೊಳ್ಳಲಿದ್ದು ನಮೀಬಿಯಾ ಕ್ರಿಕೆಟ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಈ ಮಾಹಿತಿಯನ್ನು ನೀಡಿದೆ.

ರಿಯಾನ್ ಪರಾಗ್ ನಾಯಕ

ಅಸ್ಸಾಂ ಹಾಗೂ ನಮೀಬಿಯಾ ಏಕದಿನ ಸರಣಿಯನ್ನು ನಮೀಬಿಯಾ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಈ 5 ಪಂದ್ಯಗಳ ಸರಣಿ ಜೂನ್ 21 ರಿಂದ 29 ರವರೆಗೆ ನಡೆಯಲಿದೆ. ಈ ಸರಣಿಯಲ್ಲಿ ರಿಯಾನ್ ಪರಾಗ್ ಅಸ್ಸಾಂ ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕತ್ವದಲ್ಲಿ ರಿಯಾನ್ ಪರಾಗ್ ಸಾಕಷ್ಟು ಅನುಭವ ಹೊಂದಿದ್ದಾರೆ. ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಇತ್ತ ಗೆರ್ಹಾರ್ಡ್ ಎರಾಸ್ಮಸ್ ನಮೀಬಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಅಲ್ಲದೆ, ನಮೀಬಿಯಾ ತಂಡದಲ್ಲಿ ಆಲ್‌ರೌಂಡರ್‌ಗಳಾದ ಜೆಜೆ ಸ್ಮಿತ್ ಮತ್ತು ಜಾನ್ ನಿಕೋಲ್ ಲಾಫ್ಟಿ ಈಟನ್ ಸೇರಿದ್ದಾರೆ. ವಾಸ್ತವವಾಗಿ ನಮೀಬಿಯಾ ತಂಡ ರಾಜ್ಯ ತಂಡವೊಂದರ ವಿರುದ್ಧ ಸರಣಿ ಆಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪಂಜಾಬ್ ಮತ್ತು ಕರ್ನಾಟಕ ವಿರುದ್ಧವೂ ಸರಣಿ ಆಡಿತ್ತು.

ಪರಾಗ್ ಅಂತರಾಷ್ಟ್ರೀಯ ವೃತ್ತಿಜೀವನ

ರಿಯಾನ್ ಪರಾಗ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವವಿಲ್ಲ. ಆದರೆ ಐಪಿಎಲ್‌ನಲ್ಲಿನ ಪ್ರದರ್ಶನದಿಂದಾಗಿ ಅವರಿಗೆ ಭಾರತೀಯ ತಂಡದಲ್ಲಿ ಆಡಲು ಅವಕಾಶ ಸಿಕ್ಕಿತ್ತು. ಇದುವರೆಗೆ ಭಾರತ ತಂಡದ ಪರ ರಿಯಾನ್ 9 ಟಿ20ಐ ಮತ್ತು 1 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಟಿ20 ಕ್ರಿಕೆಟ್​ನಲ್ಲಿ 106 ರನ್‌ ಬಾರಿಸಿರುವ ಪರಾಗ್, ಏಕದಿನ ಪಂದ್ಯದಲ್ಲಿ 15 ರನ್‌ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲೂ ಕಮಾಲ್ ಮಾಡಿರುವ ರಿಯಾನ್ ಟಿ20 ಯಲ್ಲಿ 4 ವಿಕೆಟ್‌ ಮತ್ತು ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಏಕದಿನ ಸರಣಿ ವೇಳಾಪಟ್ಟಿ

  1. ಮೊದಲ ಪಂದ್ಯ: 21 ಜೂನ್ 2025
  2. 2ನೇ ಪಂದ್ಯ: 23 ಜೂನ್ 2025
  3. 3ನೇ ಪಂದ್ಯ: 25 ಜೂನ್ 2025
  4. 4ನೇ ಪಂದ್ಯ: 27 ಜೂನ್ 2025
  5. ಐದನೇ ಪಂದ್ಯ: 29 ಜೂನ್ 2025

IPL 2025: ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದ ಪರಾಗ್; ವಿಡಿಯೋ

ಅಸ್ಸಾಂ ಸಂಭಾವ್ಯ ತಂಡ: ರಿಯಾನ್ ಪರಾಗ್ (ನಾಯಕ), ಡ್ಯಾನಿಶ್ ದಾಸ್, ಪ್ರದ್ಯುನ್ ಸೈಕಿಯಾ, ರಾಹುಲ್ ಹಜಾರಿಕಾ, ರಿಶವ್ ದಾಸ್, ಸಿಬ್ಶಂಕರ್ ರಾಯ್, ಸುಭಮ್ ಮಂಡಲ್, ಆಕಾಶ್ ಸೇನ್‌ಗುಪ್ತಾ, ಆಮ್ಲನ್ಜ್ಯೋತಿ ದಾಸ್, ಕುನಾಲ್ ಶರ್ಮಾ, ಮೃನ್ಮೋಯ್ ದತ್ತಾ, ಪರ್ವೇಜ್ ಮುಸಾರಫ್, ಸ್ವರೂಪ್ ಪುರ್ಕಾಯಸ್ಥ, ಅಭಿಷೇಕ್ ಠಾಕುರಿ(ವಿಕೆಟ್ ಕೀಪರ್), ರುಹಿನಂದನ್ ಪೆಗು (ವಿಕೆಟ್ ಕೀಪರ್), ಸುಮಿತ್ ಘಡಿಗಾಂವ್ಕರ್ (ವಿಕೆಟ್ ಕೀಪರ್), ಅವಿನೋವ್ ಚೌಧರಿ, ಭಾರ್ಗವ್ ದತ್ತಾ, ದರ್ಶನ್ ರಾಜ್‌ಬೊಂಗ್‌ಶಿ, ದೀಪಜ್ಯೋತಿ ಸೈಕಿಯಾ, ಮುಖ್ತಾರ್ ಹುಸೇನ್, ರಾಹುಲ್ ಸಿಂಗ್, ಸಿದ್ಧಾರ್ಥ್ ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ