Riyan Parag: ಮಧ್ಯರಾತ್ರಿ ಮಾಡೆಲ್ನ ಮೂಡ್ಗೆ ಪ್ರತಿಕ್ರಿಯಿಸಿ ಸಿಕ್ಕಿಬಿದ್ದ ಪರಾಗ್..!
Riyan Parag: ಐಪಿಎಲ್ 2022 ರಲ್ಲಿ ರಿಯಾನ್ ಪರಾಗ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ನಡುವೆ ವಾಗ್ವಾದ ನಡೆದಿತ್ತು.

ರಾಜಸ್ಥಾನ್ ರಾಯಲ್ಸ್‌ನ ಆಲ್‌ರೌಂಡರ್ ರಿಯಾನ್ ಪರಾಗ್ (Riyan Parag) ಆಗಾಗ್ಗೆ ವಿವಾದಗಳಿಂದ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲ್ಲೂ 20 ವರ್ಷದ ಯುವ ಆಟಗಾರ ಐಪಿಎಲ್ ವೇಳೆ ತನ್ನ ಅಟಿಟ್ಯೂಡ್ನಿಂದಲೇ ಹೆಚ್ಚು ಚರ್ಚಿತರಾಗಿದ್ದರು. ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಮಾಡಿಕೊಂಡ ಸಣ್ಣದೊಂದು ಎಡವಟ್ಟಿನಿಂದ ಎಂಬುದು ವಿಶೇಷ.
ಟ್ವಿಟರ್ನಲ್ಲಿ ಜಾನ್ವಿ ಶರ್ಮಾ ಹೆಸರಿನ ಮಾಡೆಲ್ ಒಬ್ಬರು ತಡರಾತ್ರಿ 12.29ಕ್ಕೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ನಲ್ಲಿ ಆಕೆ ತನ್ನ ಲೈಂಗಿಕ ಭಾವನೆಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ರಿಯಾನ್ ಪರಾಗ್ ಲೈಕ್ ಒತ್ತಿ ಪ್ರತಿಕ್ರಿಯಿಸಿದ್ದಾರೆ. ಆದರೆ ಇದನ್ನು ಗಮನಿಸಿದ ಅಭಿಮಾನಿಗಳು ಈ ಟ್ವೀಟ್ನ ಸ್ಕ್ರೀನ್ ಶಾಟ್ ತೆಗೆದು ಇದೀಗ ರಿಯಾನ್ ಪರಾಗ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಇದೀಗ ಮಧ್ಯರಾತ್ರಿ ಮಾಡಿದ ಸಣ್ಣದೊಂದು ಎಡವಟ್ಟಿನಿಂದಾಗಿ ಯುವ ಆಟಗಾರ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅದರಲ್ಲೂ ಕೆಲವರು ರಿಯಾನ್ ಪರಾಗ್ ಅವರ ಮನಸ್ಥಿತಿಯನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ.
ಐಪಿಎಲ್ನಲ್ಲಿ ಜಗಳ: ಐಪಿಎಲ್ 2022 ರಲ್ಲಿ ರಿಯಾನ್ ಪರಾಗ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ನಡುವೆ ವಾಗ್ವಾದ ನಡೆದಿತ್ತು. ರಾಜಸ್ತಾನದ ಇನ್ನಿಂಗ್ಸ್ ವೇಳೆ ಹರ್ಷಲ್ ಓವರ್ನಲ್ಲಿ ಪರಾಗ್ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಆ ಬಳಿಕ ಹರ್ಷಲ್ ಪಟೇಲ್ ಅವರನ್ನು ಕೆಣಕಿದ್ದರು.
ಅಷ್ಟೇ ಅಲ್ಲದೆ ಈ ಹಿಂದೆ ಫೀಲ್ಡಿಂಗ್ ವೇಳೆ ಹಲವು ಆಟಗಾರರನ್ನು ಕೆಣಕುತ್ತಾ ಮತ್ತು ಟ್ರೋಲ್ ಮಾಡುತ್ತಾ ರಿಯಾನ್ ಪರಾಗ್ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಇದೇ ಕಾರಣದಿಂದಾಗಿ ಹಲವರು ಯುವ ಆಟಗಾರರನಿಗೆ ವಿಪರೀತ ಅಟಿಟ್ಯೂಡ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.




