Bangladesh vs India, 1st ODI: ಢಾಕಾದ ಶೇರ್ ಈ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ವಿರುದ್ಧ ಬಾಂಗ್ಲಾದೇಶ್ (Bangladesh) ತಂಡವು ರೋಚಕ ಗೆಲುವು ದಾಖಲಿಸಿತ್ತು. ಟೀಮ್ ಇಂಡಿಯಾ ನೀಡಿದ 187 ರನ್ಗಳ ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಮೊದಲ ಓವರ್ನ ಮೊದಲ ಎಸೆತದಲ್ಲೇ ನಜ್ಮುಲ್ (0) ವಿಕೆಟ್ ಪಡೆಯುವ ಮೂಲಕ ದೀಪಕ್ ಚಹರ್ (Deepak Chahar) ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅನಾಮುಲ್ ಹಕ್ (14) ಕೂಡ ಮೊಹಮ್ಮದ್ ಸಿರಾಜ್ (Mohammed Siraj) ಎಸೆತದಲ್ಲಿ ಔಟಾದರು.
ಈ ಹಂತದಲ್ಲಿ ಜೊತೆಗೂಡಿದ ಲಿಟನ್ ದಾಸ್ ಹಾಗೂ ಶಕೀಬ್ ಅಲ್ ಹಸನ್ ಅತ್ಯುತ್ತಮ ಜೊತೆಯಾಟವಾಡಿದರು. 3ನೇ ವಿಕೆಟ್ಗೆ 48 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ವೇಳೆ 41 ರನ್ಗಳಿಸಿದ್ದ ಲಿಟನ್ ದಾಸ್ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಕ್ಯಾಚ್ ನೀಡಿದರು.
ಇದರ ಬೆನ್ನಲ್ಲೇ ವಾಷಿಂಗ್ಟನ್ ಸುಂದರ್ ಎಸೆದ 24ನೇ ಓವರ್ನ 3ನೇ ಎಸೆತವನ್ನು ಶಕೀಬ್ ಡೀಪ್ ಕವರ್ನತ್ತ ಭರ್ಜರಿಯಾಗಿ ಬಾರಿಸಿದ್ದರು. ಚೆಂಡು ಗಾಳಿಯಲ್ಲಿ ಹಾರುತ್ತಿದ್ದಂತೆ ಇತ್ತ ಫ್ರಂಟ್ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಬಲಭಾಗದತ್ತ ಜಿಗಿದು ಅತ್ಯಾದ್ಭುತವಾಗಿ ಕ್ಯಾಚ್ ಹಿಡಿದರು.
ಈ ಯಶಸ್ಸಿನೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್ಗಳು ಉತ್ತಮ ದಾಳಿ ಸಂಘಿಟಿಸಿದರು. ಮೊಹಮ್ಮದ್ ಸಿರಾಜ್ 10 ಓವರ್ಗಳಲ್ಲಿ ಕೇವಲ 32 ರನ್ ನೀಡಿ 3 ವಿಕೆಟ್ ಕಬಳಿಸಿದೆ, ಕುಲ್ದೀಪ್ ಸೇನ್ ಕೂಡ 2 ವಿಕೆಟ್ ಪಡೆದರು. ಪರಿಣಾಮ ಬಾಂಗ್ಲಾದೇಶ್ ತಂಡವು 136 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.ಈ ಹಂತದಲ್ಲಿ ಕೆಎಲ್ ರಾಹುಲ್ ಮೆಹದಿ ಹಸನ್ ಅವರ ಕ್ಯಾಚ್ವೊಂದನ್ನು ಕೈಚೆಲ್ಲಿದ್ದರು. ತುಸು ಕಠಿಣವಾಗಿದ್ದ ಕ್ಯಾಚ್ ಅನ್ನು ಹಿಡಿಯುವ ಯತ್ನದಲ್ಲಿ ರಾಹುಲ್ ವಿಫಲರಾಗಿದ್ದರು. ಇದಾದ ಬಳಿಕ ಮತ್ತೊಂದು ಅವಕಾಶ ಟೀಮ್ ಇಂಡಿಯಾ ಮುಂದಿತ್ತು.
ಇನಿಂಗ್ಸ್‌ನ 43ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಎಸೆತವನ್ನು ಮೆಹದಿ ಹಸನ್ ಥರ್ಡ್ ಮ್ಯಾನ್ನತ್ತ ಬಾರಿಸಿದರು. ಚೆಂಡು ಗಾಳಿಯಲ್ಲಿದ್ದ ಕಾರಣ ಟೀಮ್ ಇಂಡಿಯಾ ಆಟಗಾರರು ಈ ಕ್ಯಾಚ್ನೊಂದಿಗೆ ಪಂದ್ಯ ಗೆಲ್ಲಲಿದ್ದೇವೆ ಎಂದು ಭಾವಿಸಿದ್ದರು. ಆದರೆ ಅಲ್ಲೇ ಫೀಲ್ಡಿಂಗ್ನಲ್ಲಿದ್ದ ವಾಷಿಂಗ್ಟನ್ ಸುಂದರ್ ಕ್ಯಾಚ್ ಹಿಡಿಯುವ ಪ್ರಯತ್ನವನ್ನೇ ಮಾಡಿಲ್ಲ ಎಂಬುದೇ ಅಚ್ಚರಿ.
ಚೆಂಡು ಗಾಳಿಯಲ್ಲಿದ್ದರೂ ಓಡಿ ಬಂದು ಹಿಡಿಯುವ ಪ್ರಯತ್ನ ಮಾಡದ ಸುಂದರ್, ನಿಧಾನವಾಗಿ ನಡೆದುಕೊಂಡು ಬಂದರು.
ಇತ್ತ ಕ್ಯಾಚ್ ನಿರೀಕ್ಷೆಯಲ್ಲಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕೋಪ ನೆತ್ತಿಗೇರಿತು. ಅಲ್ಲದೆ ಕೋಪದಲ್ಲೇ ವಾಷಿಂಗ್ಟನ್ ಸುಂದರ್ ಅವರನ್ನು ಅಶ್ಲೀಲ ಪದದೊಂದಿಗೆ ಮೈದಾನದಲ್ಲೇ ನಿಂದಿಸಿದರು. ಇದೀಗ ರೋಹಿತ್ ಶರ್ಮಾ ಅವರ ಈ ಬೈಗುಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Shame on Rohit Sharma Abusing an Youngster , Feel for Washington Sundar??#ViratKohli? , #INDvsBAN , #INDvsBangladesh , Rohit , Siraj , Deepak Chahar , @BCCI , @ImRo45 pic.twitter.com/edX1mWzmgr
— Rɪsʜᴀʙʜ ?? ???? (@Pant_life) December 4, 2022
ಇನ್ನು ವಾಷಿಂಗ್ಟನ್ ಸುಂದರ್ ನೀಡಿದ ಜೀವದಾನವನ್ನು ಬಳಸಿಕೊಂಡ ಮೆಹದಿ ಹಸನ್ ಅಂತಿಮವಾಗಿ 38 ರನ್ ಕಲೆಹಾಕಿ ಬಾಂಗ್ಲಾದೇಶ್ ತಂಡಕ್ಕೆ 1 ರನ್ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ್ ತಂಡವು 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.
Rohit Sharma got engry on sundar#rohitsharma pic.twitter.com/lWeLQxQelA
— Adnan Ansari (@AdnanAn71861809) December 4, 2022
ಬಾಂಗ್ಲಾದೇಶ್ ಪ್ಲೇಯಿಂಗ್ ಇಲೆವೆನ್: ಲಿಟನ್ ದಾಸ್ (ನಾಯಕ) , ಅನಾಮುಲ್ ಹಕ್ , ನಜ್ಮುಲ್ ಹೊಸೈನ್ ಶಾಂಟೋ , ಶಕೀಬ್ ಅಲ್ ಹಸನ್ , ಮುಶ್ಫಿಕರ್ ರಹೀಮ್ ( ವಿಕೆಟ್ ಕೀಪರ್ ) , ಮಹ್ಮುದುಲ್ಲಾ , ಅಫೀಫ್ ಹೊಸೈನ್ , ಮೆಹಿದಿ ಹಸನ್ ಮಿರಾಝ್ , ಮುಸ್ತಫಿಜುರ್ ರೆಹಮಾನ್ , ಹಸನ್ ಮಹಮೂದ್ , ಇಬಾದತ್ ಹೊಸೇನ್.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ) , ಶಿಖರ್ ಧವನ್ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ಕೆಎಲ್ ರಾಹುಲ್ (ವಿಕೆಟ್ ಕೀಪರ್ ) , ವಾಷಿಂಗ್ಟನ್ ಸುಂದರ್ , ಶಹಬಾಜ್ ಅಹ್ಮದ್ , ದೀಪಕ್ ಚಹಾರ್ , ಶಾರ್ದೂಲ್ ಠಾಕೂರ್ , ಮೊಹಮ್ಮದ್ ಸಿರಾಜ್ , ಕುಲದೀಪ್ ಸೇನ್
Published On - 8:53 pm, Sun, 4 December 22