AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SA vs IND 1st Test: ನಿಧಾನಗತಿಯ ನಾಯಕತ್ವ, ಕಳಪೆ ಬ್ಯಾಟಿಂಗ್- ಆಫ್ರಿಕಾ ಎದುರು ಭಾರತ ಹೀನಾಯ ಸೋಲುಂಡಿದ್ದು ಹೀಗೆ

Reason for Team India loss: ದಕ್ಷಿಣ ಆಫ್ರಿಕಾದಲ್ಲಿ ಭಾರತ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ, ಈ ಬಾರಿ ಪವಾಡ ಸಂಭವಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಸೆಂಚುರಿಯನ್ ಟೆಸ್ಟ್‌ನ ಮೊದಲ ದಿನದಾಟ ಆರಂಭವಾದ ಕ್ಷಣದಿಂದ ಎಲ್ಲ ನಿರೀಕ್ಷೆ ಹುಸಿಯಾಗುತ್ತಾ ಸಾಗಿ ಅಂತಿಮವಾಗಿ ಹೀನಾಯ ಸೋಲು ಕಂಡಿತು.

SA vs IND 1st Test: ನಿಧಾನಗತಿಯ ನಾಯಕತ್ವ, ಕಳಪೆ ಬ್ಯಾಟಿಂಗ್- ಆಫ್ರಿಕಾ ಎದುರು ಭಾರತ ಹೀನಾಯ ಸೋಲುಂಡಿದ್ದು ಹೀಗೆ
Rohit Sharma and Virat Kohli
Vinay Bhat
|

Updated on:Dec 29, 2023 | 7:24 AM

Share

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ (Rohit Sharma) ಅವರಲ್ಲಿ ಒಂದು ಪ್ರಶ್ನೆ ಕೇಳಲಾಗಿತ್ತು. ”ಇಲ್ಲಿ ಟೆಸ್ಟ್ ಸರಣಿ ಗೆದ್ದರೆ ವಿಶ್ವಕಪ್ ಸೋಲನ್ನು ಮರೆಯಲು ಸಹಾಯವಾಗುತ್ತದೆಯೇ?’‘ ಎಂದು. ಈ ಪ್ರಶ್ನೆಗೆ ರೋಹಿತ್ ಶರ್ಮಾ ಮುಗುಳ್ನಕ್ಕಿದ್ದರು. ಆದರೆ ಈಗ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನೀಡಿದ ಪ್ರದರ್ಶನ, ವಿಶ್ವಕಪ್ ಸೋಲಿನ ಗಾಯದ ಮೇಲೆ ಬರ ಎಳೆದಂತಾಗಿದೆ. ಹರಿಣಗಳ ನಾಡಲ್ಲಿ ಭಾರತ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ, ಈ ಬಾರಿ ಪವಾಡ ಸಂಭವಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸೆಂಚುರಿಯನ್ ಟೆಸ್ಟ್‌ನ ಮೊದಲ ದಿನದಾಟ ಆರಂಭವಾದ ಕ್ಷಣದಿಂದ ಎಲ್ಲ ನಿರೀಕ್ಷೆ ಹುಸಿಯಾಗುತ್ತಾ ಸಾಗಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಏಕಾಂಗಿಯಾಗಿ ಕೆಎಲ್ ರಾಹುಲ್ ಹೋರಾಡಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಈ ಹೋರಾಟವನ್ನು ಮುಂದುವರೆಸಿದರು. ಅಂತಿಮವಾಗಿ ಭಾರತ ತಂಡ ಇನ್ನಿಂಗ್ಸ್‌ನಿಂದ ಸೋಲನುಭವಿಸಬೇಕಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್ ಗಳಿಸಿದ್ದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಗಳಿಸಿದ್ದು ಕೇವಲ 131 ರನ್‌. ಈ ಪಂದ್ಯದಲ್ಲಿ ಭಾರತ ತಂಡವನ್ನು ದಕ್ಷಿಣ ಆಫ್ರಿಕಾ ಇನಿಂಗ್ಸ್ ಮತ್ತು 32 ರನ್‌ಗಳಿಂದ ಸೋಲಿಸಿ 1-0 ಮುನ್ನಡೆ ಪಡೆದುಕೊಂಡಿತು.

  • ಭಾರತ: 245, 131
  • ದಕ್ಷಿಣ ಆಫ್ರಿಕಾ: 408

ಟೀಮ್ ಇಂಡಿಯಾ ಸೋಲಿಗೆ ಕಾರಣ ಯಾರು?

ಆರಂಭಿಕರ ನಿರಾಸೆ: ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಸಂಪೂರ್ಣ ವಿಫಲರಾದರು. ರೋಹಿತ್ ಶರ್ಮಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇವಲ 5 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 22 ರನ್ ಗಳಿಸಿದರು.

ಇದನ್ನೂ ಓದಿ
Image
ಭಾರತಕ್ಕೆ ಆಘಾತಕಾರಿ ಸೋಲು: ಇತಿಹಾಸ ಸೃಷ್ಟಿಸುವ ಕನಸು ನುಚ್ಚುನೂರು
Image
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ಸೋಲು
Image
90ನೇ ಸ್ಥಾನದಿಂದ ಒಮ್ಮೆಲೆ 2ನೇ ರ‍್ಯಾಂಕಿಂಗ್​ಗೆ ಜಿಗಿದ ಫಿಲ್ ಸಾಲ್ಟ್​..!
Image
ಟೆಸ್ಟ್​ನಲ್ಲಿ ಶತಕ ಬಾರಿಸದೇ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಯಾರು ಗೊತ್ತಾ?

ಐಪಿಎಲ್ ಆಟಗಾರ, ಪಂತ್​ ಪಾಲಿಗೆ ಮೋಸಗಾರ: ಕೊನೆಗೂ ಮಾಜಿ ಕ್ರಿಕೆಟಿಗ ಅರೆಸ್ಟ್​..!

ದುರ್ಬಲ ಬೌಲಿಂಗ್: ಕಳೆದ 4-5 ವರ್ಷಗಳಲ್ಲಿ, ಭಾರತ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ವೇಗದ ಬೌಲಿಂಗ್ ಘಟಕವನ್ನು ಹೊಂದಿದೆ ಎಂದು ಹೆಸರುವಾಸಿಯಾಗಿದೆ. ಆದರೆ ಈ ಪಂದ್ಯದಲ್ಲಿ ಈ ಮ್ಯಾಜಿಕ್ ಸಂಪೂರ್ಣ ವಿಫಲವಾಯಿತು. ಜಸ್ಪ್ರೀತ್ ಬುಮ್ರಾ ಅವರ 4 ವಿಕೆಟ್​ಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಬೌಲರ್ ಮಾರಕವಾಗಿ ಕಾಣಲಿಲ್ಲ. ಮೂರು ಮತ್ತು ನಾಲ್ಕನೇ ವೇಗಿಗಳಾಗಿ ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಈ ಮೈದಾನದಲ್ಲಿ ಏಕದಿನ ಪಂದ್ಯದಂತೆ ರನ್ ನೀಡಿದರು. ಇಲ್ಲಿ ಭಾರತ ಮೊಹಮ್ಮದ್ ಶಮಿ ಅವರನ್ನು ಮಿಸ್ ಮಾಡಿಕೊಂಡಿದ್ದು ಎದ್ದು ಕಂಡಿತು.

ರೋಹಿತ್ ನಾಯಕತ್ವ: ವಿಶ್ವಕಪ್ ಫೈನಲ್‌ನ ನಂತರ ಮೊದಲ ಬಾರಿಗೆ ಮೈದಾನಕ್ಕೆ ಮರಳಿದ ನಾಯಕ ರೋಹಿತ್ ಶರ್ಮಾ, ಈ ಪಂದ್ಯದ ನಾಯಕತ್ವದಲ್ಲಿ ಆತ್ಮವಿಶ್ವಾಸ ಕಾಣಲಿಲ್ಲ. ಯೋಜನೆ ಸರಿಯಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುವ ಜೊತೆಗೆ ನಾಯಕತ್ವದಲ್ಲಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಮೈದಾನದಲ್ಲಿ ಅನೇಕ ಬೌಲಿಂಗ್ ಬದಲಾವಣೆಗಳು ಮತ್ತು ತೆಗೆದುಕೊಂಡ ನಿರ್ಧಾರಗಳು ಭಾರತದ ಸೋಲಿಗೆ ಒಂದು ಕಾರಣವಾಯಿತು. ಮಾಜಿ ಕೋಚ್ ಮತ್ತು ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಕೂಡ ಪಂದ್ಯದ ವೇಳೆ ರೋಹಿತ್ ನಾಯಕತ್ವವನ್ನು ಟೀಕಿಸಿದ್ದರು, ಮೂರನೇ ದಿನ ಟೀಮ್ ಇಂಡಿಯಾ ಯಾವುದೇ ಯೋಜನೆ ಇಲ್ಲದೆ ಸಂಪೂರ್ಣವಾಗಿ ಮೈದಾನಕ್ಕೆ ಪ್ರವೇಶಿಸಿದಂತಿದೆ ಎಂದು ಹೇಳಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:22 am, Fri, 29 December 23

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ