Rohit Sharma: ‘ದಡೂತಿ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ಸೂಕ್ತರಲ್ಲ’; ಹಿಟ್‌ಮ್ಯಾನ್ ಫಿಟ್ನೆಸ್ ಬಗ್ಗೆ ವ್ಯಂಗ್ಯ
Rohit Sharma's Fitness Questioned: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಮತ್ತು ವಿದೇಶಿ ಪಿಚ್‌ಗಳಲ್ಲಿನ ಆಟದ ಕುರಿತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡ್ಯಾರಿಲ್ ಕುಲ್ಲಿನನ್ ಟೀಕಿಸಿದ್ದಾರೆ. ರೋಹಿತ್ ಅವರ ತೂಕ ಮತ್ತು ಫ್ಲಾಟ್ ಪಿಚ್‌ಗಳ ಮೇಲಿನ ಅವಲಂಬನೆಯನ್ನು ಅವರು ಪ್ರಶ್ನಿಸಿದ್ದಾರೆ. ಕುಲ್ಲಿನನ್, ರೋಹಿತ್ ದೀರ್ಘ ಕಾಲ ಕ್ರಿಕೆಟ್ ಆಡಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ ಮತ್ತು ತಂಡದ ನಾಯಕತ್ವದ ಬದಲಾವಣೆ ನೀತಿಯನ್ನೂ ಖಂಡಿಸಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಬ್ರಿಸ್ಬೇನ್‌ನಲ್ಲಿ ನಡೆಯಲ್ಲಿರುವ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ತಯಾರಿ ನಡೆಸುತ್ತಿದೆ. ಅಡಿಲೇಡ್‌ನ ಸೋಲಿನ ಹೊರತಾಗಿಯೂ, ಕಳೆದ ಪ್ರವಾಸದಲ್ಲಿ ಭಾರತ ತಂಡವು ಗಾಬಾ ಕೋಟೆಯನ್ನು ವಶಪಡಿಸಿಕೊಂಡಿದ್ದರಿಂದ ತಂಡದ ಮನೋಬಲ ಹೆಚ್ಚಿದೆ. ಕಳೆದ ಪ್ರವಾಸದ ಗೆಲುವನ್ನು ಪುನರಾವರ್ತಿಸುವ ಇರಾದೆಯಲ್ಲಿರುವ ಟೀಂ ಇಂಡಿಯಾಕ್ಕೆ ಡಬ್ಲ್ಯುಟಿಸಿ ಫೈನಲ್ ದೃಷ್ಟಿಯಿಂದ ಈ ಪಂದ್ಯ ಗೆಲ್ಲುವುದು ಅವಶ್ಯಕವಾಗಿದೆ. ಹೀಗಾಗಿ ತಂಡದ ಆಟಗಾರರ ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಆದರೆ, ಇವೆಲ್ಲದರ ನಡುವೆ ಭಾರತದ ನಾಯಕ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡ್ಯಾರಿಲ್ ಕುಲ್ಲಿನನ್ ವ್ಯಂಗ್ಯವಾಡಿದ್ದಾರೆ.
ರೋಹಿತ್ ಫ್ಲಾಟ್ ಪಿಚ್ ಕಿಂಗ್
ಬಿಗ್ ಕ್ರಿಕೆಟ್ ಲೀಗ್‌ನಲ್ಲಿ ನಾರ್ದರ್ನ್ ಚಾಲೆಂಜರ್ಸ್ ತಂಡಕ್ಕೆ ತರಬೇತುದಾರರಾಗಿರುವ ಡ್ಯಾರಿಲ್ ಕುಲ್ಲಿನನ್ ಅವರು ಇನ್ಸೈಡ್‌ಸ್ಪೋರ್ಟ್‌ನೊಂದಿಗೆ ವಿಶೇಷ ಸಂವಾದದಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಕುರಿತು ಮೊದಲು ಪ್ರಶ್ನೆಗಳನ್ನು ಎತ್ತಿದರು. ನಂತರ ಅವರ ತೂಕದ ಮೇಲೆ ವ್ಯಂಗ್ಯವಾಡಿದರು. ಹಿಟ್‌ಮ್ಯಾನ್ ರೋಹಿತ್ ಫ್ಲಾಟ್ ಪಿಚ್‌ಗಳ ರಾಜ. ಅವರು ಭಾರತದ ಪಿಚ್‌ಗಳಲ್ಲಿ ಮಾತ್ರ ರನ್ ಗಳಿಸಬಲ್ಲರು. ರೋಹಿತ್ ಶರ್ಮಾ ಸಾಗರೋತ್ತರ ಪಿಚ್‌ಗಳಿಗೆ ಪರಿಪೂರ್ಣ ಎಂದು ನಾನು ಎಂದಿಗೂ ಭಾವಿಸುವುದಿಲ್ಲ. ವಿಶೇಷವಾಗಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಅವರ ಆಟ ನಡೆಯುವುದಿಲ್ಲ. ಅವರು ತವರು ನೆಲದಲ್ಲಿ ಮಾತ್ರ ರನ್ ಗಳಿಸಬಲ್ಲರು, ಅವರ ಅಂಕಿಅಂಶಗಳು ಸಹ ಇದಕ್ಕೆ ಸಾಕ್ಷಿಯಾಗಿದೆ.
South african former cricketer Daryll cullinan said –"Rohit is a flat track bully and not in good physical condition" pic.twitter.com/WznuiSdgAc
— Aadya💜✨ (@Kohligram_here) December 12, 2024
ರೋಹಿತ್ ಹೆಚ್ಚು ದಿನ ಆಡುವುದಿಲ್ಲ
ಇದೇ ವೇಳೆ ರೋಹಿತ್ ಅವರ ಫಿಟ್ನೆಸ್ ಬಗ್ಗೆ ಮಾತನಾಡಿದ ಅವರು, ‘ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ದೈಹಿಕ ಸ್ಥಿತಿಯಲ್ಲಿನ ವ್ಯತ್ಯಾಸವನ್ನು ನೋಡಿ. ರೋಹಿತ್ ಅಧಿಕ ತೂಕ ಹೊಂದಿರುವ ಕಾರಣ, ಅವರು ಹೆಚ್ಚು ಕಾಲ ಕ್ರಿಕೆಟ್ ಆಡುವ ಕ್ರಿಕೆಟಿಗನಲ್ಲ. ನಾಲ್ಕೈದು ದಿನಗಳ ಪಂದ್ಯ ಆಡಲು ರೋಹಿತ್ ಅವರ ದೈಹಿಕ ಸ್ಥಿತಿ ಸರಿಹೊಂದುವುದಿಲ್ಲ. ಅಲ್ಲದೆ ಅವರ ದೈಹಿಕ ಸ್ಥಿತಿ ಒಂದೇ ಆಗಿಲ್ಲದ ಕಾರಣ ಅವರು ಇನ್ನು ಮುಂದೆ ಲಾಂಗ್ ಫಾರ್ಮ್ಯಾಟ್ ಕ್ರಿಕೆಟ್ನಲ್ಲಿ ಹೆಚ್ಚು ದಿನ ಆಡುವ ಸಾಧ್ಯತೆಗಳಿಲ್ಲ ಎಂದಿದ್ದಾರೆ.
ಇದಲ್ಲದೆ ಟೀಂ ಇಂಡಿಯಾದ ನಾಯಕನನ್ನು ಬದಲಾಯಿಸುವ ನೀತಿಯನ್ನೂ ಸಹ ಕುಲ್ಲಿನನ್ ಖಂಡಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಟೀಂ ಇಂಡಿಯಾ ಪರ್ತ್‌ನಲ್ಲಿ 295 ರನ್‌ಗಳ ಬೃಹತ್ ಗೆಲುವು ಸಾಧಿಸಿತು. ಆದಾಗ್ಯೂ ರೋಹಿತ್ ಅವರನ್ನು ಅಡಿಲೇಡ್ ಟೆಸ್ಟ್ಗೆ ನಾಯಕನನ್ನಾಗಿ ಮಾಡಿದ ನಿರ್ಧಾರ ಸೂಕ್ತವಲ್ಲ. ರೋಹಿತ್ ತಂಡದಲ್ಲಿದ್ದರೂ, ಇಲ್ಲದಿದ್ದರೂ ಯಾವುದೇ ವ್ಯತ್ಯಾಸವನ್ನು ತೋರುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Thu, 12 December 24