SA vs IND 2nd Test: ಭಾರತ ಗೆದ್ದ ಸಂದರ್ಭ ರೋಹಿತ್-ಗಿಲ್-ಜೈಸ್ವಾಲ್ ಆಕ್ರಮಣಕಾರಿ ಸಂಭ್ರಮಾಚರಣೆ: ವಿಡಿಯೋ
Team India Players Celebration Video: ಭಾರತದ ಗೆಲುವಿನ ನಂತರ ಕ್ಯಾಮೆರಾಮನ್ ಮೈದಾನದಿಂದ ಭಾರತೀಯ ಡ್ರೆಸ್ಸಿಂಗ್ ಕೊಠಡಿಯತ್ತ ಕಣ್ಣು ಹಾಯಿಸಿದಾಗ, ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ಐತಿಹಾಸಿಕ ಗೆಲುವನ್ನು ಆಕ್ರಮಣಕಾರಿಯಾಗಿ ಆಚರಿಸಿದರು. ಭಾರತದ ಸ್ಮರಣೀಯ ಗೆಲುವಿನ ನಂತರ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾನಗಳಲ್ಲಿ ಸಖತ್ ವೈರಲ್ ಆಗಿದೆ.

ಗುರುವಾರ (ಜನವರಿ 4) ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು (India vs South Africa) 7 ವಿಕೆಟ್‌ಗಳಿಂದ ಸೋಲಿಸಿತು. ಭಾರತ ಕೇವಲ 12 ಓವರ್‌ಗಳಲ್ಲಿ 79 ರನ್‌ಗಳ ಗುರಿಯನ್ನು ಬೆನ್ನಟ್ಟಿ ಇತಿಹಾಸ ನಿರ್ಮಿಸಿತು. ರೋಹಿತ್ ಶರ್ಮಾ ನೇತೃತ್ವದ ತಂಡವು ಕೇಪ್ ಟೌನ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ಏಷ್ಯನ್ ತಂಡವಾಗಿದೆ. ಹಾಘೆಯೆ ಮಹೇಂದ್ರ ಧೋನಿ ನಂತರ ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ಟೆಸ್ಟ್ ಸರಣಿಯನ್ನು ಡ್ರಾ ಮಾಡಲು ಸಹಾಯ ಮಾಡಿದ ಎರಡನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾದರು.
ಪ್ರೋಟೀಸ್ 3 ವಿಕೆಟ್‌ಗೆ 62 ರನ್‌ಗಳಿಂದ ಎರಡನೇ ದಿನದ ಆಟವನ್ನು ಪ್ರಾರಂಭಿಸಿತು, ಆದರೆ ಏಡೆನ್ ಮಾರ್ಕ್ರಾಮ್ ಅವರ 106 ರನ್‌ಗಳ ಹೊರತಾಗಿಯೂ, ಆತಿಥೇಯರು ಕೇವಲ 176 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 79 ರನ್‌ಗಳ ಗುರಿಯನ್ನು ನೀಡಲಾಯಿತು. ಯಶಸ್ವಿ ಜೈಸ್ವಾಲ್ ಅವರ 28 ಮತ್ತು ರೋಹಿತ್ ಅವರ ಔಟಾಗದೆ 17 ರನ್‌ಗಳ ನೆರವಿನಿಂದ ಭಾರತವು 12 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ ಗೆಲುವು ಸಾಧಿಸಿತು.
IND vs SA: ಆಫ್ರಿಕಾ ನೆಲದಲ್ಲಿ ಧೋನಿ ನಂತರ ಈ ದಾಖಲೆ ಮಾಡಿದ 2ನೇ ನಾಯಕ ರೋಹಿತ್..!
ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ಎಸೆತಗಳಲ್ಲಿ ಡಕ್‌ಗೆ ಔಟಾದ 5ನೇ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್, 12ನೇ ಓವರ್‌ನ ಕೊನೆಯ ಎಸೆತದಲ್ಲಿ ಮಾರ್ಕೊ ಜಾನ್ಸನ್ ಬೌಲಿಂಗ್ನಲ್ಲಿ ಬೌಂಡರಿ ಸಿಡಿಸುವ ಮೂಲಕ ಭಾರತ ಜಯ ಕಂಡಿತು. ಚೆಂಡು ಬೌಂಡರಿ ಗೆರೆ ದಾಟಿದ ಸಂದರ್ಭ ಭಾರತದ ನಾಯಕ ರೋಹಿತ್, ಅಯ್ಯರ್ ಅವರನ್ನು ಅಪ್ಪಿಕೊಂಡು ಆಕ್ರಮಣಕಾರಿ ರೀತಿಯಲ್ಲಿ ವಿಜಯೋತ್ಸವ ಆಚರಿಸಿದರು. ಮತ್ತು ಭಾರತದ ಡ್ರೆಸ್ಸಿಂಗ್ ರೂಮ್‌ನಿಂದಲೂ ಇದೇ ರೀತಿಯ ಪ್ರತಿಕ್ರಿಯೆ ಕಂಡುಬಂದಿದೆ.
ಭಾರತದ ಗೆಲುವಿನ ನಂತರ ಕ್ಯಾಮೆರಾಮನ್ ಮೈದಾನದಿಂದ ಭಾರತೀಯ ಡ್ರೆಸ್ಸಿಂಗ್ ಕೊಠಡಿಯತ್ತ ಕಣ್ಣು ಹಾಯಿಸಿದಾಗ, ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ಐತಿಹಾಸಿಕ ಗೆಲುವನ್ನು ಆಕ್ರಮಣಕಾರಿಯಾಗಿ ಆಚರಿಸಿದರು. ಭಾರತದ ಸ್ಮರಣೀಯ ಗೆಲುವಿನ ನಂತರ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾನಗಳಲ್ಲಿ ಸಖತ್ ವೈರಲ್ ಆಗಿದೆ. ಇಲ್ಲಿದೆ ನೋಡಿ ಆ ವಿಡಿಯೋ.
And that’s THAT! The shortest ever Test with a result goes India’s way!#TeamIndia win a historic Test by 7 wickets, their 1st ever Test victory at Cape Town!
The series finishes level at 1-1!#Cricket #SAvIND pic.twitter.com/exZ5epE2RA
— Star Sports (@StarSportsIndia) January 4, 2024
View this post on Instagram
ಈ ಪಂದ್ಯದಲ್ಲಿ ಭಾರತದ ಪರ, ಮೊಹಮ್ಮದ್ ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದರು, ಮತ್ತು ಎರಡನೇ ದಿನದ ಆಟದಲ್ಲಿ, ಜಸ್ಪ್ರಿತ್ ಬುಮ್ರಾ ಆರು ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳನ್ನು ಔಟ್ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 am, Fri, 5 January 24




