IND vs SA 2nd Test: ಕೇಶವ್ ಮಹಾರಾಜ್‌ಗೆ ಮರೆಯಲಾಗದ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ: ಏನದು ನೋಡಿ
Virat kohli-Keshav Maharaj: ಕೇಶವ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿರಾಟ್ ಕೊಹ್ಲಿಯ 'ನಂಬರ್ 18' ಜೆರ್ಸಿಯನ್ನು ಸ್ವೀಕರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ನ್ಯೂಲ್ಯಾಂಡ್ಸ್‌ನಲ್ಲಿ ಗುರುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮುಕ್ತಾಯದ ನಂತರ, ವಿರಾಟ್ ಕೊಹ್ಲಿ (Virat Kohli) ಅವರು ದಕ್ಷಿಣ ಆಫ್ರಿಕಾದ ಸ್ಟಾರ್ ಸ್ಪಿನ್ನರ್ ಕೇಶವ್ ಮಹಾರಾಜ್ ಅವರಿಗೆ ಸ್ಪೆಷನ್ ಉಡುಗೊರೆ ನೀಡಿದ್ದಾರೆ. ಕೊಹ್ಲಿ ಅವರುತಮ್ಮ ಸಹಿ ಮಾಡಿದ ಜೆರ್ಸಿಯನ್ನು ಕೇಶವ್ಗೆ ಗಿಫ್ಟ್ ಕೊಟ್ಟಿದ್ದಾರೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೇಶವ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿರಾಟ್ ಕೊಹ್ಲಿಯ ‘ನಂಬರ್ 18’ ಜೆರ್ಸಿಯನ್ನು ಸ್ವೀಕರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. “One for the Wall, ಧನ್ಯವಾದಗಳು @virat.kohli” ಎಂದು ಕೇಶವ್ ಇನ್ಸ್ಟಾಗ್ರಾಮ್ನಲ್ಲಿ ಅಡಿಬರಹ ನೀಡಿದ್ದಾರೆ.
View this post on Instagram
ಗುರುವಾರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಿದ ನಂತರ ಡೀನ್ ಎಲ್ಗರ್ ಅವರಿಗೆ ಕೂಡ ಸಹಿ ಮಾಡಿದ ಜೆರ್ಸಿಗಳನ್ನು ಉಡುಗೊರೆಯಾಗಿ ನೀಡಿದರು.
IND vs SA: 642 ಎಸೆತಗಳಿಗೆ ಮುಕ್ತಾಯ; 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಹೊಸ ದಾಖಲೆ
ಎರಡನೇ ಟೆಸ್ಟ್ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡಿತು. ಆದರೆ, 23.2 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಕೈಲ್ ವೆರ್ರೆನ್ (15) ಮತ್ತು ಡೇವಿಡ್ ಬೆಡಿಂಗ್‌ಹ್ಯಾಮ್ (12) ಎರಡಂಕಿ ಮುಟ್ಟಿದ ಏಕೈಕ ಆಟಗಾರರು. ಮೊಹಮ್ಮದ್ ಸಿರಾಜ್ ಅವರ 6/15 ರ ಬೆಂಕಿ ಬೌಲಿಂಗ್ಗೆ ಪ್ರೋಟೀಸ್‌ನ ಅಗ್ರ ಮತ್ತು ಮಧ್ಯಮ ಕ್ರಮಾಂಕ ನಲುಗಿ ಹೋಯಿತು.
ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು ಒಂದು ಹಂತದಲ್ಲಿ 4 ವಿಕೆಟ್ಗೆ 153 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ (59 ಎಸೆತಗಳಲ್ಲಿ 46 ರನ್, ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ), ರೋಹಿತ್ ಶರ್ಮಾ (50 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 39) ಮತ್ತು ಶುಭ್ಮನ್ ಗಿಲ್ (55 ಎಸೆತಗಳಲ್ಲಿ 36, ಐದು ಬೌಂಡರಿಗಳೊಂದಿಗೆ) ಅವರಿಂದ ಉತ್ತಮ ಸ್ಕೋರ್‌ಗಳು ಬಂದವು. ಆದರೆ ಲುಂಗಿ ಎನ್‌ಗಿಡಿ ಭಾರತವನ್ನು 34.5 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟ್ ಮಾಡಿದರು. ಎಸ್‌ಎ ಪರ ಎನ್‌ಗಿಡಿ (3/30), ಕಗಿಸೊ ರಬಾಡ (3/38) ಮತ್ತು ನಾಂಡ್ರೆ ಬರ್ಗರ್ (3/42) ತಲಾ ಮೂರು ವಿಕೆಟ್ ಪಡೆದರು.
ನಂತರ ಅವರ ಎರಡನೇ ಇನ್ನಿಂಗ್ಸ್‌ನಲ್ಲಿ, ಆಫ್ರಿಕಾಕ್ಕೆ ಮಾರ್ಕ್ರಾಮ್ ಆಸೆಯಾಗಿ ನಿಂತರು, ಶತಕವನ್ನು ಗಳಿಸಿದರು. 103 ಎಸೆತಗಳಲ್ಲಿ 17 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 106 ರನ್ ಗಳಿಸಿದರು. ಆದರೆ, ಬುಮ್ರಾ 61 ರನ್ಗೆ 6 ವಿಕೆಟ್ ಕಿತ್ತು 36.5 ಓವರ್‌ಗಳಲ್ಲಿ 176 ಕ್ಕೆ ಆಲೌಟ್ ಆಡುವಲ್ಲಿ ಯಶಸ್ವಿಯಾದರು. ಭಾರತದ 79 ರನ್ ಬೇಕಾಗಿತ್ತು. ಭಾರತ 12 ಓವರ್‌ಗಳಲ್ಲಿ ಏಳು ವಿಕೆಟ್‌ಗಳು ಬಾಕಿ ಇರುವಂತೆಯೇ ಈ ಮೊತ್ತವನ್ನು ಬೆನ್ನಟ್ಟಿ ಐತಿಹಾಸಿಕ ಗೆಲುವು ಕಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




