Rohit Sharma: ದ. ಆಫ್ರಿಕಾ ವಿರುದ್ಧದ ಸರಣಿಗೆ ಭಾರತದಲ್ಲೇ ಅಭ್ಯಾಸ ಆರಂಭಿಸಿದ ರೋಹಿತ್ ಶರ್ಮಾ: ನೆಟ್​ನಲ್ಲಿ ಭರ್ಜರಿ ಪ್ರ್ಯಾಕ್ಟೀಸ್

India vs South Africa: ಭಾರತ ಸೀಮಿತ ಓವರ್​ಗಳ ಪಂದ್ಯಕ್ಕೆ ಹೊಸದಾಗಿ ನಾಯಕನಾಗಿ ಆಯ್ಕೆ ಆಗಿರುವ ಹಿಟ್​ಮ್ಯಾನ್ ರೋಹಿತ್ ಶರ್ಮಾ (Rohit Sharma) ಅದಾಗಲೇ ಭಾರತದಲ್ಲಿ ಅಭ್ಯಾಸ ಆಫ್ರಿಕಾ ವಿರುದ್ಧದ ಸರಣಿಗೆ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.

Rohit Sharma: ದ. ಆಫ್ರಿಕಾ ವಿರುದ್ಧದ ಸರಣಿಗೆ ಭಾರತದಲ್ಲೇ ಅಭ್ಯಾಸ ಆರಂಭಿಸಿದ ರೋಹಿತ್ ಶರ್ಮಾ: ನೆಟ್​ನಲ್ಲಿ ಭರ್ಜರಿ ಪ್ರ್ಯಾಕ್ಟೀಸ್
Rohit Sharma IND vs SA
Edited By:

Updated on: Dec 11, 2021 | 8:07 AM

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಜಯಿಸಿ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾ (Team India) ಡಿಸೆಂಬರ್ 16 ರಂದು ದಕ್ಷಿಣ ಆಫ್ರಿಕಾ (India vs South Africa) ಪ್ರವಾಸ ಬೆಳೆಸಲಿದೆ. ಇಲ್ಲಿ ಮೂರು ಪಂದ್ಯಗಳ ಟೆಸ್ಟ್ ಮತ್ತು ಏಕದಿನ ಸರಣಿ ಆಡಲಿದ್ದು, ಒಟ್ಟು 44 ದಿನಗಳ ಕಾಲ ಜೈವಿಕ ಸುರಕ್ಷ ವಲಯದಲ್ಲಿ ಕಳೆಯಲಿದೆ. ಭಾರತದ ಟೆಸ್ಟ್‌ ತಂಡದ (Indian Test Team) ಸದಸ್ಯರು, ಸಹಾಯಕ ಸಿಬಂದಿಯೆಲ್ಲ ಡಿ. 12 ರಂದು ಮುಂಬಯಿಗೆ ಆಗಮಿಸಿ 4 ದಿನಗಳ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಬಳಿಕ ಡಿ. 16ರಂದು ಜೊಹಾನ್ಸ್‌ ಬರ್ಗ್‌ಗೆ ವಿಮಾನ ಏರಲಿದ್ದಾರೆ. ಡಿಸೆಂಬರ್ 26 ರಿಂದ ಸೆಂಚೂರಿಯನ್​ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ಆದರೆ, ಇದಕ್ಕೆಲ್ಲ ಮುನ್ನವೇ ಭಾರತ ಸೀಮಿತ ಓವರ್​ಗಳ ಪಂದ್ಯಕ್ಕೆ ಹೊಸದಾಗಿ ನಾಯಕನಾಗಿ ಆಯ್ಕೆ ಆಗಿರುವ ಹಿಟ್​ಮ್ಯಾನ್ ರೋಹಿತ್ ಶರ್ಮಾ (Rohit Sharma) ಅದಾಗಲೇ ಭಾರತದಲ್ಲಿ ಅಭ್ಯಾಸ ಆಫ್ರಿಕಾ ವಿರುದ್ಧದ ಸರಣಿಗೆ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.

ಹೌದು, ಟೆಸ್ಟ್‌ ತಂಡದ ನೂತನ ಉಪನಾಯಕ ರೋಹಿತ್‌ ಶರ್ಮ ಭರ್ಜರಿ ಪ್ರ್ಯಾಕ್ಟೀಸ್​ನಲ್ಲಿ ನಿರತರಾಗಿದ್ದಾರೆ. ಇತ್ತ ವೇಗಿ ಮೊಹಮ್ಮದ್‌ ಶಮಿ ಕೂಡ ಶುಕ್ರವಾರ ಅಭ್ಯಾಸ ಆರಂಭಿಸಿದರು. ಮುಂಬಯಿಯಲ್ಲಿ ರೋಹಿತ್ ನೆಟ್​ನಲ್ಲಿ ಬೆವರು ಹರಿಸಿದರೆ, ಶಮಿ ಬೆಂಗಳೂರಿನ ಎನ್‌ಸಿಎಯಲ್ಲಿ ಬೌಲಿಂಗ್‌ ಪ್ರ್ಯಾಕ್ಟೀಸ್‌ ನಡೆಸಿದರು. ರೋಹಿತ್‌ ಶರ್ಮ ಇಬ್ಬರು ತ್ರೋಡೌನ್‌ ಸ್ಪೆಷಲಿಸ್ಟ್‌ಗಳ ನೆರವಿನೊಂದಿಗೆ ನೆಟ್ಸ್‌ ನಲ್ಲಿ ಅಭ್ಯಾಸ ನಡೆಸಿದರು. ಇತ್ತ ಮೊಹಮ್ಮದ್‌ ಶಮಿ ಎನ್‌ಸಿಎಯಲ್ಲಿ ಕುಲದೀಪ್‌ ಯಾದವ್‌ ಅವರಿಗೆ ಬೌಲಿಂಗ್‌ ನಡೆಸುತ್ತಿದ್ದ ದೃಶ್ಯ ಕಂಡುಬಂತು.

 

ಭಾರತ ತಂಡ ಆಫ್ರಿಕಾ ವಿರುದ್ಧ ಡಿಸೆಂಬರ್ 26 ರಂದು ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. ಜನವರಿ 15 ರಂದು ಟೆಸ್ಟ್ ಸರಣಿಯು ಕೊನೆಗೊಳ್ಳುವವರೆಗೆ ತಂಡವು ಬಯೋ ಬಬಲ್‌ನಲ್ಲಿ ಇರಲಿದೆ. ಆದರೆ ಏಕದಿನ ಸರಣಿಯಲ್ಲಿ ಭಾಗವಹಿಸುವ ಹೆಚ್ಚುವರಿ ಸದಸ್ಯರು ಎಂಟು ದಿನಗಳ ಕಾಲ ಬಯೋ ಬಬಲ್‌ನಲ್ಲಿ ಕಳೆಯ ಬೇಕಾಗುತ್ತದೆ. ಹೀಗಾಗಿ ಆಟಗಾರರು ಒಟ್ಟು 44 ದಿನಗಳ ಕಾಲ ಬಯೋ ಬಬಲ್‌ನಲ್ಲಿ ಉಳಿಯುತ್ತಾರೆ. ಪ್ರವಾಸಿ ಟೀಮ್ ಇಂಡಿಯಾ ಆಟಗಾರರಿಗೆ ಆಫ್ರಿಕಾ ಭರ್ಜರಿ ವ್ಯವಸ್ಥೆಯನ್ನೇ ಮಾಡಿದೆ. ವಿರಾಟ್ ಕೊಹ್ಲಿ ಪಡೆಗಾಗಿ ಸೆಂಚೂರಿಯನ್​ನಲ್ಲಿರುವ ಇಡೀ ಹೊಟೇಲ್ ಅನ್ನೇ ಕ್ರಿಕೆಟ್ ಸೌತ್ ಆಫ್ರಿಕಾ ಬುಕ್ ಮಾಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಈಗಾಗಲೇ ಭಾರತ ತಂಡ ಪ್ರಕಟವಾಗಿದೆ. ಆದರೆ, ಏಕದಿನ ತಂಡ ಇನ್ನಷ್ಟೆ ಆಯ್ಕೆಯಾಗಬೇಕಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಆಯೋಜನೆಯಾಗಿದ್ದ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಕೋವಿಡ್ ಕಾರಣದಿಂದ ಕೈಬಿಡಲಾಗಿದೆ. ಆದರೆ, ರದ್ದಾಗಿಲ್ಲ, ಬದಲಾಗಿ ಮುಂದೂಡಿಕೆ ಆಗಿದೆ. ಮುಂದಿನ ವರ್ಷ ಸೂಕ್ತ ಸಮಯ ನೋಡಿ ಟಿ20 ಸರಣಿಯನ್ನ ಆಡಿಸಲಾಗುವುದು ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಹೇಳಿದೆ. ಸೆಂಚೂರಿಯನ್, ಜೋಹಾನ್ಸ್​ಬರ್ಗ್, ಕೇಪ್​ಟೌನ್ ಮತ್ತು ಪಾರ್ಲ್ ನಗರಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳ ಪಂದ್ಯಗಳು ನಡೆಯಲಿವೆ.

ಟೆಸ್ಟ್ ಸರಣಿಗೆ ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪನಾಯಕ), ಕೆ ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ವೃದ್ದಿಮಾನ್ ಸಾಹ(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.

Ashes 2021: ರೋಚಕ ಘಟ್ಟದತ್ತ ಆ್ಯಶಸ್ ಮೊದಲ ಟೆಸ್ಟ್: ಅಲ್ಪ ಮುನ್ನಡೆ ಸಾಧಿಸಿದ ಇಂಗ್ಲೆಂಡ್

(Rohit Sharma has begun his preparation for the highly anticipated tour of South Africa)