Rohit Sharma: ದೇಹ ದಂಡಿಸಿದ ಹಿಟ್ಮ್ಯಾನ್: ರೋಹಿತ್ ಶರ್ಮಾ ಕಂಬ್ಯಾಕ್ ಯಾವಾಗ? ಇಲ್ಲಿದೆ ಉತ್ತರ
Rohit sharma New Look: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಇದೀಗ ಹಿಟ್ಮ್ಯಾನ್ ದೇಹ ತೂಕವನ್ನು ಇಳಿಸಲು ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹೊಸ ಲುಕ್ನಲ್ಲಿರುವ ಫೋಟೋವೊಂದನ್ನು ಕೂಡ ಹಿಟ್ಮ್ಯಾನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜನವರಿ 19 ರಿಂದ ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿ ಶುರುವಾಗಲಿದೆ. ವಿಶೇಷ ಎಂದರೆ ಈ ಸರಣಿಯಿಂದ ರೋಹಿತ್ ಶರ್ಮಾ (Rohit Sharma) ಹೊರಗುಳಿದಿದ್ದಾರೆ. ಅಂದರೆ ಟೀಮ್ ಇಂಡಿಯಾ (Team India) ಏಕದಿನ ತಂಡಕ್ಕೆ ನಾಯಕರಾದ ಬಳಿಕ ಹಿಟ್ಮ್ಯಾನ್ಗೆ ಇದು ಮೊದಲ ಸರಣಿ ಆಗಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಈ ಸರಣಿಯಿಂದಲೂ ರೋಹಿತ್ ಶರ್ಮಾ ಹಿಂದೆ ಸರಿದಿದ್ದಾರೆ. ಇದಕ್ಕೂ ಮುನ್ನ ಹಿಟ್ಮ್ಯಾನ್ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಗಾಯದ ಕಾರಣ ಹೊರಗುಳಿಯಬೇಕಾಯಿತು. ಇದೀಗ ಫಿಟ್ನೆಸ್ನತ್ತ ಗಮನ ಹರಿಸಿರುವ ರೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ಎರಡು ಸರಣಿಗಳಿಂದ ಹೊರಗುಳಿದಿದ್ದಾರೆ. ಇನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.
ಮತ್ತೊಂದೆಡೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ಗಾಗಿ ಕಸರತ್ತು ನಡೆಸುತ್ತಿರುವ ಹಿಟ್ಮ್ಯಾನ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವುದು ಯಾವಾಗ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಸದ್ಯ ಸಿಗುತ್ತಿರುವ ಉತ್ತರ ಫೆಬ್ರವರಿ ತಿಂಗಳಲ್ಲಿ ಎಂಬುದು. ಹೌದು, ರೋಹಿತ್ ಶರ್ಮಾ ಮುಂಬರುವ ವೆಸ್ಟ್ ಇಂಡೀಸ್ ಸರಣಿ ವೇಳೆಗೆ ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಸೇರಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಏಕದಿನ ತಂಡದ ನಾಯಕರಾಗಿ ಪದಾರ್ಪಣೆ ಮಾಡಲಿದ್ದಾರೆ.
ಭಾರತ-ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಂದು ಶುರುವಾಗಲಿದೆ. ಈ ವೇಳೆಗೆ ರೋಹಿತ್ ಶರ್ಮಾ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅಲ್ಲದೆ ಏಕದಿನ ಹಾಗೂ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮತ್ತೊಂದೆಡೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಇದೀಗ ಹಿಟ್ಮ್ಯಾನ್ ದೇಹ ತೂಕವನ್ನು ಇಳಿಸಲು ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹೊಸ ಲುಕ್ನಲ್ಲಿರುವ ಫೋಟೋವೊಂದನ್ನು ಕೂಡ ಹಿಟ್ಮ್ಯಾನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಂಪೂರ್ಣ ತಯಾರಿಯೊಂದಿಗೆ ಯಂಗ್ ಅ್ಯಂಡ್ ಎನರ್ಜಿಟಿಕ್ ಆಗಿ ಕಂಬ್ಯಾಕ್ ಮಾಡಲು ರೋಹಿತ್ ಶರ್ಮಾ ಸಿದ್ದತೆಯಲ್ಲಿದ್ದಾರೆ.
ಏಕೆಂದರೆ ಪ್ರಸ್ತುತ ಬಿಸಿಸಿಐ ನಿಯಮದ ಪ್ರಕಾರ, ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆಯಲು ಪ್ರತಿಯೊಬ್ಬ ಆಟಗಾರನು ಎನ್‌ಸಿಎಯಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಇದಾದ ಬಳಿಕ ಆಯ್ಕೆ ಸಮಿತಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹೀಗಾಗಿ ಸಂಪೂರ್ಣ ಫಿಟ್‌ನೆಸ್ ಕಡೆಗೆ ರೋಹಿತ್ ಶರ್ಮಾ ಗಮನಹರಿಸಿದ್ದು, ಈ ಮೂಲಕ ಎನ್ಸಿಎ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕವಷ್ಟೇ ಆಯ್ಕೆಗೆ ತಮ್ಮ ಲಭ್ಯತೆಯನ್ನು ತಿಳಿಸಲು ರೋಹಿತ್ ಶರ್ಮಾ ನಿರ್ಧರಿಸಿದ್ದಾರೆ. ಅದರಂತೆ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯೊಂದಿಗೆ ಹೊಸ ಲುಕ್ನಲ್ಲಿ ಹಿಟ್ಮ್ಯಾನ್ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಯುವ ಬೌಲರ್..!
ಇದನ್ನೂ ಓದಿ: ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Rohit Sharma likely to be available for home series against West Indies)