IPL 2025: ಲಕ್ನೋ ವಿರುದ್ಧ ಕಣಕ್ಕಿಳಿಯುತ್ತಿಲ್ಲ ರೋಹಿತ್..! ಶಾಕಿಂಗ್ ಸುದ್ದಿ ನೀಡಿದ ಹಾರ್ದಿಕ್ ಪಾಂಡ್ಯ

|

Updated on: Apr 04, 2025 | 7:52 PM

Rohit Sharma Out of Mumbai Indians Playing XI: ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಿರುವುದಾಗಿ ತಿಳಿಸಿದರು. ರೋಹಿತ್ ಅವರು ನೆಟ್ಸ್‌ನಲ್ಲಿ ಗಾಯಗೊಂಡಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಸಧ್ಯಕ್ಕೆ ರೋಹಿತ್ ಅವರ ಗಾಯದ ತೀವ್ರತೆಯ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

IPL 2025: ಲಕ್ನೋ ವಿರುದ್ಧ ಕಣಕ್ಕಿಳಿಯುತ್ತಿಲ್ಲ ರೋಹಿತ್..! ಶಾಕಿಂಗ್ ಸುದ್ದಿ ನೀಡಿದ ಹಾರ್ದಿಕ್ ಪಾಂಡ್ಯ
Rohit Sharma
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (IPL 2025) 16 ನೇ ಪಂದ್ಯ ಇಂದು ಲಕ್ನೋ ಸೂಪರ್​ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದರು. ಆದರೆ ಟಾಸ್ ಬಳಿಕ ಪ್ಲೇಯಿಂಗ್ 11 ಬಗ್ಗೆ ಪಾಂಡ್ಯ ಹೇಳಿದ ಅದೊಂದು ಮಾತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಈ ಪಂದ್ಯದಿಂದ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ಮತ್ತು ಅನುಭವಿ ಆಟಗಾರ ರೋಹಿತ್ ಶರ್ಮಾ (Rohit Sharma) ಅವರನ್ನು ತಂಡದಿಂದ ಕೈಬಿಡಲಾಗಿದೆ. ಲಕ್ನೋ ವಿರುದ್ಧದ ಆಡುವ ಹನ್ನೊಂದರಲ್ಲೂ ರೋಹಿತ್ ಸ್ಥಾನ ಪಡೆದಿಲ್ಲ ಮತ್ತು ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲೂ ರೋಹಿತ್ ಹೆಸರಿಲ್ಲ.

ವಾಸ್ತವವಾಗಿ ಟಾಸ್ ಗೆದ್ದ ಬಳಿಕ ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ಹಾರ್ದಿಕ್, ತಂಡದಲ್ಲಿ 1 ಬದಲಾವಣೆ ಮಾಡಿರುವುದಾಗಿ ತಿಳಿಸಿದರು. ಆ ಪ್ರಕಾರ, ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ತಿಳಿಸಿದರು. ಆರಂಭದಲ್ಲಿ ರೋಹಿತ್​ರನ್ನು ತಂಡದಿಂದ ಕೈಬಿಡಲು ಅವರ ಕಳಪೆ ಫಾರ್ಮ್​ ಕಾರಣ ಎಂದು ಭಾವಿಸಲಾಗಿತ್ತು. ಆದರೆ ಗಾಯದ ಕಾರಣ ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿಲ್ಲ ಎಂದು ಹೇಳುವ ಮೂಲಕ ಹಾರ್ದಿಕ್ ವದಂತಿಗಳಿಗೆ ತೆರೆ ಎಳೆದರು. ರೋಹಿತ್ ನೆಟ್ಸ್ ಸಮಯದಲ್ಲಿ ಗಾಯಗೊಂಡ ಕಾರಣ ಅವರನ್ನು ಲಕ್ನೋ ವಿರುದ್ಧದ ಪಂದ್ಯದಿಂದ ಹೊರಗಿಡಲಾಗಿದೆ ಎಂದು ಹಾರ್ದಿಕ್ ಮಾಹಿತಿ ನೀಡಿದರು.

ರೋಹಿತ್ ಶರ್ಮಾ ಕಳಪೆ ಫಾರ್ಮ್

ಐಪಿಎಲ್ 2025 ರಲ್ಲಿ ರೋಹಿತ್ ಶರ್ಮಾ ಅತ್ಯಂತ ಕಳಪೆ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿಟ್​ಮ್ಯಾನ್ ಸತತ ಮೂರು ಪಂದ್ಯಗಳಲ್ಲಿಯೂ ರನ್ ಗಳಿಸಿಲು ವಿಫಲರಾಗಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ರೋಹಿತ್​ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಆ ಬಳಿಕ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ ಕೇವಲ 8 ರನ್‌ಗಳು ಬಂದವು. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 13 ರನ್‌ಗಳಿಸಲಷ್ಟೆ ಶಕ್ತರಾಗಿದ್ದರು. ಅಂದರೆ, 3 ಪಂದ್ಯಗಳಲ್ಲಿ, ರೋಹಿತ್ ಕೇವಲ 7 ಸರಾಸರಿಯಲ್ಲಿ 21 ರನ್ ಗಳಿಸಿದ್ದಾರೆ.

ಇದನ್ನೂ ಓದಿ
ಮುಂಬೈ ಆಡುವ ಹನ್ನೊಂದರ ಬಳಗದಿಂದ ರೋಹಿತ್ ಔಟ್
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದ ನಾಯಕ ಯಾರು?
ಟೀಂ ಇಂಡಿಯಾದ ಮುಂದಿನ ಸರಣಿಯಿಂದ ಹಿಂದೆ ಸರಿದ ರೋಹಿತ್ ಶರ್ಮಾ

ರೋಹಿತ್​ಗೆ ಗಾಯ

ರೋಹಿತ್ ಶರ್ಮಾ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವಾಗ ಅವರು ಗಾಯಗೊಂಡಿದ್ದು, ಪ್ರಸ್ತುತ ರೋಹಿತ್ ಶರ್ಮಾ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದು ತಿಳಿದಿಲ್ಲ. ಮುಂದಿನ ಪಂದ್ಯಕ್ಕೆ ರೋಹಿತ್ ಫಿಟ್ ಆಗುತ್ತಾರಾ? ಅಥವಾ ಅವರು ಇನ್ನೂ ಕೆಲವು ಪಂದ್ಯಗಳಿಗೆ ಅಲಭ್ಯರಾಗುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

LSG vs MI Live Score, IPL 2025: ಲಕ್ನೋ ಬ್ಯಾಟಿಂಗ್ ಆರಂಭ

ಉಭಯ ತಂಡಗಳು

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ವಿಲ್ ಜಾಕ್ಸ್, ರಿಯಾನ್ ರಿಕಲ್ಟನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ನಮನ್ ಧೀರ್, ರಾಜ್ ಅಂಗದ್ ಬಾವಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಅಶ್ವಿನಿ ಕುಮಾರ್, ವಿಘ್ನೇಶ್ ಪುತ್ತೂರು, ಟ್ರೆಂಟ್ ಬೌಲ್ಟ್.

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI: ಏಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್, ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ದಿಗ್ವೇಶ್ ಸಿಂಗ್ ರಾಠಿ, ಆಕಾಶ್ ದೀಪ್, ಅವೇಶ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Fri, 4 April 25