Rohit Sharma: ನಾಯಕತ್ವ ಬದಲಾವಣೆ ಹಿಂದಿದೆ ಮಾಸ್ಟರ್ ಪ್ಲಾನ್: ರಿವೀಲ್ ಮಾಡಿದ್ರು ರೋಹಿತ್ ಶರ್ಮಾ

ENG vs IND T20I: ಕಳೆದ ಆರು ತಿಂಗಳುಗಳಲ್ಲಿ ಟೀಮ್ ಇಂಡಿಯಾ ರೋಹಿತ್ ಶರ್ಮಾ ಬಿಟ್ಟು ಇತರೆ ಆರು ಹೊಸ ನಾಯಕರನ್ನು ಕಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ರೋಹಿತ್ ಶರ್ಮಾ ಮಾತನಾಡಿದ್ದು ಪ್ರಶ್ನೆ ಮಾಡಿದವರಿಗೆ ಖಡಕ್ ಉತ್ತರ ನೀಡಿ ಬಾಯಿಮುಚ್ಚಿಸಿದ್ದಾರೆ.

Rohit Sharma: ನಾಯಕತ್ವ ಬದಲಾವಣೆ ಹಿಂದಿದೆ ಮಾಸ್ಟರ್ ಪ್ಲಾನ್: ರಿವೀಲ್ ಮಾಡಿದ್ರು ರೋಹಿತ್ ಶರ್ಮಾ
Rohit Sharma
Updated By: Vinay Bhat

Updated on: Jul 08, 2022 | 12:30 PM

ವಿರಾಟ್ ಕೊಹ್ಲಿ (Virat Kohli) ಭಾರತ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮಾ (Rohit Sharma) ಅವರನ್ನು ಪೂರ್ಣ ಪ್ರಮಾಣದ ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು. ಆದರೆ, ಇದುವರೆಗೆ ಅವರು ನಾಯಕನಾಗಿ ತಂಡವನ್ನು ಮುನ್ನಡೆಸಿದ್ದು ಬೆರಳಣಿಕೆಯಷ್ಟು ಪಂದ್ಯಗಳನ್ನು ಮಾತ್ರ. ಇದರ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ಹೊಸ ನಾಯಕರನ್ನು ಪ್ರತಿ ಸರಣಿಗೆ ಪ್ರಕಟಿಸುತ್ತಾ ಬಂತು. ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ (Hardik Pandya), ಕೆಎಲ್ ರಾಹುಲ್, ಶಿಖರ್ ಧವನ್, ಅಭ್ಯಾಸ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಹೀಗೆ ಕಳೆದ ಆರು ತಿಂಗಳುಗಳಲ್ಲಿ ಟೀಮ್ ಇಂಡಿಯಾ ರೋಹಿತ್ ಬಿಟ್ಟು ಇತರೆ ಆರು ಹೊಸ ನಾಯಕರನ್ನು ಕಂಡಿದೆ. ಈ ವಿಚಾರ ಕಳೆದ ಕೆಲವು ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಇದೀಗ ರೋಹಿತ್ ಶರ್ಮಾ ಮಾತನಾಡಿದ್ದು ಪ್ರಶ್ನೆ ಮಾಡಿದವರಿಗೆ ಖಡಕ್ ಉತ್ತರ ನೀಡಿ ಬಾಯಿಮುಚ್ಚಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ಟಾಸ್ ಪ್ರಕ್ರಿಯೆ ನಡೆಸುತ್ತಿರುವ ವೇಳೆ ರೋಹಿತ್ ಶರ್ಮಾ ಅವರಿಗೆ ಪ್ರಶ್ನೆ ಕೆಳಲಾಗಿದೆ. “ಭಾರತ ತಂಡದಲ್ಲಿ ಪದೇ ಪದೇ ನಾಯಕತ್ವ ಬದಲಾವಣೆ ಆಗುತ್ತಿದೆಯಲ್ಲ. ಯಾಕೆ?,” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಖಡಕ್ ಉತ್ತರ ನೀಡಿರುವ ಹಿಟ್​ಮ್ಯಾನ್, “ನೀವು ಅಂದುಕೊಂಡಂತೆ ಏನೂ ಇಲ್ಲ. ನಾವು ಕೆಲವೊಂದು ಪರೀಕ್ಷೆ ನಡೆಸುತ್ತಿದ್ದೇವೆ, ಅದಕ್ಕೆ ತಯಾರಾಗುತ್ತಿದ್ದೇವೆ. ನಮಗೆ ಮುಂದಿನ ವೇಳಾಪಟ್ಟಿ ಬಗ್ಗೆ ತಿಳಿದಿದೆ. ಇದಕ್ಕಾಗಿ ಆಟಗಾರರ ಬದಲಾವಣೆ ನಡೆಯುತ್ತಿದೆ, ಮುಂದೆಯೂ ನಡೆಯುತ್ತದೆ.”

Happy Birthday Sourav Ganguly: ಸೌರವ್ ಗಂಗೂಲಿಗೆ ಹುಟ್ಟುಹಬ್ಬದ ಸಂಭ್ರಮ: ಅರ್ಧಶತಕ ಪೂರೈಸಿದ ದಾದಾ

ಇದನ್ನೂ ಓದಿ
Rafael Nadal: ರಾಫೆಲ್ ನಡಾಲ್​ನಿಂದ ಶಾಕಿಂಗ್ ನಿರ್ಧಾರ: ವಿಂಬಲ್ಡನ್ ಸೆಮಿ ಫೈನಲ್​ನಿಂದ ಹಿಂದೆ ಸರಿದ ಸ್ಪ್ಯಾನಿಷ್ ಸ್ಟಾರ್
Rohit Sharma: ಈವರೆಗೆ ಯಾವೊಬ್ಬ ಕ್ರಿಕೆಟಿಗ ಮಾಡಿಲ್ಲ: ವಿಶ್ವ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ
IND vs ENG: ಹಾರ್ದಿಕ್ ಆಲ್ರೌಂಡ್ ಪ್ರದರ್ಶನಕ್ಕೆ ಬೆಚ್ಚಿಬಿದ್ದ ಇಂಗ್ಲೆಂಡ್: ಭಾರತಕ್ಕೆ 50 ರನ್​ಗಳ ಅಮೋಘ ಜಯ
Wimbledon 2022: ಜರ್ಮನಿಯ ಮರಿಯಾರನ್ನು ಮಣಿಸಿ ಚೊಚ್ಚಲ ಗ್ರ್ಯಾಂಡ್ ​ಸ್ಲ್ಯಾಮ್ ಫೈನಲ್ ಪ್ರವೇಶಿಸಿದ ಓನ್ಸ್ ಜಬೇರ್..!

“ನಾವು ನಮ್ಮ ಬೆಂಚ್ ಸ್ಟ್ರೆಂತ್ ಹೇಗಿದೆ ಎಂಬುದನ್ನು ನೋಡುತ್ತಿದ್ದೇವೆ. ಇದರಿಂದ ಅನೇಕ ಆಟಗಾರರಿಗೆ ಬಂದು ಆಡಲು ಅವಕಾಶ ಸಿಗುತ್ತದೆ. ಈಗಾಗಲೇ ಐರ್ಲೆಂಡ್ ವಿರುದ್ಧ ಈ ಪ್ರಯೋಗ ನಡೆಸಿದ್ದೇವೆ. ಮುಂದೆಯೂ ಈರೀತಿ ನಡೆಯುತ್ತದೆ,” ಎಂದು ಅನೇಕರಲ್ಲಿ ಎದ್ದಿದ್ದ ಗೊಂದಲಗಳಿಗೆ ಖಡಕ್ ಆಗಿ ಉತ್ತರ ನೀಡುವ ಮೂಲಕ ರೋಹಿತ್ ಶರ್ಮಾ ಬಾಯಿ ಮುಚ್ಚಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 50 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಆಟಗಾರರ ಪ್ರದರ್ಶನದ ಬಗ್ಗೆ ಹಾಡಿಹೊಗಳಿದ್ದಾರೆ. ಬೌಲರ್​ಗಳು ಅದ್ಭುತವಾಗಿ ಆಡಿದರು. ಬ್ಯಾಟರ್​ಗಳು ಕೂಡ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಪವರ್ ಪ್ಲೇಯ ಆರಂಭದ 6 ಓವರ್​ಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಬಹಳ ಮುಖ್ಯ. ಹಾರ್ದಿಕ್ ಬೌಲಿಂಗ್​ನಿಂದ ಖುಷಿ ಆಗಿದೆ. ಮುಂದಿನ ದಿನಗಳನ್ನು ಅವರ ಕಡೆಯಿಂದ ಇನ್ನಷ್ಟು ಕೊಡುಗೆ ಬರಬೇಕಿದೆ ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತು. ಹಾರ್ದಿಕ್ ಪಾಂಡ್ಯ ಅರ್ಧಶತಕ, ದೀಪಕ್ ಹೂಡಾ 33, ಸೂರ್ಯಕುಮಾರ್ ಯಾದವ್ 39 ಗಳಿಸಿ ನೆರವಾದರು. ಕಠಿಣ ಗುರಿ ಬೆಂಬತ್ತಿದ ಇಂಗ್ಲೆಂಡ್ 19.3 ಓವರ್ ಗಳಲ್ಲಿ 148 ರನ್ ಗೆ ಪತನಗೊಂಡಿತು. ಪಾಂಡ್ಯ 33 ರನ್ ನೀಡಿ 4 ವಿಕೆಟ್ ಪಡೆದರೆ, ಚೊಚ್ಚಲ ಪಂದ್ಯವಾಡಿದ ಆರ್ಷದೀಪ್ ಸಿಂಗ್ ಮತ್ತು ಚಹಲ್ ತಲಾ 2 ವಿಕೆಟ್ ಕಬಳಿಸಿದರು.

Deepak Hooda: ರವಿಶಾಸ್ತ್ರಿ ಕಾಮೆಂಟರಿ ಮಾಡುತ್ತಿದ್ದ​​ ಕಡೆ ದೀಪಕ್ ಹೂಡ ಸ್ಫೋಟಕ ಸಿಕ್ಸ್: ದಂಗಾದ ಇಡೀ ಸ್ಟೇಡಿಯಂ