Happy Birthday Sourav Ganguly: ಸೌರವ್ ಗಂಗೂಲಿಗೆ ಹುಟ್ಟುಹಬ್ಬದ ಸಂಭ್ರಮ: ಅರ್ಧಶತಕ ಪೂರೈಸಿದ ದಾದಾ
HBD Sourav Ganguly: ಸೌರವ್ ಗಂಗೂಲಿ ಅವರು ಶುಕ್ರವಾರ 50ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿರುವ ಗಂಗೂಲಿಗೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣದ ಮೂಲಕ ಶುಭಕೋರಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರು ಶುಕ್ರವಾರ 50ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿರುವ ಗಂಗೂಲಿಗೆ ತಮ್ಮ ಮಾಜಿ ಸಹಪಾಠಿ ಸಚಿನ್ ತೆಂಡೂಲ್ಕರ್ (Sachin Tendulkar), ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣದ ಮೂಲಕ ಶುಭಕೋರಿದ್ದಾರೆ. ಬಿಸಿಸಿಐ (BCCI) ಅಲ್ಲದೆ, ಐಸಿಸಿ, ವಿಶ್ವದ ಅನೇಕ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ವಿಶ್ ಮಾಡಿದ್ದಾರೆ. ಇಂಗ್ಲೆಂಡ್ನಲ್ಲಿ ಹುಟ್ಟುಹಬ್ಬ ಆಚರಿಸಿರುವ ಗಂಗೂಲಿ ಜೊತೆ ಮಾಜಿ ಐಪಿಎಲ್ ಚೇರ್ಮನ್ ಮತ್ತು ಹಿರಿಯ ಕ್ರಿಕೆಟ್ ಆಡಳಿತಗಾರ ರಾಜೀವ್ ಶುಕ್ಲಾ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕೂಡ ಇದ್ದರು.
ಅತಿಯಾದ ಶಿಸ್ತಿನಿಂದ ಒಂದೇ ದಾರಿಯಲ್ಲಿ ಸಾಗುತ್ತಿದ್ದ ಟೀಮ್ ಇಂಡಿಯಾಕ್ಕೆ ಆಕ್ರಮಣಕಾರಿ ಮನೋಭಾವ, ಜವಾಬ್ದಾರಿಯುತ ಆಟ, ಸಮರ್ಥ ನಾಯಕತ್ವ ಗುಣಗಳನ್ನು ತುಂಬಿದವರು ಗಂಗೂಲಿ. ಭಾರತೀಯ ಕ್ರಿಕೆಟ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಕೆಲವೇ ಕೆಲವು ನಾಯಕರಲ್ಲೊಬ್ಬರು.
Deepak Hooda: ರವಿಶಾಸ್ತ್ರಿ ಕಾಮೆಂಟರಿ ಮಾಡುತ್ತಿದ್ದ ಕಡೆ ದೀಪಕ್ ಹೂಡ ಸ್ಫೋಟಕ ಸಿಕ್ಸ್: ದಂಗಾದ ಇಡೀ ಸ್ಟೇಡಿಯಂ
2000 ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಟೀಮ್ ಇಂಡಿಯಾ ಅವಮಾನ ಅನುಭವಿಸಿದ್ದ ಸಮಯದಲ್ಲಿ ತಂಡದ ಚುಕ್ಕಾಣಿ ಹಿಡಿದ ಗಂಗೂಲಿ ಹೊಸ ಅಧ್ಯಾಯ ಬರೆದರು. ಯುವರಾಜ್ ಸಿಂಗ್, ಜಹೀರ್ ಖಾನ್, ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ ಸಿಂಗ್, ವೀರೆಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಆಶೀಶ್ ನೆಹ್ರಾ ಮುಂತಾದವರು ಗಂಗೂಲಿ ನಾಯಕತ್ವದಲ್ಲೇ ಭಾರತೀಯ ಕ್ರಿಕೆಟ್ ಪ್ರವೇಶ ಪಡೆದಿದ್ದರು.
ಟೀಕಾಕಾರರಿಗೆ ಮೈದಾನದಲ್ಲೇ ಸಮರ್ಥವಾಗಿ ಉತ್ತರ ನೀಡಿ, ವಿಭಿನ್ನವಾಗಿ ಯಶಸ್ಸನ್ನು ಸೆಲೆಬ್ರೆಟ್ ಮಾಡುವ ಗಂಗೂಲಿ ಭಾರತವನ್ನು 2003 ವಿಶ್ವಕಪ್‌ನ ಫೈನಲ್‌ಗೇರಿಸಿದ್ದ ದಾಖಲೆ ಹೊಂದಿದ್ದಾರೆ. ತಾವು ನಾಯಕರಾದ ಹೊತ್ತಿನಲ್ಲಿ ವಿದೇಶದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಸಾಧಿಸುವಂಥ ಆತ್ಮವಿಶ್ವಾಸವನ್ನು ತುಂಬಿದ ನಾಯಕ. ಕ್ರಿಕೆಟ್ ಕಾಶಿ ಎನಿಸಿಕೊಂಡಿದ್ದ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಶರ್ಟ್ ಬಿಚ್ಚಿ ಸಂಭ್ರಮ ಆಚರಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಇಂಗ್ಲೆಂಡ್ ನೆಲದಲ್ಲಿಯೇ ಕೆಣಕಿದ ಸಾಹಸಿ ಗಂಗೂಲಿ.
ಭಾರತೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಎಡಗೈ ಬ್ಯಾಟರ್ ಎನಿಸಿಕೊಂಡಿರುವ ಗಂಗೂಲಿ ತಂಡದ ಹಿತಕ್ಕಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಇಂದು ಕೂಡ ಬಿಸಿಸಿಐ ಅಧ್ಯಕ್ಷನಾಗಿ ಆ ಕೆಸಲ ಮಾಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ವೀರೆಂದ್ರ ಸೆಹ್ವಾಗ್ ರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕರನ್ನಾಗಿ ಮಾಡಿದ ಗಂಗೂಲಿ ನಂತರ ದಿಲ್ಲಿ ಕ್ರಿಕೆಟಿಗ ವೃತ್ತಿ ಜೀವನದ ದಿಕ್ಕನ್ನೇ ಬದಲಿಸಿದರು. ಸೌರವ್ ಗಂಗೂಲಿ ಏಕದಿನ ಕ್ರಿಕೆಟ್ ನಲ್ಲಿ 11,363 ರನ್ ಗಳು ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ 7212 ರನ್ ಗಳಿಸಿದ್ದಾರೆ.
Published On - 11:14 am, Fri, 8 July 22