T20 World Cup 2021: ವೆಸ್ಟ್ ಇಂಡೀಸ್​ ವಿರುದ್ದ ಭರ್ಜರಿ ಪ್ರದರ್ಶನಕ್ಕೆ CSK ಕಾರಣವೆಂದ ಮೊಯೀನ್ ಅಲಿ

Moeen Ali: ಈ ಪಂದ್ಯದಲ್ಲಿ ಆದಿಲ್ ರಶೀದ್ 2.2 ಓವರ್​ನಲ್ಲಿ 2 ರನ್​ ನೀಡಿ 4 ವಿಕೆಟ್ ಪಡೆದಿದ್ದರೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಮೊಯೀನ್ ಅಲಿ ಅವರಿಗೆ.

T20 World Cup 2021: ವೆಸ್ಟ್ ಇಂಡೀಸ್​ ವಿರುದ್ದ ಭರ್ಜರಿ ಪ್ರದರ್ಶನಕ್ಕೆ CSK ಕಾರಣವೆಂದ ಮೊಯೀನ್ ಅಲಿ
Moeen Ali

ಟಿ20 ವಿಶ್ವಕಪ್​ನ (T20 World Cup 2021) ಗ್ರೂಪ್-1 ರಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಬೌಲಿಂಗ್ ಹಾಗೂ ಫೀಲ್ಡಿಂಗ್​ನಲ್ಲಿ ಮಿಂಚಿದ್ದು ಇಂಗ್ಲೆಂಡ್ ಆಲ್​ರೌಂಡರ್ ಮೊಯೀನ್ ಅಲಿ. ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್​ ತಂಡ ಸ್ಪಿನ್ನರ್ ಆದಿಲ್ ರಶೀದ್ ಹಾಗೂ ಮೊಯೀನ್ ಅಲಿ ಸ್ಪಿನ್ ಮೋಡಿಗೆ ತತ್ತರಿಸಿತು. ಪರಿಣಾಮ ಕೇವಲ 55 ರನ್​ಗಳಿಗೆ ಸರ್ವಪತನ ಕಂಡಿತು. ಈ ಸುಲಭ ಗುರಿಯನ್ನು ಇಂಗ್ಲೆಂಡ್​ ತಂಡ 8.2 ಓವರ್​ನಲ್ಲಿ 4 ವಿಕೆಟ್ ನಷ್ಟದೊಂದಿಗೆ ಚೇಸ್ ಮಾಡಿ 6 ವಿಕೆಟ್​ಗಳ ಜಯ ಗೆಲುವು ದಾಖಲಿಸಿತು.

ಆದರೆ ಈ ಪಂದ್ಯದಲ್ಲಿ ಆದಿಲ್ ರಶೀದ್ 2.2 ಓವರ್​ನಲ್ಲಿ 2 ರನ್​ ನೀಡಿ 4 ವಿಕೆಟ್ ಪಡೆದಿದ್ದರೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಮೊಯೀನ್ ಅಲಿ ಅವರಿಗೆ. 4 ಓವರ್​ನಲ್ಲಿ 17 ರನ್ ನೀಡಿ 2 ವಿಕೆಟ್ ಪಡೆದರೂ ಮ್ಯಾನ್​ ಆಫ್ ದಿ ಮ್ಯಾಚ್ ಸಿಗಲು ಮುಖ್ಯ ಕಾರಣ, ಮೊಯೀನ್ ಅಲಿ ಅವರ ಒಟ್ಟಾರೆ ಪ್ರದರ್ಶನ.

ಹೌದು, ವೆಸ್ಟ್ ಇಂಡೀಸ್ ವಿರುದ್ದ ಮೊಯೀನ್ ಅಲಿ ಪವರ್​ಪ್ಲೇನಲ್ಲಿ ಬೌಲಿಂಗ್ ಮಾಡಿದ್ದರು. ಮೊದಲ ವಿಕೆಟ್ ಪಡೆದಿದ್ದು ಕೂಡ ಮೊಯೀನ್ ಅಲಿ. ಲಿಂಡ್ಲ್ ಸಿಮನ್ಸ್ ಹಾಗೂ ಶಿಮ್ರಾನ್ ಹೆಟ್ಮೆಯರ್ ವಿಕೆಟ್ ಪಡೆಯುವ ಮೂಲಕ ವಿಂಡೀಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಇದಲ್ಲದೆ ಎವಿನ್ ಲೂಯಿಸ್ ಅವರ ಅದ್ಭುತ ಕ್ಯಾಚ್ ಕೂಡ ಹಿಡಿದಿದ್ದರು. ಹೀಗೆ ವೆಸ್ಟ್ ಇಂಡೀಸ್ ಪತನಕ್ಕೆ ಪವರ್​ಪ್ಲೇನಲ್ಲೇ ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂಲಕ ನಾಂದಿಯಾಡಿದ್ದು ಮೊಯೀನ್ ಅಲಿ. ಹೀಗಾಗಿಯೇ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ ಮೊಯೀನ್ ಅಲಿ, ತಮ್ಮ ಅದ್ಭುತ ಪ್ರದರ್ಶನಕ್ಕೆ ಚೆನ್ನೈ ಸೂಪರ್ ಕಿಂಗ್ಸ್​ ಕಾರಣ ಎಂದರು. ಐಪಿಎಲ್​ನಲ್ಲಿ ಸಿಎಸ್​ಕೆ ಪರ ನಾನು ಆಡಿರುವುದು ನನ್ನ ಯಶಸ್ಸಿಗೆ ಕಾರಣ ಎಂದು ಮೊಯೀನ್ ಅಲಿ ಕೃತಜ್ಞತೆ ಸಲ್ಲಿಸಿದರು. ಏಕೆಂದರೆ ಸಿಎಸ್​ಕೆ ತಂಡದಲ್ಲಿ ನನ್ನ ಪಾತ್ರ ಬಹಳ ಮುಖ್ಯವಾಗಿತ್ತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಈ ಮೂರು ವಿಭಾಗದಲ್ಲೂ ನಾನು ಸಂಪೂರ್ಣ ತೊಡಗಿಸಿಕೊಂಡಿರುವಂತೆ ತೋರುತ್ತಿತ್ತು. ಅದರಂತೆ ವಿಶ್ವಕಪ್​ಗೆ ತಯಾರಿ ನಡೆಸಲು ಐಪಿಎಲ್ ಸೂಕ್ತ ವೇದಿಕೆಯಾಗಿತ್ತು. ಹೀಗಾಗಿ ನನ್ನ ಪ್ರದರ್ಶನದ ಸಂಪೂರ್ಣ ಶ್ರೇಯಸ್ಸು ಸಿಎಸ್​ಕೆ ತಂಡಕ್ಕೆ ಸಲ್ಲಬೇಕು ಎಂದು ಮೊಯೀನ್ ಅಲಿ ತಿಳಿಸಿದರು.

ಇದನ್ನೂ ಓದಿ: India vs Pakistan: 2007ರ ಟಿ20 ವಿಶ್ವಕಪ್ ಫೈನಲ್ ಆಡಿದ್ದ ಇಬ್ಬರು ಆಟಗಾರರ ಮುಖಾಮುಖಿ

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(Role with CSK helped me, says Moeen Ali after England outclass West Indies)

Click on your DTH Provider to Add TV9 Kannada