RR vs RCB, IPL 2022: ಡಿಕೆ ದರ್ಬಾರ್, ಶಭಾಷ್ ಶಹಬಾಜ್: ಆರ್​ಸಿಬಿಗೆ ಭರ್ಜರಿ ಜಯ

Rajasthan Royals vs Royal Challengers Bangalore Live Score in Kannada: ಉಭಯ ತಂಡಗಳು ಇದುವರೆಗೆ 26 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಆರ್​ಸಿಬಿ 13 ಪಂದ್ಯಗಳಲ್ಲಿ ಗೆದ್ದಿದೆ. ಇನ್ನು ರಾಜಸ್ಥಾನ್ ಗೆದ್ದಿರುವುದು ಕೇವಲ 10 ಪಂದ್ಯಗಳಲ್ಲಿ ಮಾತ್ರ.

RR vs RCB, IPL 2022: ಡಿಕೆ ದರ್ಬಾರ್, ಶಭಾಷ್ ಶಹಬಾಜ್: ಆರ್​ಸಿಬಿಗೆ ಭರ್ಜರಿ ಜಯ
RR vs RCB

| Edited By: Zahir PY

Apr 05, 2022 | 11:35 PM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ (IPL 2022) 13ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs RR)  ತಂಡಕ್ಕೆ 170 ರನ್​ಗಳ ಟಾರ್ಗೆಟ್ ನೀಡಿತು. ಜೋಸ್ ಬಟ್ಲರ್ (70) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 169 ರನ್​ಗಳಿಸಿತು.

ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ 87 ರನ್​ಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್ ಕೇವಲ 22 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ್ದರು. ಅದರಲ್ಲೂ ದಿನೇಶ್ ಕಾರ್ತಿಕ್ ಅಬ್ಬರವನ್ನು ತಡೆಯಲು ರಾಜಸ್ಥಾನ್ ರಾಯಲ್ಸ್ ಬೌಲರ್​ಗಳು ಪರದಾಡಿದರು.

ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡಿಕೆ ಸಿಕ್ಸ್​ ಫೋರ್​ಗಳ ಸುರಿಮಳೆಗೈದರು. ಪರಿಣಾಮ ಕೊನೆಯ 3 ಓವರ್​ಗಳಲ್ಲಿ ಆರ್​ಸಿಬಿಗೆ 28 ರನ್​ಗಳ ಅವಶ್ಯಕತೆಯಿತ್ತು. ಅಂತಿಮವಾಗಿ 19.1 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಆರ್​ಸಿಬಿ 4 ವಿಕೆಟ್​ಗಳ ಜಯ ಸಾಧಿಸಿತು. ಈ ಮೂಲಕ ಆರ್​ಸಿಬಿ ಗೆಲುವಿನ ರೂವಾರಿಗಳಾಗಿ ದಿನೇಶ್ ಕಾರ್ತಿಕ್ (44) ಹಾಗೂ ಶಹಬಾಜ್ ಅಹ್ಮದ್ (45) ಹೊರಹೊಮ್ಮಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಲುವ್ನಿತ್ ಸಿಸೋಡಿಯಾ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

ರಾಜಸ್ಥಾನ್ ರಾಯಲ್ಸ್ (RR) ತಂಡ: ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ, ಕೆಸಿ ಕಾರ್ಯಪ್ಪ, ನವದೀಪ್ ಸೈನಿ, ತೇಜಸ್ ಬರೋಕಾ, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಕುಲ್ದ್ರುವ್ ಜುರೆಲ್ , ಶುಭಂ ಗರ್ವಾಲ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವಾನ್ ಡೆರ್ ಡುಸ್ಸೆನ್, ಜೇಮ್ಸ್ ನೀಶಮ್, ಡೇರಿಲ್ ಮಿಚೆಲ್, ಕರುಣ್ ನಾಯರ್, ಒಬೆಡ್ ಮೆಕಾಯ್.

Key Events

ಟಾಸ್ ಗೆದ್ದ RCB

ಟಾಸ್ ಗೆದ್ದ RCB ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

LIVE Cricket Score & Updates

The liveblog has ended.
 • 05 Apr 2022 11:28 PM (IST)

  ಆರ್​ಸಿಬಿಗೆ 4 ವಿಕೆಟ್​ಗಳ ಜಯ

  RR 169/3 (20)

  RCB 173/6 (19.1)

 • 05 Apr 2022 11:22 PM (IST)

  ಡಿಕೆ ಫೋರ್

  ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಡಿಕೆ ಫೋರ್

  RCB 163/6 (18.4)

    

 • 05 Apr 2022 11:16 PM (IST)

  ಶಹಬಾಜ್ ಔಟ್

  ಬೌಲ್ಟ್ ಎಸೆತದಲ್ಲಿ ಶಹಬಾಜ್ (45) ಬೌಲ್ಡ್

  RCB 154/6 (17.5)

    

 • 05 Apr 2022 11:14 PM (IST)

  ಶಹಬಾಜ್ ಆರ್ಭಟ

  ಬೌಲ್ಟ್ ಎಸೆತದಲ್ಲಿ ಶಹಬಾಜ್ ಭರ್ಜರಿ ಸಿಕ್ಸ್

  RCB 152/5 (17.3)

    

 • 05 Apr 2022 11:05 PM (IST)

  ಶಹಬಾಜ್ ಭರ್ಜರಿ ಸಿಕ್ಸ್

  ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶಹಬಾಜ್

  RCB 138/5 (16)

    

 • 05 Apr 2022 11:01 PM (IST)

  ಶಹಬಾಜ್ ಭರ್ಜರಿ ಬ್ಯಾಟಿಂಗ್

  RCB 130/5 (15.2)

    

  ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಶಹಬಾಜ್

 • 05 Apr 2022 10:58 PM (IST)

  5 ಓವರ್​ಗಳಲ್ಲಿ 45 ರನ್​ಗಳ ಅವಶ್ಯಕತೆ

  RCB 125/5 (15)

    

 • 05 Apr 2022 10:54 PM (IST)

  ಬ್ಯಾಕ್ ಟು ಬ್ಯಾಕ್ ಬೌಂಡರಿ

  ಸೈನಿ ಎಸೆತದಲ್ಲಿ  ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿ ದಿನೇಶ್ ಕಾರ್ತಿಕ್ ಅಬ್ಬರ

 • 05 Apr 2022 10:53 PM (IST)

  ಡಿಕೆ ಬಾಸ್

  ಸೈನಿ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಡಿಕೆ

  RCB 114/5 (14.2)

    

 • 05 Apr 2022 10:50 PM (IST)

  ದಿನೇಶ್ ಕಾರ್ತಿಕ್ ಅಬ್ಬರ

  ಅಶ್ವಿನ್ ಓವರ್​ನಲ್ಲಿ 21 ರನ್ ಬಾರಿಸಿದ ದಿನೇಶ್ ಕಾರ್ತಿಕ್

  ಮೂರು ಫೋರ್, ಒಂದು ಸಿಕ್ಸ್

  RCB 109/5 (14)

   

 • 05 Apr 2022 10:49 PM (IST)

  ವೆಲ್ಕಂ ಬೌಂಡರಿ

  RCB 101/5 (13.3)

    

  ಅಶ್ವಿನ್ ನೋ ಬಾಲ್ ಎಸೆತದಲ್ಲಿ ಬೌಂಡರಿ ಬಾರಿಸಿದ ದಿನೇಶ್ ಕಾರ್ತಿಕ್

  ಫ್ರೀ ಹಿಟ್​ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡಿಕೆ

    

 • 05 Apr 2022 10:42 PM (IST)

  ರುದರ್​ಫೋರ್ಡ್​ ಔಟ್

  ಟ್ರೆಂಟ್ ಬೌಲ್ಟ್ ಎಸೆತದಲ್ಲಿ ರುದರ್​ಫೋರ್ಡ್ (5)​​ ಭರ್ಜರಿ ಹೊಡೆತಕ್ಕೆ ಯತ್ನ

  ನವದೀಪ್ ಸೈನಿ ಅದ್ಭುತ ಕ್ಯಾಚ್

  RCB 87/5 (12.3)

    

    

 • 05 Apr 2022 10:39 PM (IST)

  ಭರ್ಜರಿ ಸಿಕ್ಸ್

  ಸೈನಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶಹಬಾಜ್

  RCB 86/4 (12)

    

    

 • 05 Apr 2022 10:37 PM (IST)

  ಸೈನಿ ಟು ಶಹಬಾಜ್

  ಸೈನಿ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಶಹಬಾಜ್

  RCB 79/4 (11.2)

    

 • 05 Apr 2022 10:30 PM (IST)

  10 ಓವರ್ ಮುಕ್ತಾಯ

  RCB 68/4 (10)

    

  ಕ್ರೀಸ್​ನಲ್ಲಿ ರುದರ್​ಫೋರ್ಡ್-ಶಹಬಾಜ್ ಅಹ್ಮದ್ ಬ್ಯಾಟಿಂಗ್

 • 05 Apr 2022 10:25 PM (IST)

  4ನೇ ವಿಕೆಟ್ ಪತನ

  ಚಹಲ್ ಸ್ಪಿನ್ ಮೋಡಿ

  ಡೇವಿಡ್ ವಿಲ್ಲಿ ಕ್ಲೀನ್ ಬೌಲ್ಡ್

  RCB 62/4 (8.5)

   

 • 05 Apr 2022 10:24 PM (IST)

  ರನೌಟ್

  ಮಿಂಚಿನ ವೇಗದಲ್ಲಿ ಬೇಲ್ಸ್ ಎಗರಿಸಿದ ಚಹಲ್.. ವಿರಾಟ್ ಕೊಹ್ಲಿ ರನೌಟ್

  ಆರ್​ಸಿಬಿ ಮೂರು ವಿಕೆಟ್ ಪತನ

  RCB 62/3 (8.4)

   

 • 05 Apr 2022 10:18 PM (IST)

  ಅನೂಜ್ ರಾವತ್ ಔಟ್

  ಸೈನಿ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಅನೂಜ್ ರಾವತ್ (26)

  RCB 61/2 (8)

    

 • 05 Apr 2022 10:11 PM (IST)

  ಆರ್​ಸಿಬಿ ಮೊದಲ ವಿಕೆಟ್ ಪತನ

  ಚಹಲ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಫಾಫ್ ಡುಪ್ಲೆಸಿಸ್ (29)

  RCB 55/1 (7)

    

 • 05 Apr 2022 10:05 PM (IST)

  ಪವರ್​ಪ್ಲೇ ಮುಕ್ತಾಯ: ಆರ್​ಸಿಬಿ ಉತ್ತಮ ಆರಂಭ

  RCB 48/0 (6)

    

  ಕ್ರೀಸ್​ನಲ್ಲಿ ಅನೂಜ್ ರಾವತ್-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್

 • 05 Apr 2022 10:03 PM (IST)

  ವಾಟ್ ಎ ಶಾಟ್

  ಅಶ್ವಿನ್ ಎಸೆತದಲ್ಲಿ ಆಫ್​ ಸೈಡ್​ನತ್ತ ಡುಪ್ಲೆಸಿಸ್​ ಆಕರ್ಷಕ ಫೋರ್

  RCB 44/0 (5.2)

    

 • 05 Apr 2022 09:57 PM (IST)

  ಅನೂಜ್ ಅಬ್ಬರ

  ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಮುನ್ನುಗ್ಗಿ ಬಂದು ಬೌಂಡರಿ ಬಾರಿಸಿದ ಅನೂಜ್ ರಾವತ್

  RCB 37/0 (4.3)

    

 • 05 Apr 2022 09:55 PM (IST)

  ಮಾಸ್ಟರ್-ಡುಪ್ಲೆಸಿಸ್

  ಅಶ್ವಿನ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಡುಪ್ಲೆಸಿಸ್

  RCB 33/0 (4)

    

 • 05 Apr 2022 09:50 PM (IST)

  3 ಓವರ್ ಮುಕ್ತಾಯ

  RCB 28/0 (3)

    

 • 05 Apr 2022 09:48 PM (IST)

  ಬ್ಯೂಟಿಫುಲ್ ಬೌಂಡರಿ

  ಬೌಲ್ಟ್ ಎಸೆತದಲ್ಲಿ ಫಾಫ್ ಡುಪ್ಲೆಸಿಸ್ ಕ್ಲಾಸಿಕ್ ಆಫ್ ಸೈಡ್ ಶಾಟ್...ಬೌಂಡರಿ

  RCB 22/0 (2.3)

    

 • 05 Apr 2022 09:47 PM (IST)

  ಫಾಫ್-ಬೌಂಡರಿ

  ಬೌಲ್ಟ್​ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಫಾಫ್ ಡುಪ್ಲೆಸಿಸ್

 • 05 Apr 2022 09:46 PM (IST)

  ಮೊದಲ ಬೌಂಡರಿ

  ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಭರ್ಜರಿ ಬೌಂಡರಿ ಬಾರಿಸಿದ ಅನೂಜ್ ರಾವತ್

  RCB 12/0 (2)

    

 • 05 Apr 2022 09:41 PM (IST)

  ಮೊದಲ ಓವರ್ ಮುಕ್ತಾಯ

  RCB 3/0 (1)

    

 • 05 Apr 2022 09:38 PM (IST)

  ಆರ್​ಸಿಬಿ ಇನಿಂಗ್ಸ್ ಆರಂಭ

  ಆರಂಭಿಕರು:

  ಫಾಫ್ ಡುಪ್ಲೆಸಿಸ್

  ಅನೂಜ್ ರಾವತ್

  ಮೊದಲ ಓವರ್: ಟ್ರೆಂಟ್ ಬೌಲ್ಟ್

 • 05 Apr 2022 09:27 PM (IST)

  ಆರ್​ಸಿಬಿಗೆ 170 ರನ್​ಗಳ ಟಾರ್ಗೆಟ್

 • 05 Apr 2022 09:23 PM (IST)

  20 ಓವರ್ ಮುಕ್ತಾಯ

  RR 169/3 (20)

  ಜೋಸ್ ಬಟ್ಲರ್- 70

  ಶಿಮ್ರಾನ್ ಹೆಟ್ಮೆಯರ್- 42

    

 • 05 Apr 2022 09:19 PM (IST)

  ಫುಲ್ ಜೋಶ್-ಬಟ್ಲರ್

  ಆಕಾಶ್ ದೀಪ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಬಟ್ಲರ್

  RR 160/3 (19.3)

    

 • 05 Apr 2022 09:18 PM (IST)

  ಬಟ್ಲರ್ ಸ್ಪೆಷಲ್

  ಆಕಾಶ್ ದೀಪ್ ಫ್ರಿ ಹಿಟ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಬಟ್ಲರ್

  RR 154/3 (19.2)

    

 • 05 Apr 2022 09:15 PM (IST)

  ಭರ್ಜರಿ ಸಿಕ್ಸ್

  ಸಿರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ಬಟ್ಲರ್

  42 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಬಟ್ಲರ್

  RR 146/3 (19)

    

 • 05 Apr 2022 09:13 PM (IST)

  ಬಟ್ಲರ್ ಭರ್ಜರಿ ಹಿಟ್

  ಸಿರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್

  RR 140/3 (18.5)

    

 • 05 Apr 2022 09:11 PM (IST)

  ಹೆಟ್ಮೆಯರ್ ಆರ್ಭಟ

  ಸಿರಾಜ್​ ಎಸೆತದಲ್ಲಿ ಸಿಡಿಲಬ್ಬರದ ಬೌಂಡರಿ ಬಾರಿಸಿದ ಹೆಟ್ಮೆಯರ್

  RR 127/3 (18.1)

    

 • 05 Apr 2022 09:08 PM (IST)

  ಹಿಟ್​-ಮಯರ್

  ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಹೆಟ್ಮೆಯರ್

  RR 126/3 (17.5)

    

 • 05 Apr 2022 09:05 PM (IST)

  ಬಟ್ಲರ್-ಹೆಟ್ಮೆಯರ್ ಬ್ಯಾಟಿಂಗ್

  RR 118/3 (17)

    

  ಕೊನೆಯ 3 ಓವರ್​ಗಳು ಬಾಕಿ

 • 05 Apr 2022 09:01 PM (IST)

  ಸಿ....ಕ್ಸ್

  ಸಿರಾಜ್ ಎಸೆತದಲ್ಲಿ ಲೆಗ್​ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹೆಟ್ಮೆಯರ್

  RR 114/3 (16.3)

    

 • 05 Apr 2022 08:58 PM (IST)

  RR 107/3 (16)

  ಕೊನೆಯ 4 ಓವರ್​ಗಳು ಬಾಕಿ

  ಕ್ರೀಸ್​ನಲ್ಲಿ ಜೋಸ್ ಬಟ್ಲರ್-ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್

 • 05 Apr 2022 08:57 PM (IST)

  15 ಓವರ್ ಮುಕ್ತಾಯ

  RR 106/3 (15.3)

    

 • 05 Apr 2022 08:50 PM (IST)

  14 ಓವರ್ ಮುಕ್ತಾಯ

  RR 99/3 (14)

    

  ಕ್ರೀಸ್​ನಲ್ಲಿ ಜೋಸ್ ಬಟ್ಲರ್-ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್

 • 05 Apr 2022 08:49 PM (IST)

  ಬ್ಯಾಕ್ ಟು ಬ್ಯಾಕ್ ಬೌಂಡರಿ

  ಹಸರಂಗ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಹೆಟ್ಮೆಯರ್

  RR 97/3 (13.4)

    

 • 05 Apr 2022 08:48 PM (IST)

  ವೆಲ್ಕಂ ಬೌಂಡರಿ

  ಹಸರಂಗ ಎಸೆತದಲ್ಲಿ ಆಫ್​ಸೈಡ್​ನತ್ತ ಬೌಂಡರಿ ಬಾರಿಸಿದ ಎಡಗೈ ಬ್ಯಾಟ್ಸ್​ಮನ್ ಹೆಟ್ಮೆಯರ್

  RR 93/3 (13.2)

    

 • 05 Apr 2022 08:39 PM (IST)

  RR 86/3 (12)

 • 05 Apr 2022 08:37 PM (IST)

  ಆರ್​ಸಿಬಿಗೆ 3ನೇ ಯಶಸ್ಸು

  ಹಸರಂಗ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಸಂಜು ಸ್ಯಾಮ್ಸನ್ (8)

 • 05 Apr 2022 08:35 PM (IST)

  ಸ್ಯಾಮ್​-ಸಿಕ್ಸ್

  ವನಿಂದು ಹಸರಂಗ ಎಸೆತದಲ್ಲಿ ಸೂಪರ್ ಸಿಕ್ಸ್ ಸಿಡಿಸಿದ ಸಂಜು ಸ್ಯಾಮ್ಸನ್

  RR 86/2 (11.2)

    

 • 05 Apr 2022 08:33 PM (IST)

  11 ಓವರ್ ಮುಕ್ತಾಯ

  RR 80/2 (11)

    

  ಕ್ರೀಸ್​ನಲ್ಲಿ ಜೋಸ್ ಬಟ್ಲರ್-ಸಂಜು ಸ್ಯಾಮ್ಸನ್ ಬ್ಯಾಟಿಂಗ್

 • 05 Apr 2022 08:27 PM (IST)

  ರಾಜಸ್ಥಾನ್ ರಾಯಲ್ಸ್ 3ನೇ ವಿಕೆಟ್ ಪತನ

  ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ದೇವದತ್ ಪಡಿಕ್ಕಲ್

  ಅದ್ಭುತ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ

  RR 76/3 (10)

    

 • 05 Apr 2022 08:18 PM (IST)

  ಬೂಮ್ ಬೂಮ್ ಬಟ್ಲರ್

  ಹಸರಂಗ ಎಸೆತದಲ್ಲಿ ಲಾಂಗ್​ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್

  RR 73/1 (9)

   

 • 05 Apr 2022 08:14 PM (IST)

  ಬೌಲಿಂಗ್ ಬದಲಾವಣೆ

  ವನಿಂದು ಹಸರಂಗಗೆ ಚೆಂಡು ನೀಡಿದ ಫಾಫ್ ಡುಪ್ಲೆಸಿಸ್

 • 05 Apr 2022 08:13 PM (IST)

  ಭರ್ಜರಿ ಸಿಕ್ಸ್

  ಡೇವಿಡ್ ವಿಲ್ಲಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ದೇವದತ್ ಪಡಿಕ್ಕಲ್

  RR 61/1 (8)

    

 • 05 Apr 2022 08:11 PM (IST)

  ಅರ್ಧಶತಕ ಪೂರೈಸಿದ ಆರ್​ಆರ್

  RR 54/1 (7.4)

    

 • 05 Apr 2022 08:07 PM (IST)

  ಬಟ್ಲರ್ ಸ್ಪೆಷಲ್

  ಆಕಾಶ್ ದೀಪ್ ಎಸೆತದಲ್ಲಿ ಲಾಂಗ್​ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್

 • 05 Apr 2022 08:06 PM (IST)

  ಕ್ಯಾಚ್ ಡ್ರಾಪ್

  ಆಕಾಶ್ ದೀಪ್ ಎಸೆತದಲ್ಲಿ ಬಟ್ಲರ್ ಭರ್ಜರಿ ಹೊಡೆತ

  ಬೌಂಡರಿ ಲೈನ್​ನಲ್ಲಿ ಕಷ್ಟಕರ ಕ್ಯಾಚ್ ಕೈಬಿಟ್ಟ ಡೇವಿಡ್ ವಿಲ್ಲಿ

 • 05 Apr 2022 08:02 PM (IST)

  ಪವರ್​ಪ್ಲೇ ಮುಕ್ತಾಯ: ಆರ್​ಸಿಬಿ ಭರ್ಜರಿ ಬೌಲಿಂಗ್

  RR 35/1 (6)

    

  ಕ್ರೀಸ್​ನಲ್ಲಿ ಜೋಸ್ ಬಟ್ಲರ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್

 • 05 Apr 2022 07:58 PM (IST)

  ಆರ್​ಸಿಬಿ ಭರ್ಜರಿ ಬೌಲಿಂಗ್

  RR 30/1 (5)

    

  ಕ್ರೀಸ್​ನಲ್ಲಿ ಜೋಸ್ ಬಟ್ಲರ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್

 • 05 Apr 2022 07:54 PM (IST)

  ಬೌಲಿಂಗ್​ನಲ್ಲಿ ಬದಲಾವಣೆ

  ಮೊಹಮ್ಮದ್ ಸಿರಾಜ್ ಬದಲಿಗೆ ಆಕಾಶ್ ದೀಪ್​ಗೆ ಚೆಂಡು ನೀಡಿದ ನಾಯಕ ಡುಪ್ಲೆಸಿಸ್

 • 05 Apr 2022 07:52 PM (IST)

  ಪಡಿಕ್ಕಲ್ ಪವರ್

  ವಿಲ್ಲಿ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ದೇವದತ್ ಪಡಿಕ್ಕಲ್

  RR 25/1 (4)

    

 • 05 Apr 2022 07:47 PM (IST)

  3 ಓವರ್ ಮುಕ್ತಾಯ

  RR 17/1 (3)

    

  ಕ್ರೀಸ್​ನಲ್ಲಿ ಜೋಸ್ ಬಟ್ಲರ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್

 • 05 Apr 2022 07:45 PM (IST)

  ಭರ್ಜರಿ ಸಿಕ್ಸ್

  ಸಿರಾಜ್ ಎಸೆತದಲ್ಲಿ ಲೆಗ್​ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ದೇವದತ್ ಪಡಿಕ್ಕಲ್

  RR 14/1 (2.3)

    

 • 05 Apr 2022 07:40 PM (IST)

  ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟ್ ಪತನ

  ಡೇವಿಡ್ ವಿಲ್ಲಿ ಎಸೆತದಲ್ಲಿ ಬೌಲ್ಡ್ ಆದ ಯಶಸ್ವಿ ಜೈಸ್ವಾಲ್ (4)

  RR 6/1 (1.5)

    

 • 05 Apr 2022 07:35 PM (IST)

  ಮೊದಲ ಓವರ್ ಮುಕ್ತಾಯ

  RR 2/0 (1)

    

  ಮೊದಲ ಓವರ್​ನಲ್ಲಿ ಕೇವಲ 1 ರನ್ ನೀಡಿದ ಸಿರಾಜ್

 • 05 Apr 2022 07:32 PM (IST)

  ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್ ಆರಂಭ

  ಆರಂಭಿಕರು:

  ಜೋಸ್ ಬಟ್ಲರ್

  ಯಶಸ್ವಿ ಜೈಸ್ವಾಲ್

  ಬೌಲರ್:- ಮೊಹಮ್ಮದ್ ಸಿರಾಜ್

 • 05 Apr 2022 07:12 PM (IST)

  ಕಣಕ್ಕಿಳಿಯುವ ಕಲಿಗಳು

  ಉಭಯ ತಂಡಗಳ ಪ್ಲೇಯಿಂಗ್ 11 ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್

  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಶೆರ್ಫಾನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್

 • 05 Apr 2022 07:04 PM (IST)

  ಉಭಯ ತಂಡಗಳ ಪ್ಲೇಯಿಂಗ್ 11

  ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್

  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಶೆರ್ಫಾನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್

 • 05 Apr 2022 07:01 PM (IST)

  ಟಾಸ್ ಗೆದ್ದ RCB

  ಟಾಸ್ ಗೆದ್ದ RCB ನಾಯಕ ಫಾಫ್ ಡುಪ್ಲೆಸಿಸ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

 • 05 Apr 2022 06:58 PM (IST)

  RCB ಪಡೆಗಳ ಆಗಮನ

 • 05 Apr 2022 06:29 PM (IST)

  ಮೂವರು ಮಿಂಚಲಿ, ಆರ್​ಸಿಬಿ ಗೆಲ್ಲಲಿ

  ಚಹಲ್ ವಿಕೆಟ್ ಪಡೆಯಬೇಕು, ಪಡಿಕ್ಕಲ್ ರನ್​ಗಳಿಸಬೇಕು, ಸೈನಿ ಉತ್ತಮವಾಗಿ ಬೌಲಿಂಗ್ ಮಾಡಬೇಕು...ಆದರೆ ಆರ್​ಸಿಬಿ ಗೆಲ್ಲಲೇಬೇಕು ಎಂದ ದಾನಿಶ್ ಸೇಠ್.

  ದೇವದತ್ ಪಡಿಕ್ಕಲ್ ಯುಜುವೇಂದ್ರ ಚಹಲ್ ನವದೀಪ್ ಸೈನಿ ಮಾಜಿ ಆರ್​ಸಿಬಿ ಆಟಗಾರರಾದ ಕಾರಣ ಈ ಮೂವರು ಮಿಂಚಲಿ, ಆರ್​ಸಿಬಿ ಗೆಲ್ಲಲಿ ಎಂದು ಟ್ವೀಟ್ ಮಾಡಿರುವ ದಾನಿಶ್ ಸೇಠ್.

 • 05 Apr 2022 06:22 PM (IST)

  ಪಾಯಿಂಟ್ ಟೇಬಲ್

 • 05 Apr 2022 06:16 PM (IST)

  ಕಣದಲ್ಲಿ RCB ಮಾಜಿ ಕಲಿಗಳು

  ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ಮಾಜಿ ಆರ್​ಸಿಬಿ ಆಟಗಾರರು

  - ದೇವದತ್ ಪಡಿಕ್ಕಲ್

  -ಯುಜುವೇಂದ್ರ ಚಹಲ್

  -ನವದೀಪ್ ಸೈನಿ

 • 05 Apr 2022 06:13 PM (IST)

  ರಾಯಲ್ ಕದನ: ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು

Published On - Apr 05,2022 6:09 PM

Follow us on

Related Stories

Most Read Stories

Click on your DTH Provider to Add TV9 Kannada