ಇಂದು ನಡೆದ ಐಪಿಎಲ್ನ 60ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 112 ರನ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಜೈಪುರ್ನ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ ಆರ್ಸಿಬಿ ದಾಖಲೆಯ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಾಯಕ ಫಾಫ್ ಹಾಗೂ ಮ್ಯಾಕ್ಸ್‌ವೆಲ್ ಅವರ ಅರ್ಧಶತಕದ ಜೊತೆಗೆ ಕೊನೆಯ 2 ಓವರ್‌ಗಳಲ್ಲಿ ಅನುಜ್ ರಾವುತ್ ಆಡಿದ ಅದ್ಭುತ ಬ್ಯಾಟಿಂಗ್ನಿಂದಾಗಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಗುರಿ ಬೆನ್ನಟಿದ್ದ ರಾಜಸ್ಥಾನ್ ಮೊದಲ ಓವರ್ನಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಕೇವಲ 59 ರನ್‌ಗಳಿಗೆ ಆಲೌಟ್ ಆಯಿತು.
ಮ್ಯಾಕ್ಸ್‌ವೆಲ್ 10ನೇ ಓವರ್‌ನ 5ನೇ ಎಸೆತದಲ್ಲಿ ಶಿಮ್ರಾನ್ ಹೆಟ್ಮೆಯರ್ ಅವರನ್ನು 35 ರನ್‌ಗಳಿಗೆ ಔಟ್ ಮಾಡಿದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಕರ್ಣ್ ಶರ್ಮಾ ಆಡಮ್ ಜಂಪಾ ಅವರನ್ನು ಬೇಟೆಯಾಡಿದರು. ಅದೇ ಓವರ್‌ನ ಮೂರನೇ ಎಸೆತದಲ್ಲಿ ಆಸಿಫ್ ಕೂಡ ಔಟಾದರು ಮತ್ತು ಇದರೊಂದಿಗೆ ರಾಜಸ್ಥಾನದ ಸಂಪೂರ್ಣ ಇನಿಂಗ್ಸ್ 10.3 ಓವರ್‌ಗಳಲ್ಲಿ 59 ರನ್‌ಗಳಿಗೆ ಕುಸಿಯಿತು. ಬೆಂಗಳೂರು 112 ರನ್‌ಗಳ ಜಯ ಸಾಧಿಸಿತು.
ಹೆಟ್ಮಾಯಿರ್ ವಿಕೆಟ್ ಬಳಿಕ ಬಂದ ಝಂಪಾ ಕೂಡ ಕೇವಲ 2 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ರಾಜಸ್ಥಾನಕ್ಕೆ ಭಾರಿ ಸೋಲಿನ ಭೀತಿ ಎದುರಾಗಿದೆ. ರಾಜಸ್ಥಾನ್ 8ನೇ ವಿಕೆಟ್ ಕಳೆದುಕೊಂಡಿದೆ. ಗರಿಷ್ಠ 35 ರನ್ ದಾಖಲಿಸಿದ್ದ ಹೆಟ್ಮಾಯಿರ್ ಔಟಾಗಿದ್ದಾರೆ.
ರಾಜಸ್ಥಾನಕ್ಕೆ ಮತ್ತೊಂದು ಪೆಟ್ಟು ಬಿದ್ದಿದ್ದು, ಇದೀಗ ಭಾರಿ ಸೋಲಿನ ಭೀತಿ ಹೆಚ್ಚಿದೆ. ರವಿಚಂದ್ರನ್ ಅಶ್ವಿನ್ ಡೈಮಂಡ್ ಡಕ್ ಔಟ್ ಆಗಿದ್ದಾರೆ.
ಕರಣ್ ಬೌಲ್ ಮಾಡಿದ 8ನೇ ಓವರ್ನಲ್ಲಿ ಹೆಟ್ಮಾಯಿರ್ ಸತತ 3 ಸಿಕ್ಸರ್ ಸಿಡಿಸಿದರು.
ಈ ಓವರ್ನಲ್ಲಿ 19 ರನ್ ಬಂದವು.
ಅಲ್ಲದೆ ಇದೇ ಓವರ್ನಲ್ಲಿ ರಾಜಸ್ಥಾನ್ ಅರ್ಧಶತಕ ಕೂಡ ಪೂರ್ಣಗೊಳಿಸಿತು.
ರೂಟ್ ವಿಕೆಟ್ ಬಳಿಕ ಬಂದ ಜುರೇಲ್ ಕೂಡ 1 ರನ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಬ್ರೆಸ್ವೆಲ್ ಬೌಲ್ ಮಾಡಿದ 7ನೇ ಓವರ್‌ನ ಕೊನೆಯ ಎಸೆತದಲ್ಲಿ ಜುರೇಲ್ ಬೌಂಡರಿ ಲೈನ್ ಬಳಿ ಕ್ಯಾಚಿತ್ತು ಔಟಾದರು.
ರಾಜಸ್ಥಾನ್ 31/6
ಪರ್ನೆಲ್ ಬೌಲ್ ಮಾಡಿದ ಪವರ್ ಪ್ಲೇಯ ಕೊನೆಯ ಓವರ್ನಲ್ಲಿ ರೂಟ್ ವಿಕೆಟ್ ಒಪ್ಪಿಸಿದ್ದಾರೆ
ಓವರ್‌ನ 3ನೇ ಎಸೆತದಲ್ಲಿ ರೂಟ್ ಎಲ್ಬಿ ಬಲೆಗೆ ಬಿದ್ದರು
ರಾಜಸ್ಥಾನ್ 28/5
ಪಡಿಕಲ್ ವಿಕೆಟ್ ಬಳಿಕ ಬಂದ ಹೆಟ್ಮಾಯಿರ್ ಲಾಂಗ್ ಆಫ್ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದರು.
ರಾಜಸ್ಥಾನ್ 4ನೇ ವಿಕೆಟ್ ಪತನವಾಗಿದೆ
ಬ್ರೆಸ್ವೆಲ್ ಬೌಲ್ ಮಾಡಿದ 5ನೇ ಓವರ್‌ನ 2ನೇ ಎಸೆತದಲ್ಲಿ ಪಡಿಕಲ್ ವಿಕೆಟ್ ಉರುಳಿಸಿದ್ದಾರೆ
ಪಡಿಕಲ್, ಸಿರಾಜ್ಗೆ ಕ್ಯಾಚಿತ್ತು ಔಟಾದರು
ರಾಜಸ್ಥಾನ್ 20/4
ಸಿರಾಜ್ ಬೌಲ್ ಮಾಡಿದ 3ನೇ ಓವರ್‌ನ 3ನೇ ಎಸೆತವನ್ನು ರೂಟ್ ಬೌಂಡರಿಗಟ್ಟಿದರು.
ಇದೇ ಓವರ್ನಲ್ಲಿ ರೂಟ್ ಎಲ್ಬಿ ಔಟಾಗಿದ್ದರು. ಆದರೆ ರಿವ್ಯೂವ್ನಿಂದ ಬದುಕುಳಿದರು.
ಪರ್ನೆಲ್ ಬೌಲ್ ಮಾಡಿದ 2ನೇ ಓವರ್‌ನ 4ನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಉರುಳಿದೆ.
ನಾಯಕ ಸಂಜು ಕ್ಯಾಚಿತ್ತು ವಿಕೆಟ್ ಒಪ್ಪಿಸಿದ್ದಾರೆ.
ಪರ್ನೆಲ್ಗೆ ಒಂದೇ ಓವರ್ನಲ್ಲಿ 2 ವಿಕೆಟ್ ಸಿಕ್ಕಿವೆ.
ಪರ್ನೆಲ್ ಬೌಲ್ ಮಾಡಿದ 2ನೇ ಓವರ್‌ನ 3ನೇ ಎಸೆತದಲ್ಲಿ ಬಟ್ಲರ್ ಕ್ಯಾಚಿತ್ತು ಔಟಾದರು.
ಬಟ್ಲರ್ ಖಾತೆ ಕೂಡ ತೆರೆಯಲಿಲ್ಲ.
ರಾಜಸ್ಥಾನ್ 6/2
ರಾಜಸ್ಥಾನ್ ಮೊದಲ ವಿಕೆಟ್ ಪತನವಾಗಿದೆ
ಸಿರಾಜ್ ಬೌಲ್ ಮಾಡಿದ ಮೊದಲ ಓವರ್ನಲ್ಲಿ ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಫಾಫ- ಮ್ಯಾಕ್ಸಿ ಅರ್ಧಶತಕd ನೆರವಿನಿಂದ ಆರ್ಸಿಬಿ ನಿಗಧಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿದೆ.
20ನೇ ಓವರ್ನಲ್ಲಿ 18 ರನ್ ಬಂದವು
ಈ ಓವರ್‌ನ 4 ಮತ್ತು 5ನೇ ಎಸೆತವನ್ನು ಸಿಕ್ಸರ್ಗಟ್ಟಿದ ರಾವುತ್ ಕೊನೆಯ ಎಸೆತವನ್ನು ಬೌಂಡರಿಗಟ್ಟಿದರು.
ಸಂದೀಪ್ ಬೌಲ್ ಮಾಡಿದ 18ನೇ ಓವರ್‌ನ 3ನೇ ಎಸೆತದಲ್ಲಿ ಮ್ಯಾಕ್ಸ್‌ವೆಲ್ ಔಟಾದರು.
ಆರ್ಸಿಬಿ 137/5
ಚಹಲ್ ಬೌಲ್ ಮಾಡಿದ 17ನೇ ಓವರ್‌ನ 5ನೇ ಎಸೆತವನ್ನು ಸಿಕ್ಸರ್ಗಟ್ಟಿದ ಮ್ಯಾಕ್ಸಿ ತಮ್ಮ ಅರ್ಧಶತಕ ಪೂರೈಸಿದರು.
ಆರ್ಸಿಬಿ 135/4
ಆರ್ಸಿಬಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದೆ
ಝಂಪಾ ಬೌಲ್ ಮಾಡಿದ 16ನೇ ಓವರ್‌ನ 3ನೇ ಎಸೆತದಲ್ಲಿ ಕಾರ್ತಿಕ್ ಎಲ್ಬಿ ಬಲೆಗೆ ಬಿದ್ದರು
ಕಾರ್ತಿಕ್ ಖಾತೆ ಕೂಡ ತೆರೆಯಲಿಲ್ಲ.
ಫಾಫ್ ವಿಕೆಟ್ ಬಳಿಕ ಬಂದಿದ್ದ ಮಹಿಪಾಲ್ ಕೇವಲ 1 ರನ್ಗೆ ಸುಸ್ತಾಗಿದ್ದಾರೆ.
ಝಂಪಾ ಬೌಲ್ ಮಾಡಿದ 16ನೇ ಓವರ್‌ನ ಮೊದಲ ಎಸೆತದಲ್ಲೇ ಮಹಿಪಾಲ್ ಕ್ಯಾಚಿತ್ತು ಔಟಾದರು.
ಆರ್ಸಿಬಿ 120/3
ಅರ್ಧಶತಕ ಬಾರಿಸಿದ ಬೆನ್ನಲ್ಲೇ ಫಾಫ್ ಕ್ಯಾಚಿತ್ತು ಔಟಾದರು
ಆರ್ಸಿಬಿ 119/2
ಆಸೀಪ್ ಬೌಲ್ ಮಾಡಿದ 15ನೇ ಓವರ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ ಫಾಫ್ ತಮ್ಮ ಅರ್ಧಶತಕ ಪೂರೈಸಿದರು.
14ನೇ ಓವರ್‌ನ 2ನೇ ಎಸೆತದಲ್ಲಿ ಸಿಂಗಲ್ ತೆಗದುಕೊಂಡ ಫಾಫ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಇದರೊಂದಿಗೆ ಫಾಫ್ ಹಾಗೂ ಮ್ಯಾಕ್ಸಿ ನಡುವೆ ಅರ್ಧಶತಕದ ಜೊತೆಯಾಟ ಕೂಡ ಬಂತು.
ಹಾಗೆಯೇ ಓವರ್‌ನ 4ನೇ ಎಸೆತವನ್ನು ಮ್ಯಾಕ್ಸಿ ಸಿಕ್ಸರ್ಗಟ್ಟಿದರು.
13ನೇ ಓವರ್ನಲ್ಲಿ 2 ಬೌಂಡರಿ ಬಂತು
ಸಂದೀಪ್ ಬೌಲ್ ಮಾಡಿದ ಈ ಓವರ್‌ನ 4 ಮತ್ತು 5ನೇ ಎಸೆತವನ್ನು ಮ್ಯಾಕ್ಸಿ ಬೌಂಡರಿಗಟ್ಟಿದರು
13 ಓವರ್ ಅಂತ್ಯಕ್ಕೆ 98/1
ಆರ್ಸಿಬಿ ಇನ್ನಿಂಗ್ಸ್ನ 12 ಓವರ್ ಮುಗಿದಿದೆ.
ಈ ಎರಡು ಓವರ್‌ಗಳಲ್ಲಿ ಯಾವುದೇ ರನ್ ಬಂದಿಲ್ಲ.
ರಾಜಸ್ಥಾನ್ ಸ್ಪಿನ್ನರ್ಗಳಿಂದ ಉತ್ತಮ ಬೌಲಿಂಗ್ ಕಂಡುಬರುತ್ತಿದೆ
ಆರ್ಸಿಬಿ 84/1
ಝಂಪಾ ಬೌಲ್ ಮಾಡಿದ 10ನೇ ಓವರ್‌ನ 2ನೇ ಎಸೆತವನ್ನು ಮ್ಯಾಕ್ಸಿ ಮಿಡ್ ವಿಕೆಟ್ನಲ್ಲಿ ಬೌಂಡರಿಗಟ್ಟಿದರು.
ಚಹಲ್ ಬೌಲ್ ಮಾಡಿದ 9ನೇ ಓವರ್‌ನ ಕೊನೆಯ ಎಸೆತದಲ್ಲಿ ಮ್ಯಾಕ್ಸಿ ಬೌಂಡರಿ ಹೊಡೆದರು
9 ಓವರ್ ಅಂತ್ಯಕ್ಕೆ 71/1
8 ಓವರ್ ಅಂತ್ಯಕ್ಕೆ ಆರ್ಸಿಬಿ 61/1
ಅಶ್ವಿನ್ ಬೌಲ್ ಮಾಡಿದ 8ನೇ ಓವರ್‌ನ ಕೊನೆಯ ಎಸೆತವನ್ನು ಮ್ಯಾಕ್ಸ್‌ವೆಲ್ ಸಿಕ್ಸರ್ಗಟ್ಟಿದರು.
7ನೇ ಓವರ್‌ನ ಕೊನೆಯ ಎಸೆತದಲ್ಲಿ ಕೊಹ್ಲಿ ಕ್ಯಾಚಿತ್ತು ಔಟಾದರು
ಆರ್ಸಿಬಿ 50/1
7ನೇ ಓವರ್‌ನ 5ನೇ ಎಸೆತದಲ್ಲಿ ಸಿಂಗಲ್ ತೆಗೆದ ಫಾಫ್ ಆರ್ಸಿಬಿ ಮೊತ್ತವನ್ನು 50ರ ಗಡಿ ದಾಟಿಸಿದರು.
ಈ ಓವರ್ನಲ್ಲಿ ಫಾಫ್ 1 ಬೌಂಡರಿ ಬಾರಿಸಿದರು.
ಆರ್ಸಿಬಿಯ ಪವರ್ ಪ್ಲೇ ಮುಗಿದಿದ್ದು, ಈ 6 ಓವರ್‌ಗಳಲ್ಲಿ ಆರ್ಸಿಬಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 42 ರನ್ ಬಾರಿಸಿದೆ. ಈ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಂತು.
ಝಂಪಾ ಬೌಲ್ ಮಾಡಿದ 4ನೇ ಓವರ್‌ನ ಮೊದಲ ಎಸೆತವನ್ನು ಪಾಯಿಂಟ್ ದಿಕ್ಕಿನಲ್ಲಿ ಬೌಂಡರಿಗಟ್ಟಿದ ಫಾಫ್, 4ನೇ ಎಸೆತವನ್ನು ಸಿಕ್ಸ್ಗಟ್ಟಿದರು.
ಆರ್ಸಿಬಿ ಇನ್ನಿಂಗ್ಸ್ ನಿಧಾನಗತಿಯಲ್ಲಿ ಸಾಗುತ್ತಿದೆ.
2 ಮತ್ತು 3ನೇ ಓವರ್ನಲ್ಲಿ ಯಾವುದೇ ಬೌಂಡರಿ ಬಂದಿಲ್ಲ
ಆರ್ಸಿಬಿ 17/0
ಆರ್ಸಿಬಿ ಬ್ಯಾಟಿಂಗ್ ಆರಂಭಿಸಿದ್ದು, ಕೊಹ್ಲಿ- ಫಾಫ್ ಬ್ಯಾಟಿಂಗ್ ಆರಂಭಿಸಿದ್ದಾರೆ
ಸಂದೀಪ್ ಬೌಲ್ ಮಾಡಿದ ಮೊದಲ ಓವರ್ನಲ್ಲಿ ಕೊಹ್ಲಿ ಬೌಂಡರಿ ಬಾರಿಸಿದರು.
ಆರ್ಸಿಬಿ 9/0
ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಮೈಕೆಲ್ ಬ್ರೇಸ್‌ವೆಲ್, ವೇಯ್ನ್ ಪಾರ್ನೆಲ್, ಕರಣ್ ಶರ್ಮಾ, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಜೋ ರೂಟ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ಆರ್ ಅಶ್ವಿನ್, ಆಡಮ್ ಝಂಪಾ, ಸಂದೀಪ್ ಯರ್ಮಾ, ಆಸಿಫ್ ಮತ್ತು ಯುಜ್ವೇಂದ್ರ ಚಹಾಲ್
ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಐಪಿಎಲ್ನ 60 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಪ್ಲೇಆಫ್‌ನಲ್ಲಿ ತಮ್ಮ ಭರವಸೆಯನ್ನು ಜೀವಂತವಾಗಿರಿಸಲು ಎರಡೂ ತಂಡಗಳು ಗೆಲ್ಲಲೇಬೇಕಾದ ಒತ್ತಡದಲ್ಲಿವೆ.
Published On - 2:45 pm, Sun, 14 May 23