Tony de Zorzi: ಟೀಮ್ ಇಂಡಿಯಾ ವಿರುದ್ಧ ಸೆಂಚುರಿ ಸಿಡಿಸಿ ದಾಖಲೆ ಬರೆದ ಟೋನಿ
SA vs IND 2nd ODI: 212 ರನ್ಗಳ ಸುಲಭ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡಕ್ಕೆ ರೀಝ ಹೆಂಡ್ರಿಕ್ಸ್ ಹಾಗೂ ಟೋನಿ ಡಿ ಝೋರ್ಝಿ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 130 ರನ್ ಬಾರಿಸಿ ಹೆಂಡ್ರಿಕ್ಸ್ (52) ಔಟಾಗಿದ್ದರು. ಆದರೆ ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದ ಟೋನಿ ಡಿ ಝೋರ್ಝಿ 122 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 119 ರನ್ ಬಾರಿಸಿದರು.
ಗೆಬ್ಬೆಗಾದ ಸೆಂಟ್ ಜಾರ್ಜ್ ಪಾರ್ಕ್ನಲ್ಲಿ ನಡೆದ ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ (Team India) ಪರ ಸಾಯಿ ಸುದರ್ಸನ್ (62) ಹಾಗೂ ಕೆಎಲ್ ರಾಹುಲ್ (56) ಅರ್ಧಶತಕ ಬಾರಿಸಿದ್ದರು. ಇದಾಗ್ಯೂ 46.2 ಓವರ್ಗಳಲ್ಲಿ ಟೀಮ್ ಇಂಡಿಯಾವನ್ನು 211 ರನ್ಗಳಿಗೆ ಆಲೌಟ್ ಮಾಡುವಲ್ಲಿ ಸೌತ್ ಆಫ್ರಿಕಾ ಬೌಲರ್ಗಳು ಯಶಸ್ವಿಯಾಗಿದ್ದರು.
212 ರನ್ಗಳ ಸುಲಭ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡಕ್ಕೆ ರೀಝ ಹೆಂಡ್ರಿಕ್ಸ್ ಹಾಗೂ ಟೋನಿ ಡಿ ಝೋರ್ಝಿ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 130 ರನ್ ಬಾರಿಸಿ ಹೆಂಡ್ರಿಕ್ಸ್ (52) ಔಟಾಗಿದ್ದರು. ಆದರೆ ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದ ಟೋನಿ ಡಿ ಝೋರ್ಝಿ 122 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 119 ರನ್ ಬಾರಿಸಿದರು. ಈ ಶತಕದ ನೆರವಿನಿಂದ ಸೌತ್ ಆಫ್ರಿಕಾ ತಂಡವು 42.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿಮುಟ್ಟುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿ ಮಿಂಚಿದ್ದ ಟೋನಿ ಹಲವು ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡರು. ಅಂದರೆ ಕಳೆದೊಂದು ದಶಕದಿಂದ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಶತಕ ಬಾರಿಸಿದ ಮೂರನೇ ಸೌತ್ ಆಫ್ರಿಕಾದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆ ಟೋನಿ ಡಿ ಝೋರ್ಝಿ ಪಾತ್ರರಾದರು.
ಇದಕ್ಕೂ ಮುನ್ನ ಕ್ವಿಂಟನ್ ಡಿಕಾಕ್ ಹಾಗೂ ಹಾಶಿಮ್ ಆಮ್ಲ ಈ ಸಾಧನೆ ಮಾಡಿದ್ದರು. ಅಷ್ಟೇ ಅಲ್ಲದೆ ಸೆಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಶತಕ ಬಾರಿಸಿದ ಸೌತ್ ಆಫ್ರಿಕಾದ ಮೊದಲ ಬ್ಯಾಟರ್ ಎಂಬ ವಿಶೇಷ ದಾಖಲೆ ಕೂಡ ಟೋನಿ ಪಾಲಾಯಿತು. ಈ ಮೂಲಕ ತಮ್ಮ 4ನೇ ಏಕದಿನ ಪಂದ್ಯದಲ್ಲೇ ಸೌತ್ ಆಫ್ರಿಕಾ ತಂಡದ 26 ವರ್ಷದ ಯುವ ಬ್ಯಾಟರ್ ಟೋನಿ ಡಿ ಝೋರ್ಝಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಟೋನಿ ಡಿ ಝೋರ್ಝಿ , ರೀಝ ಹೆಂಡ್ರಿಕ್ಸ್ , ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ , ಐಡೆನ್ ಮಾರ್ಕ್ರಾಮ್ (ನಾಯಕ) , ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್) , ಡೇವಿಡ್ ಮಿಲ್ಲರ್ , ವಿಯಾನ್ ಮುಲ್ಡರ್ , ಕೇಶವ್ ಮಹಾರಾಜ್ , ನಾಂಡ್ರೆ ಬರ್ಗರ್ , ಲಿಜಾದ್ ವಿಲಿಯಮ್ಸ್ , ಬ್ಯೂರಾನ್ ಹೆಂಡ್.
ಇದನ್ನೂ ಓದಿ: IPL 2024 RCB Squad: RCB ಹೊಸ ತಂಡ ಹೀಗಿದೆ
ಟೀಮ್ ಇಂಡಿಯಾ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ , ಸಾಯಿ ಸುದರ್ಸನ್, ತಿಲಕ್ ವರ್ಮಾ , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ಕೆಎಲ್ ರಾಹುಲ್ (ನಾಯಕ) , ರಿಂಕು ಸಿಂಗ್ , ಅಕ್ಷರ್ ಪಟೇಲ್ , ಅರ್ಷ್ದೀಪ್ ಸಿಂಗ್ , ಅವೇಶ್ ಖಾನ್ , ಕುಲದೀಪ್ ಯಾದವ್ , ಮುಕೇಶ್ ಕುಮಾರ್.