ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) ಶುರುವಾಗಿದೆ. 6 ತಂಡಗಳ ನಡುವಣ ಟೆನಿಸ್ ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದಿದ್ದು ಮಾಸ್ಟರ್ಸ್ XI ಮತ್ತು ಖಿಲಾಡಿ XI ತಂಡಗಳು. ಇಲ್ಲಿ ಮಾಸ್ಟರ್ಸ್ ತಂಡವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಮುನ್ನಡೆಸಿದರೆ, ಖಿಲಾಡಿ ತಂಡದ ಸಾರಥ್ಯವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ವಹಿಸಿಕೊಂಡಿದ್ದರು.
ಒಂದೆಡೆ ಕ್ರಿಕೆಟಿಗರಿದ್ದರೆ, ಮತ್ತೊಂದೆಡೆ ಕಲಾವಿದರು ಕಣಕ್ಕಿಳಿದಿದ್ದರು. ಅದರಲ್ಲೂ ಸಚಿನ್ ತೆಂಡೂಲ್ಕರ್ ಅವರ ತಂಡದಲ್ಲಿ ಜಮ್ಮು-ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕ ಅಮೀರ್ ಹುಸೇನ್ ಲೋನ್ ಅವರನ್ನು ಆಡಿದ್ದು ವಿಶೇಷವಾಗಿತ್ತು.
ಈ ಪಂದ್ಯದಲ್ಲಿ ಖಾಲಿಡಿ ನಂಬರ್ 1 ಖ್ಯಾತಿಯ ಅಕ್ಷಯ್ ಕುಮಾರ್ ಸಚಿನ್ ತೆಂಡೂಲ್ಕರ್‌ಗೆ ಬೌಲಿಂಗ್ ಮಾಡಿದರು. ಇದೇ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಕೂಡ ಗಮನ ಸೆಳೆದಿದ್ದರು. ಇದಾಗ್ಯೂ ಸಚಿನ್ ಅವರನ್ನು ಔಟ್ ಮಾಡುವಲ್ಲಿ ಹಿಂದಿ ಬಿಗ್ ಬಾಸ್ ವಿನ್ನರ್ ಮುನವರ್ ಫಾರೂಖಿ ಯಶಸ್ವಿಯಾದರು.
ಮುನವರ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ ನೀಡಲು ಯತ್ನಿಸಿದ ಸಚಿನ್ ತೆಂಡೂಲ್ಕರ್ ಸುಲಭ ಕ್ಯಾಚ್ ನೀಡಿದರು. ಇತ್ತ ಕ್ರಿಕೆಟ್ ದೇವರು ಔಟ್ ಆಗುತ್ತಿರುವುದು ಖುದ್ಧು ಮುನವರ್ಗೂ ನಂಬಲಾಗಲಿಲ್ಲ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Munawar took the wicket of Sachin#MunawarFaruqui pic.twitter.com/Wvjt350RDy
— waSu (MKJW) (@wk1437272) March 6, 2024
200 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಚಿನ್ ಔಟಾಗುತ್ತಿದ್ದಂತೆ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿದ್ದು ವಿಶೇಷ. ಇನ್ನು ಖಿಲಾಡಿ ಇಲೆವೆನ್ ವಿರುದ್ಧದ ಈ ಪಂದ್ಯವನ್ನು ಮಾಸ್ಟರ್ಸ್ ಇಲೆವೆನ್ 5 ರನ್ಗಳಿಂದ ಗೆದ್ದುಕೊಂಡಿತು.
ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಎಂಬುದು ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ. ದೇಶದ ಅತ್ಯುತ್ತಮ ಟೆನಿಸ್ ಬಾಲ್ ಕ್ರಿಕೆಟರುಗಳಿಗೆ ವೇದಿಕೆ ಕಲ್ಪಿಸಲು ಈ ಟೂರ್ನಿಯನ್ನು ಶುರು ಮಾಡಲಾಗಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ 6 ತಂಡಗಳನ್ನು ಸಿನಿಮಾ ತಾರೆಯರು ಖರೀದಿಸಿರುವುದು ವಿಶೇಷ. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯುವ ತಂಡಗಳು ಮತ್ತು ಅದರ ಮಾಲೀಕರು ವಿವರ ಈ ಕೆಳಗಿನಂತಿದೆ.
ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ