ಶಾಹೀನ್ ಅಫ್ರಿದಿಯನ್ನು ಎದುರಿಸೋದು ಹೇಗೆ: ಟೀಮ್ ಇಂಡಿಯಾಗೆ ಅಮೂಲ್ಯ ಸಲಹೆ ನೀಡಿದ ಸಚಿನ್

| Updated By: ಝಾಹಿರ್ ಯೂಸುಫ್

Updated on: Oct 22, 2022 | 6:53 PM

Sachin Tendulkar: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಸಚಿನ್ ತೆಂಡೂಲ್ಕರ್ ನೀಡಿರುವ ಅತ್ಯಮೂಲ್ಯ ಸಲಹೆ ಫಲಪ್ರದವಾಗಲಿದೆಯಾ ಕಾದು ನೋಡಬೇಕಿದೆ.

ಶಾಹೀನ್ ಅಫ್ರಿದಿಯನ್ನು ಎದುರಿಸೋದು ಹೇಗೆ: ಟೀಮ್ ಇಂಡಿಯಾಗೆ ಅಮೂಲ್ಯ ಸಲಹೆ ನೀಡಿದ ಸಚಿನ್
Shaheen Afridi-Sachin Tendulkar
Follow us on

T20 World Cup 2022: ಭಾರತ-ಪಾಕಿಸ್ತಾನ್ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯದಲ್ಲಿ ಎಲ್ಲರ ಕಣ್ಣು ಶಾಹೀನ್ ಅಫ್ರಿದಿ (Shaheen Afridi) ಹಾಗೂ ಟೀಮ್ ಇಂಡಿಯಾ (Team India) ಆರಂಭಿಕರ ಮೇಲೆ ನೆಟ್ಟಿದೆ. ಏಕೆಂದರೆ 2021 ಟಿ20 ವಿಶ್ವಕಪ್​ನಲ್ಲಿ ಮೊದಲ ಓವರ್​ನಲ್ಲೇ ಯಶಸ್ಸು ಸಾಧಿಸುವ ಮೂಲಕ ಟೀಮ್ ಇಂಡಿಯಾ ಸೋಲಿಗೆ ಶಾಹೀನ್ ಅಫ್ರಿದಿ ಪ್ರಮುಖ ಕಾರಣಕರ್ತರಾಗಿದ್ದರು. ಇದೀಗ ಬರೋಬ್ಬರಿ ಒಂದು ವರ್ಷದ ಬಳಿಕ ಅಫ್ರಿದಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿಯೇ ಭಾರತೀಯ ಬ್ಯಾಟರ್​ಗಳು ಅಫ್ರಿದಿಯ ಇನ್​ಸ್ವಿಂಗ್, ಯಾರ್ಕರ್ ಎಸೆತಗಳನ್ನು ಹೇಗೆ ಎದುರಿಸಲಿದ್ದಾರೆ ಎಂಬ ಪ್ರಶ್ನೆಯೊಂದು ಮೂಡಿದೆ.

ಈ ಎಲ್ಲಾ ಗೊಂದಲಗಳನ್ನು ನಿವಾರಿಸಿಕೊಳ್ಳುವಂತೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾ ಆಟಗಾರರಿಗೆ ವಿಶೇಷ ಸಲಹೆಯನ್ನು ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸಚಿನ್​ಗೆ ಶಾಹೀನ್ ಅಫ್ರಿದಿ ಅವರ ಬೌಲಿಂಗ್ ಹೇಗೆ ಎದುರಿಸಬೇಕೆಂದು ಕೇಳಲಾಯಿತು.

ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿದ ಮಾಸ್ಟರ್ ಬ್ಲಾಸ್ಟರ್, ಶಾಹೀನ್ ಸಾಮಾನ್ಯವಾಗಿ ಬ್ಯಾಟರ್​ಗಳನ್ನು ಸ್ವಿಂಗ್ ಎಸೆತಗಳ ಮೂಲಕ ಕಾಡುತ್ತಾರೆ. ಹೀಗಾಗಿ ಅವರ ಎಸೆತಗಳನ್ನು ನೇರವಾಗಿ ಬಾರಿಸಲು ಪ್ರಯತ್ನಿಸಬೇಕೆಂದು ಸಚಿನ್ ತಿಳಿಸಿದ್ದಾರೆ.
ಶಾಹೀನ್ ಆಕ್ರಮಣಕಾರಿ ಬೌಲರ್ ಮತ್ತು ಅವರು ವಿಕೆಟ್‌ಗಳನ್ನು ಪಡೆಯಲು ಇಷ್ಟಪಡುತ್ತಾರೆ. ಅಲ್ಲದೆ ಅವರು ಹೆಚ್ಚಾಗಿ ಚೆಂಡನ್ನು ಪಿಚ್ ಮಾಡುತ್ತಾರೆ.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಶಾಹೀನ್​ಗೆ ಚೆಂಡನ್ನು ಸ್ವಿಂಗ್ ಮಾಡಲು ಬೌಲಿಂಗ್ ಮಾಡಲು ತನ್ನನ್ನು ತಾನೇ ಹಿಂದಕ್ಕೆ ಎಳೆದುಕೊಳ್ಳುವ ಕಲೆ ಗೊತ್ತಿದೆ. ಹಾಗೆಯೇ ಏರ್​ ಸ್ವಿಂಗ್ ಮತ್ತು ಪಿಚ್​ ಮೂಲಕ ಬ್ಯಾಟರ್‌ಗಳನ್ನು ಕಂಗೆಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಅಂತಹ ಬೌಲರ್​ಗಳನ್ನು ನಾವು V ಒಳಗೆ ಆಡುವ ತಂತ್ರ ಮಾಡಬೇಕು. ಅಂದರೆ ಚೆಂಡನ್ನು ನೇರವಾಗಿ ಹೊಡೆಯಲು ಮುಂದಾಗಬೇಕು ಎಂದು ತೆಂಡೂಲ್ಕರ್ ಹೇಳಿದರು.

ಇದೇ ವೇಳೆ ನೀವು ಆಡುವ ದಿನಗಳಲ್ಲಿ ಶಾಹೀನ್ ಅವರ ಸಾಮರ್ಥ್ಯದ ಬೌಲರ್ ಅನ್ನು ಎದುರಿಸಿದ್ದರೆ ನೀವು ಏನು ಮಾಡುತ್ತಿದ್ದೀರಿ ಎಂದು ಕೇಳಿದಾಗ, ನಗುತ್ತಾ ಉತ್ತರಿಸಿದ ಸಚಿನ್ “ನಾನು ಅವನನ್ನು ಎದುರಿಸುವುದಿಲ್ಲ ಎಂದು ನನಗೆ ತಿಳಿದಿರುವ ಕಾರಣ, ಆ ಬಗ್ಗೆ ಯೋಚನೆ ಮಾಡಲ್ಲ ಎಂದರು.

ಒಟ್ಟಿನಲ್ಲಿ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಸಚಿನ್ ತೆಂಡೂಲ್ಕರ್ ನೀಡಿರುವ ಅತ್ಯಮೂಲ್ಯ ಸಲಹೆ ಫಲಪ್ರದವಾಗಲಿದೆಯಾ ಕಾದು ನೋಡಬೇಕಿದೆ.