IPL 2023 Auction: ಒಬ್ಬ ಭಾರತೀಯನೂ ಇಲ್ಲ: ಐಪಿಎಲ್ 2023 ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆದ 5 ಪ್ಲೇಯರ್ಸ್ ಇವರೇ
Sam Curran: ಅಚ್ಚರಿ ಎಂದರೆ ಐಪಿಎಲ್ 2023 ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರರ ಪೈಕಿ ಒಬ್ಬ ಕೂಡ ಭಾರತೀಯನಿಲ್ಲ. ಹಾಗಾದರೆ ಈ ಬಾರಿ ಗರಿಷ್ಠ ಮೊತ್ತ ಪಡೆದ ಟಾಪ್ 5 ಪ್ಲೇಯರ್ಸ್ ಯಾರು?, ಯಾವ ಫ್ರಾಂಚೈಸಿ ಇವರನ್ನು ಖರೀದಿಸಿತು ಎಂಬುದನ್ನು ನೋಡೋಣ.
ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಗಾಗಿ ಕೇರಳದ ಕೊಚ್ಚಿನಲ್ಲಿ ನಡೆದ ಮಿನಿ ಹರಾಜು (Mini Auction) ಪ್ರಕ್ರಿಯೆ ಮುಕ್ತಾಯಗೊಂಡಿದೆ. ಎಲ್ಲ 10 ಫ್ರಾಂಚೈಸಿಗಳು ತಮಗೆ ಅಗತ್ಯವಿರುವ ಆಟಗಾರರನ್ನು ಖರೀದಿಸಲು ಹಣದ ಮಳೆಯನ್ನೇ ಸುರಿಸಿದರು. ಇದರಿಂದಾಗಿ ಈ ಬಾರಿ ಹಲವು ದಾಖಲೆ ಕೂಡ ನಿರ್ಮಾಣ ಆದವು. ಅಂದುಕೊಂಡಂತೆ ಈ ಬಾರಿ ಆಲ್ರೌಂಡರ್ಗಳ (All Rounder) ಪಾರುಪತ್ಯ ಹೆಚ್ಚುತ್ತಿದ್ದವು. ಪ್ರಮುಖವಾಗಿ ಇಂಗ್ಲೆಂಡ್ ತಂಡದ ಆಟಗಾರರಿಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಅಚ್ಚರಿ ಎಂದರೆ ಐಪಿಎಲ್ 2023 ಹರಾಜಿನಲ್ಲಿ (IPL 2023 Auction) ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರರ ಪೈಕಿ ಒಬ್ಬ ಕೂಡ ಭಾರತೀಯನಿಲ್ಲ. ಹಾಗಾದರೆ ಈ ಬಾರಿ ಗರಿಷ್ಠ ಮೊತ್ತ ಪಡೆದ ಟಾಪ್ 5 ಪ್ಲೇಯರ್ಸ್ ಯಾರು?, ಯಾವ ಫ್ರಾಂಚೈಸಿ ಇವರನ್ನು ಖರೀದಿಸಿತು ಎಂಬುದನ್ನು ನೋಡೋಣ.
ದಾಖಲೆ ಮೊತ್ತಕ್ಕೆ ಸ್ಯಾಮ್ ಕುರ್ರನ್ ಸೇಲ್:
ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕುರ್ರನ್ ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದರು. 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು. ಆದರೆ, ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡವು ಬರೋಬ್ಬರಿ 18.50 ಕೋಟಿ ರೂ. ನೀಡುವ ಮೂಲಕ ಸ್ಯಾಮ್ ಕುರ್ರನ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಸ್ಯಾಮ್ ಪಾಲಾಯಿತು.
ಕ್ಯಾಮ್ರೊನ್ ಗ್ರೀನ್:
ಆಸ್ಟ್ರೇಲಿಯಾ ತಂಡ ಪರ ಮಿಂಚುತ್ತಿರುವ ವೇಗದ ಬೌಲಿಂಗ್ ಆಲ್ರೌಂಡರ್ ಕ್ಯಾಮ್ರೊನ್ ಗ್ರೀನ್ ಅವರಿಗಾಗಿ ಫ್ರಾಂಚೈಸಿಗಳು ಮುಗಿ ಬಿದ್ದವು. 2 ಕೋಟಿ ಮೂಲಬೆಲೆಯಲ್ಲಿ ಕಾಣಿಸಿಕೊಂಡಿದ್ದ ಗ್ರೀನ್ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಕಠಿಣ ಪೈಪೋಟಿ ನಡೆದವು. ಅಂತಿಮವಾಗಿ ಕುರ್ರನ್ ಅವರನ್ನು ಕಳೆದುಕೊಂಡಿದ್ದ ಮುಂಬೈ ಇಂಡಿಯನ್ಸ್ ಕೊನೆಗೂ ಗ್ರೀನ್ ಅವರನ್ನು 17.50 ಕೋಟಿ ರೂಪಾಯಿಗೆ ಖರೀದಿ ಮಾಡಿತು.
Kyle Jamieson: ಕಳೆದ ಸೀಸನ್ನಲ್ಲಿ 15 ಕೋಟಿಗೆ ಸೇಲ್ ಆದ ಈ ಪ್ಲೇಯರ್ ಈಬಾರಿ ಹರಾಜಾಗಿದ್ದು ಕೇವಲ 1 ಕೋಟಿಗೆ
ಬೆನ್ ಸ್ಟೋಕ್ಸ್:
ಐಪಿಎಲ್ ಮಿನಿ ಹರಾಜಿನಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದ ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದರು. 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಟೋಕ್ಸ್ ಅವರನ್ನು ಸಿಎಸ್ಕೆ ತಂಡವು ಬರೋಬ್ಬರಿ 16. 25 ಕೋಟಿ ರೂ. ನೀಡಿ ಖರೀದಿಸಿತು. ಸ್ಟೋಕ್ಸ್ ಖರೀದಿಗೆ ಎಸ್ಆರ್ಹೆಚ್, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಪರಿಣಾಮ ಕೆಲವೇ ಕ್ಷಣಗಳಲ್ಲಿ ಬೆನ್ ಸ್ಟೋಕ್ಸ್ ಖರೀದಿಯ ಮೊತ್ತ 10 ಕೋಟಿಯನ್ನೂ ದಾಟಿತು. ಇದಾಗ್ಯೂ ಸಿಎಸ್ಕೆ ಫ್ರಾಂಚೈಸಿ ಜೊತೆ ಪೈಪೋಟಿ ಮುಂದುವರೆಸುವಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಎಸ್ಆರ್ಹೆಚ್ ಯಶಸ್ವಿಯಾಯಿತು. ಆದರೆ ಅಂತಿಮವಾಗಿ 16.25 ಕೋಟಿ ರೂ. ಬಿಡ್ ಮಾಡುವ ಮೂಲಕ ಸಿಎಸ್ಕೆ ತಂಡವು ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಿತು.
ನಿಕೋಲಸ್ ಪೂರನ್:
ಇದೊಂದು ಅಚ್ಚರಿ ನಿರ್ಧಾರ ಎನ್ನಬಹುದು. ವೆಸ್ಟ್ ಇಂಡೀಸ್ ವಿಕೆಟ್ ಕೀಪರ್, ಸ್ಪೋಟಕ ಬ್ಯಾಟರ್ ನಿಕೋಲಸ್ ಪೂರನ್ ದೊಡ್ಡ ಮೊತ್ತಕ್ಕೆ ಸೇಲ್ ಆದರು. 2 ಕೋಟಿ ಮೂಲಬೆಲೆ ಹೊಂದಿದ್ದ ಪೂರನ್ ಖರೀದಿಗೆ ಕಠಿಣ ಪೈಪೋಟಿ ನಡೆದವು. ಲಕ್ನೋ ಸೂಪರ್ ಜೇಂಟ್ಸ್ ಕೊನೆಯವರೆಗೂ ಕೈಬಿಡದೆ ಬರೋಬ್ಬರಿ 16 ಕೋಟಿಗೆ ಖರೀದಿ ಮಾಡಿತು. ಪೂರನ್ ಸದ್ಯ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಟಿ20 ವಿಶ್ವಕಪ್ನಲ್ಲೂ ಉತ್ತಮ ಪ್ರದರ್ಶನ ತೋರಲಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ನಾಯಕತ್ವದಿಂದಲೂ ಕೆಳಗಿಳಿದಿದ್ದರು. ಹೀಗಿದ್ದರೂ ಇವರು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದು ಅಚ್ಚರಿ ತಂದಿದೆ.
ಹ್ಯಾರಿ ಬ್ರೂಕ್:
ಐಪಿಎಲ್ ಸೀಸನ್ 16 ಹರಾಜಿನ ಮೊದಲ ಸುತ್ತಿನಲ್ಲಿ ಇಂಗ್ಲೆಂಡ್ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಕೋಟಿ ಮೊತ್ತಕ್ಕೆ ಹರಾಜಾದರು. 1.50 ಕೋಟಿ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ 23 ವರ್ಷದ ಯುವ ಸ್ಪೋಟಕ ದಾಂಡಿಗನನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು ಬರೋಬ್ಬರಿ 13.25 ಕೋಟಿ ರೂ. ನೀಡಿ ಖರೀದಿಸಿತು. ಇಂಗ್ಲೆಂಡ್ ಪರ ಕೇವಲ 17 ಟಿ20 ಇನಿಂಗ್ಸ್ ಆಡಿರುವ ಬ್ರೂಕ್ ಒಂದು ಅರ್ಧಶತಕದೊಂದಿಗೆ ಒಟ್ಟು 372 ರನ್ ಕಲೆಹಾಕಿದ್ದಾರೆ. ಈ ವೇಳೆ 15 ಸಿಕ್ಸ್ ಹಾಗೂ 30 ಫೋರ್ಗಳನ್ನೂ ಕೂಡ ಬಾರಿಸಿದ್ದಾರೆ. ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಬ್ರೂಕ್ ಇತ್ತೀಚೆಗೆ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದರು. ಇಂಗ್ಲೆಂಡ್ ಪರ ಕೇವಲ 4 ಟೆಸ್ಟ್ ಪಂದ್ಯಗಳಲ್ಲಿ 6 ಇನಿಂಗ್ಸ್ ಆಡಿರುವ 23 ರ ಹರೆಯದ ಬಲಗೈ ಬ್ಯಾಟರ್ ಕೇವಲ 521 ಎಸೆತಗಳನ್ನು ಎದುರಿಸಿ 480 ರನ್ ಬಾರಿಸಿದ್ದಾರೆ. ಈ ವೇಳೆ 12 ಸಿಕ್ಸ್ ಹಾಗೂ 55 ಫೋರ್ ಬಾರಿಸಿದ್ದಾರೆ.
ಐಪಿಎಲ್ ಮಿನಿಹರಾಜು ಪ್ರಕ್ರಿಯೆ ಲೈವ್
Published On - 8:01 am, Sat, 24 December 22