ಟೀಮ್ ಇಂಡಿಯಾ (Team India) ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದೇಶೀಯ ಅಂಗಳದಲ್ಲಿ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಜೆಕೆಸಿಎ ಮೈದಾನದಲ್ಲಿ ನಡೆದ ಕೂಚ್ ಬೆಹಾರ್ ಟ್ರೋಫಿ ಅಂಡರ್ 19 ಪಂದ್ಯದಲ್ಲಿ ಸಮಿತ್ ಅದ್ಭುತ ಆಲ್ರೌಂಡರ್ ಪ್ರದರ್ಶನ ನೀಡಿದರು. ಜಮ್ಮು-ಕಾಶ್ಮೀರ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ದ್ರಾವಿಡ್ ಪುತ್ರ ಹಾಗೂ ಕಾರ್ತಿಕೇಯ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೇ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಧ್ರುವ್ ಕಾರ್ತಿಕೇಯ 175 ಎಸೆತಗಳಲ್ಲಿ 21 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 163 ರನ್ ಗಳಿಸಿದರು. ಮತ್ತೊಂದೆಡೆ ಸಮಿತ್ 159 ಎಸೆತಗಳನ್ನು ಎದುರಿಸಿದ ಸಮಿತ್ 98 ರನ್‌ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದರು. ಈ ವೇಳೆ ಸಮಿತ್ ದ್ರಾವಿಡ್ ಬ್ಯಾಟ್ನಿಂದ 13 ಬೌಂಡರಿ ಮತ್ತು ಒಂದು ಸಿಕ್ಸ್ ಮೂಡಿ ಬಂದಿತ್ತು. ಪ್ರಭಾಕರ್ ಅಜೇಯ 66 ರನ್ ಮತ್ತು ಧೀರಜ್ ಅಜೇಯ 51 ರನ್ ಗಳಿಸಿದರು. ಇದರಿಂದಾಗಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 480 ರನ್ ಪೇರಿಸಿತು.
ಈ ಗುರಿಯನ್ನು ಬೆನ್ನತ್ತಿದ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 170 ರನ್‌ಗಳಿಗೆ ಆಲೌಟ್ ಆಗಿದೆ. ಇದಾದ ಬಳಿಕ ಕರ್ನಾಟಕ ತಂಡ ಫಾಲೋ ಆನ್ ನೀಡಿತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಜಮ್ಮು ಮತ್ತು ಕಾಶ್ಮೀರ ತಂಡ ವಿಶೇಷ ಸಾಧನೆ ಮಾಡಲು ಸಾಧ್ಯವಾಗದೆ 180 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಈ ಪಂದ್ಯದಲ್ಲಿ ಕರ್ನಾಟಕ ಅಂಡರ್ 19 ತಂಡವು ಇನಿಂಗ್ಸ್ ಹಾಗೂ 130 ರನ್ಗಳ ಭರ್ಜರಿ ಜಯ ಸಾಧಿಸಿದೆ.
Samit Dravid scored 98 runs against Jammu and Kashmir in Cooch Behar Trophy. (U19).pic.twitter.com/rJkEWYFnfp
— Mufaddal Vohra (@mufaddal_vohra) December 20, 2023
ವಿಶೇಷ ಎಂದರೆ ಈ ಪಂದ್ಯದಲ್ಲಿ ಬ್ಯಾಟಿಂಗ್ನೊಂದಿಗೆ ಮಿಂಚಿದ್ದ ಸಮಿತ್ ಆ ಬಳಿಕ ಬೌಲಿಂಗ್ನಲ್ಲೂ 2 ವಿಕೆಟ್ ಕಬಳಿಸಿದರು. ಈ ಮೂಲಕ ಕರ್ನಾಟಕ ಗೆಲುವಿನಲ್ಲಿ ಆಲ್ರೌಂಡರ್ ಪಾತ್ರ ನಿಭಾಯಿಸಿದರು. ಇದೀಗ ಸಮಿತ್ ದ್ರಾವಿಡ್ ಆಕರ್ಷಕ ಬ್ಯಾಟಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರ್ನಾಟಕ ಅಂಡರ್ 19 ತಂಡ: ಧೀರಜ್ ಗೌಡ (ನಾಯಕ), ಧ್ರುವ್ ಪ್ರಭಾಕರ್, ಕಾರ್ತಿಕ್, ಶಿವಂ ಸಿಂಗ್, ಹರ್ಷಿಲ್ ಧರ್ಮಾನಿ (ವಿಕೆಟ್ ಕೀಪರ್), ಸಮಿತ್ ದ್ರಾವಿಡ್, ಯುವರಾಜ್ ಅರೋರಾ, ಹಾರ್ದಿಕ್ ರಾಜ್, ಆರವ್ ಮಹೇಶ್, ಆದಿತ್ಯ ನಾಯರ್, ಧನುಷ್ ಗೌಡ, ಶಿಖರ್ ಶೆಟ್ಟಿ, ಸಮರ್ಥ್ ನಾಗರಾಜ್, ಕಾರ್ತಿಕೇಯ ಕೆ.ಪಿ, ನಿಶ್ಚಿತ್ ಪೈ.
Published On - 8:08 am, Thu, 21 December 23