KKR ಮಿಚೆಲ್ ಸ್ಟಾರ್ಕ್​ರನ್ನು 24.75 ಕೋಟಿಗೆ ಖರೀದಿಸಿದ್ದೇಕೆ? ಇಲ್ಲಿದೆ ಕಾರಣ

IPL 2024: 2018 ರಲ್ಲಿ ಮಿಚೆಲ್ ಸ್ಟಾರ್ಕ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ 9.40 ಕೋಟಿಗೆ ಕೆಕೆಆರ್​ ತಂಡವೇ ಖರೀದಿಸಿತ್ತು. ಆದರೆ ಗಾಯದ ಕಾರಣ ಅವರು ಟೂರ್ನಿ ಆಡಿರಲಿಲ್ಲ. ಇದೀಗ ಮತ್ತೆ ಆಸೀಸ್ ವೇಗಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ.

KKR ಮಿಚೆಲ್ ಸ್ಟಾರ್ಕ್​ರನ್ನು 24.75 ಕೋಟಿಗೆ ಖರೀದಿಸಿದ್ದೇಕೆ? ಇಲ್ಲಿದೆ ಕಾರಣ
Mitchell Starc
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 21, 2023 | 9:21 AM

ಡಿಸೆಂಬರ್ 19 ರಂದು ದುಬೈನಲ್ಲಿ ನಡೆದ ಐಪಿಎಲ್ (IPL 2024) ಮಿನಿ ಹರಾಜಿನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿತ್ತು. ಕೇವಲ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್​ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬರೋಬ್ಬರಿ 24.75 ಕೋಟಿಗೆ ಖರೀದಿಸಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರ ಎಂಬ ದಾಖಲೆ ಸ್ಟಾರ್ಕ್​ ಪಾಲಾಯಿತು.

ಇದರ ಬೆನ್ನಲ್ಲೇ ಇಷ್ಟೊಂದು ದುಬಾರಿ ಮೊತ್ತಕ್ಕೆ ಮಿಚೆಲ್ ಸ್ಟಾರ್ಕ್​ ಅವರನ್ನು ಕೆಕೆಆರ್ ಯಾಕಾಗಿ ಖರೀದಿಸಿದೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಈ ಎಲ್ಲಾ ಪ್ರಶ್ನೆಗಳಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಉತ್ತರ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗೌತಮ್ ಗಂಭೀರ್, ಕೆಕೆಆರ್ ತಂಡಕ್ಕೆ ಎಕ್ಸ್-ಫ್ಯಾಕ್ಟರ್ ಆಟಗಾರನ ಅವಶ್ಯಕತೆಯಿದೆ. ಅಂತಹ ಬೌಲರ್​ಗಳಲ್ಲಿ ಮಿಚೆಲ್ ಸ್ಟಾರ್ಕ್​ ಕೂಡ ಒಬ್ಬರು. ಹೀಗಾಗಿ ಅವರಿಗಾಗಿ ನಾವು ದುಬಾರಿ ಮೊತ್ತ ನೀಡಲು ಮೊದಲೇ ನಿರ್ಧರಿಸಿದ್ದೆವು.

ಸ್ಟಾರ್ಕ್ ಯಾವುದೇ ಹಂತದಲ್ಲೂ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಬೌಲರ್​ ಎಂಬುದರಲ್ಲಿ ಡೌಟೇ ಇಲ್ಲ. ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿ, ಅಂತಿಮ ಓವರ್‌ಗಳಲ್ಲಿ ಒತ್ತಡವನ್ನು ನಿಭಾಯಿಸಿ ಚೆಂಡೆಸೆಯಬಲ್ಲ ಸಾಮರ್ಥ್ಯ ಸ್ಟಾರ್ಕ್​​ಗೆ ಇದೆ. ಅಷ್ಟೇ ಅಲ್ಲದೆ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸುತ್ತಾರೆ. ಹೀಗಾಗಿಯೇ ಕೆಕೆಆರ್ ದುಬಾರಿ ಮೊತ್ತ ನೀಡಿ ಸ್ಟಾರ್ಕ್ ಅವರನ್ನು ಖರೀದಿಸಿದೆ ಎಂದು ಗಂಭೀರ್ ತಿಳಿಸಿದ್ದಾರೆ.

ಇಲ್ಲಿ ಸ್ಟಾರ್ಕ್​ ಅವರಂತಹ ಅನುಭವಿ ಬೌಲರ್ ಇದ್ದರೆ, ದೇಶೀಯ ಬೌಲರ್​ಗಳಿಗೂ ಹೆಚ್ಚಿನ ಅನುಕೂಲವಾಗಲಿದೆ. ಕಠಿಣ ಸಂದರ್ಭಗಳಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ನಿಮಗೆ ಯಾರಾದರೂ ಬೇಕು. ಆ ಪಾತ್ರವನ್ನು ಸ್ಟಾರ್ಕ್ ನಿರ್ವಹಿಸಲಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿಯೇ ನಾವು ಮಿಚೆಲ್ ಸ್ಟಾರ್ಕ್​ ಖರೀದಿಗೆ ಹೆಚ್ಚಿನ ಒತ್ತು ನೀಡಿದ್ದೆವು ಎಂದು ಗಂಭೀರ್ ತಿಳಿಸಿದ್ದಾರೆ.

ವಿಶೇಷ ಎಂದರೆ 2018 ರಲ್ಲಿ ಮಿಚೆಲ್ ಸ್ಟಾರ್ಕ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ 9.40 ಕೋಟಿಗೆ ಕೆಕೆಆರ್​ ತಂಡವೇ ಖರೀದಿಸಿತ್ತು. ಆದರೆ ಗಾಯದ ಕಾರಣ ಅವರು ಟೂರ್ನಿ ಆಡಿರಲಿಲ್ಲ. ಇದೀಗ ಮತ್ತೆ ಆಸೀಸ್ ವೇಗಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ.

ಇದನ್ನೂ ಓದಿ: IPL 2024: ಐಪಿಎಲ್​ನಲ್ಲಿ ಅತ್ಯಧಿಕ ವೇತನ ಪಡೆಯುವ 10 ಆಟಗಾರರು: ಲಿಸ್ಟ್​ನಲ್ಲಿಲ್ಲ ವಿರಾಟ್ ಕೊಹ್ಲಿ..!

ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ಅನುಕುಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಸುಯ್ಯಾಶ್ ಶರ್ಮಾ, ಹರ್ಷಿತ್ ರಾಣಾ, ಸುನಿಲ್ ನರೈನ್, ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ.

ಕೆಕೆಆರ್​ ಹರಾಜಿನಲ್ಲಿ ಖರೀದಿಸಿದ ಆಟಗಾರರು:

  • ಕೆಎಸ್ ಭರತ್- 50 ಲಕ್ಷ (ಮೂಲ ಬೆಲೆ 50 ಲಕ್ಷ ರೂ.)
  • ಚೇತನ್ ಸಕರಿಯಾ- 50 ಲಕ್ಷ (ಮೂಲ ಬೆಲೆ 50 ಲಕ್ಷ ರೂ.)
  • ಮಿಚೆಲ್ ಸ್ಟಾರ್ಕ್ – 24.75 ಕೋಟಿ (ಮೂಲ ಬೆಲೆ 2 ಕೋಟಿ ರೂ.)
  • ಆಂಗ್ಕ್ರಿಶ್ ರಘುವಂಶಿ – 20 ಲಕ್ಷ (ಮೂಲ ಬೆಲೆ 20 ಲಕ್ಷ ರೂ.)
  • ರಮಣದೀಪ್ ಸಿಂಗ್- 20 ಲಕ್ಷ (ಮೂಲ ಬೆಲೆ 20 ಲಕ್ಷ ರೂ.)
  • ಶೆರ್ಫಾನ್ ರುದರ್‌ಫೋರ್ಡ್- 1.50 ಕೋಟಿ (ಮೂಲ ಬೆಲೆ 1.50 ಕೋಟಿ ರೂ.)
  • ಮನೀಶ್ ಪಾಂಡೆ- 50 ಲಕ್ಷ (ಮೂಲ ಬೆಲೆ 50 ಲಕ್ಷ ರೂ.)
  • ಮುಜೀಬ್ ಉರ್ ರೆಹಮಾನ್- 2 ಕೋಟಿ (ಮೂಲ ಬೆಲೆ 2 ಕೋಟಿ ರೂ.)
  • ಗಸ್ ಅಟ್ಕಿನ್ಸನ್- 1 ಕೋಟಿ (ಮೂಲ ಬೆಲೆ 1 ಕೋಟಿ ರೂ.)
  • ಶಾಕಿಬ್ ಹುಸೇನ್- 20 ಲಕ್ಷ (ಮೂಲ ಬೆಲೆ 20 ಲಕ್ಷ ರೂ.)